Su From So: ‘ಸು ಫ್ರಂ ಸೋ’ ಸಿನಿಮಾದ ಬಜೆಟ್ ಇಷ್ಟೊಂದು ಕಮ್ಮಿಯಾ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಜ್ ಬಿ ಶೆಟ್ಟಿ

Share the Article

Su From So: ಕನ್ನಡ ಚಿತ್ರರಂಗ ಕಳೆದ ಆರು ತಿಂಗಳಿನಿಂದ ಒಂದು ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿತ್ತು. ಇದಕ್ಕೆ ಭರವಸೆಯ ಬೆಳಕೊಂದು ಮೂಡಿದೆ. ಅದು “ಸು ಫ್ರಮ್‌ ಸೋ’. ರಾಜ್‌ ಬಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಮೂಡಿಬಂದಿರುವ “ಸು ಫ್ರಮ್‌ ಸೋ’ ಮತ್ತೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಇದು ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ್ದು ದುಪ್ಪಟ್ಟು ಗಳಿಕೆಯತ್ತ ಮುನ್ನುಗ್ಗುತ್ತಿದೆ. ಇದೀಗ ಚಿತ್ರ ನಿರ್ಮಾಣ ಅಪಕರಾದ ರಾಜಬೀಶೆಟ್ಟಿ ಅವರು ಈ ಸಿನಿಮಾ ತೆಗೆಯಲು ಒಟ್ಟು ಎಷ್ಟು ಖರ್ಚಾಗಿತ್ತು ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ.

ಹೌದು, “ಸು ಫ್ರಮ್‌ ಸೋ” ಚಿತ್ರದ ಬಗ್ಗೆ ಗುರುವಾರದವರೆಗೂ ಹೆಚ್ಚು ಸುದ್ದಿಯೇ ಇರಲಿಲ್ಲ. ಯಾವಾಗ ಚಿತ್ರ ಶುಕ್ರವಾರ ಬಿಡುಗಡೆಯಾಗಿ ಚಿತ್ರ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಹೊರಬಿತ್ತೋ, ಅಲ್ಲಿಂದ ಲೆಕ್ಕಾಚಾರವೇ ಬದಲಾಗಿದೆ. ಇದೀಗ ಸಿನಿಮಾ ಕರ್ನಾಟಕದ ಗಡಿ ದಾಟಿ, ಕೇರಳ ಹಾಗೂ ಆಂಧ್ರ-ತೆಲಂಗಾಣಗಳಿಗೂ ಕಾಲಿಟ್ಟಿದೆ. ಹೊಸಬರ ಚಿತ್ರವೊಂದಕ್ಕೆ ಈ ರೀತಿಯ ಗಳಿಕೆ ಆಗುತ್ತಿರುವುದು ಹಲವರ ಹುಬ್ಬೇರಿಸಿದೆ.

ಇನ್ನು ಈ ನಡುವೆ ಸಿನಿಮಾದ ಬಜೆಟ್ ಬಗ್ಗೆ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು, ರಾಜ್ ಬಿ ಶೆಟ್ಟಿ, ಇದೀಗ ಬಜೆಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಸು ಫ್ರಂ ಸೋ’ ಸಿನಿಮಾವನ್ನು ಕೇವಲ 1.50 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಿನ್ನೆಯಷ್ಟೆ ಹೈದರಾಬಾದ್ನಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್ ಬಿ ಶೆಟ್ಟಿಗೆ ಅಲ್ಲಿಯೂ ಇದೇ ಪ್ರಶ್ನೆ ಎದುರಾಗಿದೆ. ‘ನಿಮ್ಮ ಸಿನಿಮಾದ ಬಜೆಟ್ ಕೇವಲ 1.50 ಕೋಟಿ ರೂಪಾಯಿಗಳಂತಲ್ಲಾ, ಇದು ನಿಜವೇ?’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಶೆಟ್ರು, ನಮ್ಮಲ್ಲಿ ಕೆಲವು ಒಳ್ಳೆಯ ಮತ್ತು ಬ್ಯುಸಿ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಮಂದಿ ರಂಗಭೂಮಿ ಹಿನ್ನೆಲೆಯ, ಅನುಭವಿ ಕಲಾವಿದರನ್ನು ಬಳಸಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅವರಿಗೆಲ್ಲ ಒಳ್ಳೆಯ ಸಂಭಾವನೆಯನ್ನೇ ಕೊಟ್ಟಿದ್ದೇವೆ. ಇನ್ನು ಸಂಗೀತ, ಪೋಸ್ಟ್ ಪ್ರೊಡಕ್ಷನ್ಗೆಲ್ಲ ಸಾಕಷ್ಟು ಹಣ ಖರ್ಚಾಗಿದೆ. ನಿಖರವಾಗಿ ಹೇಳುವುದಾದರೆ ನಮ್ಮ ನಿರ್ಮಾಣ ವೆಚ್ಚವೇ 4.50 ಕೋಟಿ ಆಗಿದೆ. ಅದರ ಮೇಲೆ ಪ್ರಚಾರಕ್ಕೆ ಸುಮಾರು 1 ಕೋಟಿ ವರೆಗೂ ಖರ್ಚಾಗಿದೆ’ ಎಂದಿದ್ದಾರೆ.

ಅಲ್ಲಿಗೆ, ಸ್ವತಃ ರಾಜ್ ಬಿ ಶೆಟ್ಟಿಯವರೇ ಹೇಳಿರುವಂತೆ ಸಿನಿಮಾಕ್ಕೆ 5.50 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗಿ 13 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಕಿದ ಬಜೆಟ್ನ 10 ಪಟ್ಟು ಲಾಭವನ್ನು ಈಗಾಗಲೇ ಸಿನಿಮಾ ಗಳಿಸಿದೆ.

ಇದನ್ನೂ ಓದಿ: PM Modi : ಪ್ರಧಾನಿ ಮೋದಿಗೆ ಪ್ರತಿ ವರ್ಷವೂ ರಾಖಿ ಕಟ್ತಾರೆ ಈ ಪಾಕಿಸ್ತಾನಿ ಮಹಿಳೆ – ಯಾರು ಈ ಲೇಡಿ?

Comments are closed.