D K Shivakumar: ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತದೆ: ಡಿಸಿಎಂ ವ್ಯಂಗ್ಯ

Share the Article

D K Shivakumar: ಬಿಜೆಪಿಯಲ್ಲಿ ಕೆಲವೊಂದು ಖಾಲಿ ಟ್ರಂಕುಗಳಿದೆ. ಅವು ಕೇವಲ ಶಬ್ದ ಮಾಡುತ್ತದೆ. ಬರೀ ಶಬ್ದ ಮಾಡುವವರು ಸಂಸತ್‌ನಲ್ಲಿ ಮಾತನಾಡಿ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವ್ಯಂಗ್ಯ ನೀಡಿದ್ದಾರೆ.

ಬರೀ ಶಬ್ದ ಮಾಡುವವರಿಗೂ ನಾನು ಅನುದಾನದ ವಿಚಾರವಾಗಿ ಎಲ್ಲಾ ಮಾಹಿತಿಗಳನ್ನು ಕಳುಹಿಸಿ ಕೊಡುತ್ತಿದ್ದೇನೆ. ಏಕೆಂದರೆ ಇದುವರೆಗೂ ಯಾರೊಬ್ಬರೂ ಅನುದಾನ ತಂದಿಲ್ಲ. ತರಲು ಆಸಕ್ತಿಯನ್ನೂ ತೋರಿಲ್ಲ. ಪ್ರಧಾನಿಯವರನ್ನೂ ಭೇಟಿ ಮಾಡಿಲ್ಲ. ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗಂತೂ ಏನೇನೂ ತಂದಿಲ್ಲ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

Dharmasthala Case: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ಪದ್ಮಲತಾ, ಮರು ತನಿಖೆಗೆ ಸಹೋದರಿಯಿಂದ SIT ಗೆ ದೂರು ದಾಖಲು

Comments are closed.