Operation sindoor: ಆಪರೇಷನ್ ಸಿಂಧೂರ್ ಹೆಸರಲ್ಲಿ ಸೀರೆ ನೇಯ್ದ ನೇಕಾರ!

Operation sindoor: ಪಹಲ್ಲಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation sindoor) ಕಾರ್ಯಾಚರಣೆಗೆ ಗದಗಿನ ನೇಕಾರರೊಬ್ಬರು ಕೈಮಗ್ಗದ ಸೀರೆಯಲ್ಲಿ ಆಪರೇಷನ್ ಸಿಂಧೂರ್ ಎಂದು ಬರೆಯುವ ಮೂಲಕ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ಸೀರೆಯ ಬಾರ್ಡ್ರನಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣದಲ್ಲಿ ಮೂರು ಯುದ್ಧ ವಿಮಾನಗಳನ್ನು ಚಿತ್ರಿಸಲಾಗಿದೆ. ಶುದ್ಧ ಹತ್ತಿಯಿಂದ ಮತ್ತು ರೇಷ್ಮೆ ಬಾರ್ಡ್ರನೊಂದಿಗೆ ಈ ಸೀರೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಗಜೇಂದ್ರಘಡದ ಶುದ್ಧ ಹತ್ತಿ ಬಳಕೆ ಮಾಡಿ ತಯಾರಿಸುವ ಪಟ್ಟೇದಂಚಿನ ಸೀರೆಗಳ ಸಾಲಿಗೆ ಈ ಸೀರೆಯೂ ಸೇರಿದೆ.
Comments are closed.