Samantha: ಮನೆಯ ಟೆರೆಸ್ ಮೇಲೆ ಸಮಂತಾ ಚಿತ್ರ ಬಿಡಿಸಿದ ಅಭಿಮಾನಿ! ಸಮಂತಾ ದಿಲ್ ಖುಷ್!

Share the Article

Samantha: ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರನ್ನು ಮೆಚ್ಚಿಸಲು ಅವರ ಮೇಲಿನ ಅಭಿಮಾನ ಗೌರವದಿಂದ ಹಲವು ಕಾರ್ಯ ಮಾಡ್ತಾರೆ. ಅಂತೆಯೇ ಇದೀಗ ಸಮಂತಾ ಅಭಿಮಾನಿಯೊಬ್ಬ ಮನೆಯ ಮೇಲ್ಛಾವಣಿ ಪೂರ್ತಿ ಸಮಂತಾ (Samantha) ಚಿತ್ರ ಬಿಡಿಸಿದ್ದಾನೆ.

ಅಭಿಮಾನಿ ವಿಶಾಲವಾದ ತನ್ನ ಮನೆಯ ಟೆರೆಸ್ (Terrace) ಮೇಲೆ ಸಮಂತಾಳ ಸುಂದರ ಪೇಂಟಿಂಗ್ (Painting) ಮಾಡಿಸಿದ್ದಾನೆ. ರಮಣೀಯ ಗಿಡ ಮರಗಳ ಮಧ್ಯೆ ಬಿಳಿ ಬಣ್ಣದಲ್ಲಿ ವಿಶಾಲವಾದ ಪೇಂಟಿಂಗ್ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾನೆ ಅಭಿಮಾನಿ.

ಅಭಿಮಾನಿಗಳು ತೋರಿಸುವ ಪ್ರೀತಿ ಎಷ್ಟೋ ಸಾರಿ ಅವರ ನೆಚ್ಚಿನ ನಟ ನಟಿಯರವರೆಗೂ ತಲುಪೋದಿಲ್ಲ. ಆದರೆ ಅಭಿಮಾನಿಯ ಶ್ರಮ ಮತ್ತು ಪ್ರೀತಿ ಇದೀಗ ಸಮಂತಾಗೆ ತಲುಪಿದೆ. ಈ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಶೇರ್ ಮಾಡಿದ್ದಾರೆ. ʼಇದು ನಂಬಲಸಾಧ್ಯ ಕೆಲಸ, ನಿಮ್ಮ ಸಮಯ ಹಾಗೂ ಪ್ರಯತ್ನಕ್ಕೆ ತುಂಬಾ ಧನ್ಯವಾದ’ ಎಂದಿದ್ದಾರೆ. ಅಲ್ಲದೇ ಕಷ್ಟಪಟ್ಟು ಸಮಂತಾ ಚಿತ್ರ ಬಿಡಿಸಿದ ಕಲಾವಿದನ ಕೆಲಸ ಸಮಂತಾಳ ಮೂವತ್ತೇಳು ಮಿಲಿಯನ್ ಫಾಲೋವರ್ಸ್‌ ಅನ್ನು ತಲುಪಿದೆ.

ಇದನ್ನೂ ಓದಿ: Dharmasthala Case: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ – ಸಿಎಂ, ಗೃಹ ಸಚಿವ ಪರಮೇಶ್ವರ್ ಏನ್‌ ಹೇಳಿದ್ರು?

Comments are closed.