Election commission: ಚುನಾವಣಾ ಆಯೋಗದಿಂದ ರಾಹುಲ್ ಗಾಂದಿಗೆ ನೋಟೀಸ್ ಜಾರಿ – ಸಿಎಂ, ಡಿಸಿಎಂ‌ ಏನಂದ್ರು?

Share the Article

Election commission: ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟೀಸ್ ಜಾರಿ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ದಾಖಲಾತಿ ಕೊಡಿ ಅಂತ ನೋಟೀಸ್ ಕೊಟ್ಟಿರೋದು ರೀ. ನೀವೇನು ನೋಟೀಸ್ ಕೊಟ್ಟಿದೆ ಅಂತ ಹೇಳ್ತೀರಾ? ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿ, ದಾಖಲಾತಿಗಳನ್ನ ಕೊಡಿ ಅಂತ ಕೇಳಿದೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇನ್ನು ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟೀಸ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಅವರು ಯಾರು ನೋಟೀಸ್ ಕೊಡೋಕೆ.?ನಾವು ನೋಟೀಸ್ ಕೊಟ್ಟಿದ್ದು. ಯಾವ ಅಫಿಡವಿಟ್ ಬೇಕೋ ಕೊಡಲಿ. ನಾವು ಚುನಾವಣೆ ಗೆದ್ದಿದ್ದೇವೆ. ನೀವು ನೋಟೀಸ್ ಕೊಡೋದಕ್ಕೆ ಹಕ್ಕಿಲ್ಲ. ಕಾನೂನು ಮೂಲಕ ನಾವೇ ಕೊಡುತ್ತೇವೆ ಎಂದು ಹೇಳಿದರು.

ಅಲ್ಲದೆ‌ ಪ್ರಧಾನಿ ಮೋದಿಗಳಿಗೆ ನಿನ್ನೆ ಮನವಿ ಕೊಟ್ಟ ವಿಚಾರ ಹೇಳಿಕೆ ನೀಡಿದ ಡಿಸಿಎಂ ಡಿಕೆಶಿವಕುಮಾರ್, ನಾನು ಪ್ರಧಾನಿಗಳಿಗೆ ವೆಲ್ ಕಮ್ ಭಾಷಣ ಮಾಡಬೇಕಿತ್ತು ಅದು ಆಗಲಿಲ್ಲ. ಹೀಗಾಗಿ ನಮ್ಮ ರಾಜ್ಯದ ಮನವಿಯನ್ನ ಕೊಟ್ಟಿದ್ದೇನೆ. ಬೆಂಗಳೂರು ಎಷ್ಟು ಮುಖ್ಯ, ಭಾರತವನ್ನ ಬೆಂಗಳೂರು ಮೂಲಕ ನೋಡಬೇಕು ಅಂತ ಮೋದಿ ಅವರು ಒಪ್ಪಿಕೊಂಡಿದ್ದಾರೆ ಎಂದರು.

ಬಿಜೆಪಿಯ ಕೆಲವು ಖಾಲಿ ಟ್ರಂಕ್ ಗಳು ಜಾಸ್ತಿ ಶಬ್ದ ಮಾಡ್ತಿವೆ. ಬೆಂಗಳೂರಿಗೆ ಬಿಜೆಪಿ ಸಂಸದರು ಒಂದು ರೂಪಾಯಿ ಕೊಡುಗೆ ಕೊಟ್ಟಿಲ್ಲ. ಬಿಜೆಪಿಯವರು ಸಂಸದರಾಗಿ ಮೋದಿ ಅವರನ್ನ ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿಗೆ ಹಣ ತಂದಿಲ್ಲ. ಬಿಜೆಪಿ ಅವರು ಮೊದಲು ಬೆಂಗಳೂರು ಕೊಡುಗೆಗೆ 10 ರೂಪಾಯಿ ತನ್ನಿ ಅಂತ ನಾನು ಹೇಳ್ತಿದ್ದೇನೆ ಎಂದರು.

ಬಿಜೆಪಿ ಸಂಸದರು ನಮ್ಮ ರಾಜ್ಯಕ್ಕೆ ಏನು ತಂದಿಲ್ಲ. ಹೀಗಾಗಿ ನಾನೇ ನಿನ್ನೆ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಅವರು ಒಪ್ಪಿದ್ದಾರೆ. ನನ್ನ ಮನವಿಗೆ ಸ್ಪಂದನೆ ಮಾಡೋ ಭರವಸೆ ನನಗೆ ಇದೆ ಎಂದು ಡಿಸಿಎಂ‌ ಪ್ರತಿಕ್ರಿಯೆ ನೀಡಿದರು.Yellow metro line: ಹಳದಿ ಮೆಟ್ರೋ ಫುಲ್ ರಶ್ – ಟ್ರಾಫಿಕ್ ಗೆ ಬೇಸತ್ತಿದ್ದ ಜನಕ್ಕೆ ವರದಾನವಾದ ಮೆಟ್ರೋ

Comments are closed.