Dharmasthala: ಧರ್ಮಸ್ಥಳ: 13ನೇ ಸ್ಥಳ ಶೋಧ ಇಂದಿಲ್ಲ, ಮಾಸ್ಕ್‌ಮ್ಯಾನ್‌ನ ತೀವ್ರ ವಿಚಾರಣೆ

Share the Article

Belthangady: ಧರ್ಮಸ್ಥ ಶವ ಹೂತು ಹಾಕಿದ ಪ್ರಕರಣದಲ್ಲಿ ಪಾಯಿಂಟ್‌ ಮಾಡಿದ 13ರಲ್ಲಿ ಇಂದು ಯಾವುದೇ ಶೋಧ ಕಾರ್ಯ ಆಗಿಲ್ಲ ಎನ್ನಲಾಗಿದೆ. ಎಸ್‌ಐಟಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಅಡಿಶನಲ್‌ ಕಮಿಷನರ್‌ ಸ್ಟೆಲ್ಲಾ ವರ್ಗೀಸ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಡತ ವಿಲೇವಾರಿಯಲ್ಲಿ ಮಾಡುತ್ತಿದ್ದ ಎಂದು ವರದಿಯಾಗಿದೆ. 8 ದಿನಗಳ ಶೋಧ ಕಾರ್ಯಗಳ ವಿಡಿಯೋ, ಫೋಟೋ ಹಾಗೂ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ವಕೀಲರ ಜೊತೆ ಎಸ್‌ಐಟಿ ಕಚೇರಿಗೆ ಬಂದ ದೂರುದಾರ ಮಾಸ್ಕ್‌ಮ್ಯಾನ್‌ ನನ್ನು 2 ಗಂಟೆ 45 ನಿಮಿಷ ಎಸ್‌ಐಟಿ ವಿಚಾರಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಹತ್ತಕ್ಕೂ ಹೆಚ್ಚು ಜನರನ್ನು ಈಗಲೂ ವಿಚಾರಣೆಗೆ ಕರೆಸಲಾಗುತ್ತಿದ್ದು, ಪ್ರಕರಣ ಸಂಬಂಧ ಎಲ್ಲಾ ಮಾಹಿತಿಗಳ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Dinesh Gundurao:‌ ಧರ್ಮಸ್ಥಳ ಪ್ರಕರಣದಲ್ಲಿ ಎಡಪಂಥೀಯ ಸಂಘಟನೆಗಳ ಒತ್ತಡದಿಂದ ಎಸ್‌ಐಟಿ ರಚನೆ: ಸಚಿವ ದಿನೇಶ್‌ ಗುಂಡೂರಾವ್

Comments are closed.