Air India Plane Crash: ಭೀಕರ ಅಪಘಾತದ ನಂತರ ಏರ್ ಇಂಡಿಯಾದಿಂದ ಪೈಲಟ್ಗಳಿಗೆ ಮಹತ್ವದ ನಿರ್ಧಾರ

Air India Plane Crash: ಅಹಮದಾಬಾದ್ನಲ್ಲಿ ಏರ್ಇಂಡಿಯಾ ಭೀಕರ ಅಪಘಾತದ ನಂತರ ಇದೀಗ ಏರ್ಇಂಡಿಯಾ ತನ್ನ ಪೈಲಟ್ಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಹತ್ವದ ನಿರ್ಧಾರವನ್ನು ಪ್ರಕಟ ಮಾಡಿದೆ.

ತನ್ನ ಪೈಲಟ್ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಐತಿಹಾಸಿನ ನಿರ್ಧಾರವನ್ನು ಘೋಷಣೆ ಮಾಡಿದೆ. ಪೈಲಟ್ಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದ ಏರ್ಇಂಡಿಯಾ ಸಿಬ್ಬಂದಿಗೆ ಅನುಕೂಲ ಮಾಡಿದೆ. ಈ ಬದಲಾವಣೆಯು ಆಗಸ್ಟ್ 10,2025 ರಿಂದ ಜಾರಿಗೆ ಬಂದಿದ್ದು, ವಿಸ್ತಾರಾ ಏರ್ಲೈನ್ಸ್ನೊಂದಿಗಿನ ವಿಲೀನದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಏರ್ಇಂಡಿಯಾದ ಪೈಲಟ್ಗಳ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂಚ 65 ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಗಳ ವರೆಗೆ ಏರಿಕೆ ಮಾಡಲಾಗಿದೆ.
ಏರ್ಇಂಡಿಯಾ ತನ್ನ ಕಾರ್ಯಾಚರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಕ್ರಮವು ಇತ್ತೀಚಿನ ಅಪಘಾತದ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ. ಅನುಭವಿ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಮತ್ತು ವಿಲೀನದ ನಂತರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮವಾಗಿದೆ.
Comments are closed.