Dharmasthala:ಅಪ್ರಾಪ್ತ ಬಾಲಕಿ ಶವ ಹೂಳಿದ್ದ ಪ್ರಕರಣ- ಆಕೆಯ ಸ್ಕರ್ಟ್, ಒಳ ಉಡುಪು ಕಾಣೆಯಾಗಿತ್ತು !! ದೂರುದಾರ ಸ್ಪೋಟಕ ಹೇಳಿಕೆ

Share the Article

Dharmasthala : ಅಪ್ರಾಪ್ತ ಶಾಲಾ ಬಾಲಕಿಶವವನ್ನು ಸ್ಕೂಲ್ ಬ್ಯಾಗ್ ಜೊತೆ ಹೂಳಲಾಗಿತ್ತು ಎಂದು ಸಾಕ್ಷೀದಾರನ ಹೇಳಿಕೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಬೋಳಿಯಾರ್‌ನಲ್ಲಿ ಅನಾಮಿಕ ತೋರಿದ ಸಮಾಧಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿತು. ಅದರ ಜೊತೆಗೆ ಇನ್ನೂ ನಾಲ್ಕು ಸ್ಥಳಗಳಲ್ಲಿ ನೆಲ ಅಗೆಯಲಾಯಿತು. ಆದರೆ ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಅಂದಹಾಗೆ ಈ ಕುರಿತು ಸ್ಪೋಟಕ ಮಾಹಿತಿಯನ್ನು ತನಿಖೆಯವರಿಗೆ ತಿಳಿಸಿದ್ದ ದೂರುದಾರ, 2010 ರಲ್ಲಿ ಕಲ್ಲೇರಿಯ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿ 12 ರಿಂದ 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ಶವವಾಗಿ ಬಿದ್ದಿರುವುದು ಕಂಡುಬಂದ ಒಂದು ಘಟನೆ ನನ್ನನ್ನು ಕಾಡುತ್ತಿದೆ. ಅವಳು ಶಾಲಾ ಸಮವಸ್ತ್ರ ಧರಿಸಿದ್ದಳು, ಆದರೆ ಅವಳ ಸ್ಕರ್ಟ್ ಮತ್ತು ಒಳ ಉಡುಪು ಕಾಣೆಯಾಗಿತ್ತು. ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿದ ಗುರುತುಗಳಿದ್ದವು. ಒಂದು ಗುಂಡಿಯನ್ನು ಅಗೆದು ಅವಳ ಶಾಲಾ ಬ್ಯಾಗ್‌ನೊಂದಿಗೆ ಹೂಳಲು ನನ್ನನ್ನು ಕೇಳಲಾಯಿತು ಎಂದು ತಿಳಿಸಿದ್ದಾನೆ.

ಸಾಕ್ಷೀದಾರನ ಹೇಳಿಕೆ ಹಿನ್ನೆಲೆಯಲ್ಲಿಈ ಸ್ಥಳದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಿದರು. ಆದರೆ ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಅಂದಹಾಗೆ ವಿಶೇಷ ತನಿಖಾ ತಂಡಕ್ಕೆ (SIT) ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ, ಇದರಿಂದ FIR ಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. “ಭಾರತೀಯ ನಾಗರಿಕ ಭದ್ರತಾ ಸಂಹಿತೆ (BNSS), 2023 ರ ಸೆಕ್ಷನ್ 2(1)(u) ಅಡಿಯಲ್ಲಿ, ಜುಲೈ 19 ರಂದು ರಚಿಸಲಾದ ವಿಶೇಷ ತನಿಖಾ ತಂಡ (SIT)ವನ್ನು ‘ಪೊಲೀಸ್ ಠಾಣೆ’ ಎಂದು ಘೋಷಿಸಲಾಗಿದೆ.

ಧರ್ಮಸ್ಥಳ: ಮಾಧ್ಯಮ ಮೇಲಿನ ಹಲ್ಲೆಗೆ ದಲಿತ ಸಂಘರ್ಷ ಸಮಿತಿ ಆಕ್ರೋಶ; ಅಟ್ರಾಸಿಟಿ ಕೇಸು ಹಾಕಿ, ಇಲ್ಲಾ ಬೃಹತ್ ಪ್ರತಿಭಟನೆ ಎಚ್ಚರಿಕೆ 

Comments are closed.