Dharmasthala Case: ಧರ್ಮಸ್ಥಳ ಗುಂಪು ಘರ್ಷಣೆ: 6 ಜನರ ಬಂಧನ

Share the Article

Dharmasthala Case: ಧರ್ಮಸ್ಥಳದ ಪಾಂಗಳ ಕ್ರಾಸ್‌ ಬಳಿ ಎರಡು ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರು ಜನರನ್ನು ಬಂಧನ ಮಾಡಿದ್ದಾರೆ. ಈ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳ ಪೊಲೀಸರು 6 ಜನರನ್ನು ಬಂಧನ ಮಾಡಿದ್ದು, ಇನ್ನುಳಿದ 27 ಜನರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪದ್ಮಪ್ರಸಾದ್‌, ಸುಹಾಸ್‌, ಗುರುಪ್ರಸಾದ್‌, ಶಶಿಕುಮಾರ್‌, ಕಲಂದರ್‌, ಚೇತನ್‌ ಬಂಧಿತರು. ಸುಮೋಟೋ ಪ್ರಕರಣ ದಾಖಲಿಸಿದ ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅನಾಮಿಕ ತೋರಿಸಿದ ಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ಮಾಡುತ್ತಿದ್ದು ಈ ಕುರಿತು ಯೂಟ್ಯೂಬರ್‌ ವರದಿ, ನಡೆ ಕುರಿತು ಧರ್ಮಸ್ಥಳ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಗಲಾಟೆ ನಡೆದಿದ್ದು, ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ನಂತರ ಯೂಟೂಬರ್ಸ್‌ ಮೇಲೆ ಹಲ್ಲೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Comments are closed.