Minimum Support Rice: ರೈತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ

Minimum Support Rice: ರೈತರಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೃಷಿ ಮತ್ತು ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ. ಈ ಕುರಿತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಕೃಷಿ ಮತ್ತು ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.

ಸೆಪ್ಟೆಂಬರ್‌ನಿಂದ ನೋಂದಣಿ ಕಾರ್ಯ ನಡೆಯಲಿದೆ. ಖರೀದಿ ಜನವರಿಯಿಂದ ಪ್ರಾರಂಭ ಆಗಲಿದ್ದು, ಮುಂದಿನ ಮಾರ್ಚ್‌ವರೆಗೂ ಉತ್ಪನ್ನಗಳ ಖರೀದಿ ನಡೆಯಲಿದೆ. ರೈತರಿಂದ ಖರೀದಿಯನ್ನು ಬೇಗ ಮಾಡುವ ಯೋಜನೆ ಇದೆ. ನೇರವಾಗಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇವೆ. ಸಿರಿಧಾನ್ಯಗಳಿಗೂ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ರಾಗಿಗಿಎ ಇರುವ ಬೆಲೆಯನ್ನೇ ಸಿರಿಧಾನ್ಯಗಳಿಗೆ ಕೊಡಲಿದ್ದೇವೆ. ಸಿರಿಧಾನ್ಯಗಳಿಗೆ ಹೆಚ್ಚುವರಿಯಾಗಿ 114ರೂ. ಕೊಡುವ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾಪ ನೀಡಿದ್ದೇವೆ. ಡಿಜಿಟಲ್ ಮೂಲಕ ಬೆಳೆ ಸರ್ವೆ ಮಾಡಿಸಿ ಬೆಂಬಲ ಬೆಲೆ ಕೊಡಲಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
4,846 ರೂ.ಗೆ ಕ್ವಿಂಟಾಲ್ ರಾಗಿ ಖರೀದಿ ಮಾಡಲಿದ್ದೇವೆ. ಈ ಬಾರಿ 596 ರೂ. ಹೆಚ್ಚಳ ಮಾಡಿದ್ದೇವೆ. ಒಬ್ಬರಿಂದ ಹೆಚ್ಚು ಅಂದ್ರೆ 50 ಕ್ವಿಂಟಾಲ್ ಖರೀದಿ ಮಾಡಲಿದ್ದೇವೆ. ರೈತರಿಂದ 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿ ಮಾಡುತ್ತೇವೆ. ಪ್ರತಿ ಕ್ವಿಂಟಾಲ್ ಜೋಳಕ್ಕೆ ಈ ವರ್ಷ 2369 ರೂ. ಕೊಡುತ್ತೇವೆ. ಈ ವರ್ಷ 69 ರೂ. ಹೆಚ್ಚುವರಿಯಾಗಿ ಜೋಳಕ್ಕೆ ಕೊಡುತ್ತಿದ್ದೇವೆ. ಭತ್ತವನ್ನು ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.
Comments are closed.