Dinesh Gundurao: ಧರ್ಮಸ್ಥಳ ಪ್ರಕರಣದಲ್ಲಿ ಎಡಪಂಥೀಯ ಸಂಘಟನೆಗಳ ಒತ್ತಡದಿಂದ ಎಸ್ಐಟಿ ರಚನೆ: ಸಚಿವ ದಿನೇಶ್ ಗುಂಡೂರಾವ್

Dinesh Gundurao: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಪಂಥೀಯ ಸಂಘಟನೆಗಳ ಒತ್ತಡದಿಂದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಯಾವುದೇ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ಗಳು ಈ ಘಟನೆಯನ್ನು ವೈಭವೀಕರಣೆ ಮಾಡುವುದು ಸರಿಯಲ್ಲ. ಹಾಗೇ ಶಾಸಕ ಸುನೀಲ್ ಕುಮಾರ್ ಅವರು ಹಿಂದೂ ಧರ್ಮದ ಕುರಿತು ಧಾರ್ಮಿಕ ಸ್ಥಳದ ಕುರಿತು ಅಪಪ್ರಚಾರ ಆಗುತ್ತಿದೆ ಎನ್ನುವುದು ಯಾವ ಆಧಾರದಲ್ಲಿ ಮಾತನಾಡುತ್ತಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: Operation sindoor: ಆಪರೇಷನ್ ಸಿಂಧೂರ್ ಹೆಸರಲ್ಲಿ ಸೀರೆ ನೇಯ್ದ ನೇಕಾರ!
Comments are closed.