Oparation Sindhoor ನಲ್ಲಿ ಭಾರತ ಹೊಡೆದುರುಳಿಸಿದ ಪಾಕ್‌ ಜೆಟ್‌ ಗಳು ಎಷ್ಟು? ಅಧಿಕೃತ ಮಾಹಿತಿ ಹಂಚಿಕೊಂಡ ವಾಯುಸೇನೆ!!

Share the Article

Oparation Sindhoor : ಭಾರತದ ವಾಯು ರಕ್ಷಣಾ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳು ಐದು ಪಾಕಿಸ್ತಾನಿ ಫೈಟರ್ ಜೆಟ್ಗಳು ಮತ್ತು ಎಇಡಬ್ಲ್ಯು / ಇಎಲ್‌ಐಎನ್ಟಿ ವಿಮಾನವನ್ನು ನಾಶಪಡಿಸಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಶನಿವಾರ ಹೇಳಿದ್ದಾರೆ.

ಹೌದು, ಆಪರೇಷನ್ ಸಿಂಧೂರ್ ಸಮಯದಲ್ಲಿ ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಇನ್ನೊಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಶನಿವಾರ ಅಧಿಕೃತವಾಗಿ ಹೇಳಿದ್ದಾರೆ. ಮೆಗಾ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಪಡೆಗೆ ಆದ ಹಾನಿಯ ಪ್ರಮಾಣವನ್ನು ಇದೇ ಮೊದಲ ಬಾರಿಗೆ ಭಾರತದ ವಾಯುಪಡೆ ಬಹಿರಂಗವಾಗಿ ಹೇಳಿದೆ.

ಐದು ಪಾಕಿಸ್ತಾನಿ ಫೈಟರ್‌ ಜೆಟ್‌ ವಿಮಾನಗಳು, ಒಂದು ಎಇಡಬ್ಲ್ಯು ವಿಮಾನವನ್ನು ಐಎಎಫ್‌ ಎಸ್‌ 400 ಮಿಸೈಲ್‌ ಬಳಸಿ ಹೊಡೆದುರುಳಿಸಲಾಯಿತು ಎಂದು ವಾಯುಸೇನಾಪಡೆಯ ಮುಖ್ಯಸ್ಥರು ಖಚಿತಪಡಿಸಿದ್ದಾರೆ. ಭಾರತದ ಏರ್‌ ಛೀಫ್‌ ಮಾರ್ಷಲ್‌ ಎಪಿ ಸಿಂಗ್‌ ಈ ಬಗ್ಗೆ ಮಾತನಾಡುತ್ತಾ, ನಾವು ಈ ವಿಷಯವನ್ನು ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಿದ್ದೇವೆ. ಇದರ ಯಶಸ್ಸಿಗೂ ಹಾಗೂ ಎಲ್ಲಾ ಪ್ರಮಾದಗಳಿಗೂ ನಾವೇ ಹೊಣೆಗಾರರಾಗುವಂಥಾ ಜವಾಬ್ದಾರಿ ಹೊತ್ತಿದ್ದೆವು. ಸಮಯ ಬಂದಾಗ ಈ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳುತ್ತೇನೆ. ಇನ್ನೂ ಅದಕ್ಕೆ ಸೂಕ್ತ ಕಾಲ ಬಂದಿಲ್ಲ ಅಥವಾ ನಾನು ಅದಕ್ಕೆ ಸಿದ್ದನಾಗಿಲ್ಲ ಎನಿಸುತ್ತದೆ ಎಂದಿದ್ದಾರೆ.

ಅಲ್ಲದೆ ನಾವು ಕನಿಷ್ಠ ಐದು ಫೈಟರ್‌ಗಳ ಕಿಲ್‌ ಕನ್ಫರ್ಮ್‌ ಮಾಡುತ್ತೇವೆ. ಅದರೊಂದಿಗೆ ಒಂದು ದೊಡ್ಡ ಏರ್‌ಕ್ರಾಫ್ಟ್‌ ಕೂಡ ಪತನವಾಗಿದೆ. ಇದು ಅದು ELINT ವಿಮಾನ ಅಥವಾ AEW &C ವಿಮಾನವಾಗಿರಬಹುದು, ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದಲೇ ಹೊಡೆದುಹಾಕಲಾಗಿದೆ. ಸರ್ಫೇಸ್‌ ಟು ಏರ್‌ ಕಿಲ್‌ ವಿಚಾರದಲ್ಲಿ ನಾವು ಮಾತನಾಡಬಹುದಾದ ಅತಿದೊಡ್ಡ ದಾಳಿ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಪಾಯಿಂಟ್‌ ನಂ.16, ಬಾಹುಬಲಿ ಇರುವ ರತ್ನಗಿರಿ ಬೆಟ್ಟದ ಕೆಳಗೆ ಶೋಧ

Comments are closed.