Yadagiri : ಮುಸ್ಲಿಂ ಯುವಕ ದೀಕ್ಷೆ ಪಡೆದು ಲಿಂಗಾಯತ ಮಠದ ಸ್ವಾಮಿಯಾಗಿದ್ದು ಏಕೆ ಗೊತ್ತೆ?

Share the Article

Yadagiri: ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆಯ ಚೌಡಹಳ್ಳಿಯಮಠದ ‌ಪೀಠಾಧಿಪತಿಯಾಗಿದ್ದ ನಿಜಲಿಂಗಸ್ವಾಮೀಜಿ ((Nijalinga Swamiji) ಮುಸ್ಲಿಂಸಮುದಾಯಕ್ಕೆ ಸೇರಿದವರು ಎಂದು ತಡವಾಗಿ ತಿಳಿದುಬಂದಿದ್ದು, ಗ್ರಾಮಸ್ಥರ ವೀರಯೋಧದ ಬೆನ್ನಲ್ಲೇ ಅವರು ಪೀಠಕ್ಕೆ ಆಗ ಮಾಡಿ ತೆರಳಿದ್ದಾರೆ. ಹಾಗಿದ್ದರೆ ಅವರು ಮುಸ್ಲಿಮ್ ಆಗಿದ್ದುಕೊಂಡು ಹಿಂದೂ ಮಠದ ಸ್ವಾಮೀಜಿ ಆಗಿದ್ದೇಕೆ? ಸನ್ಯಾಸತ್ವದ ಕಡೆ ಒಲವು ಬಂದದ್ದು ಹೇಗೆ? ಇಲ್ಲಿದೆ ಡಿಟೈಲ್ಸ್.

ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿ, ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದರು. ನಿಜಲಿಂಗ ಸ್ವಾಮೀಜಿ ಎಂದು ಅವರಿಗೆ ಮರುನಾಮಕರಣ ಮಾಡಲಾಗಿತ್ತು. ತಮ್ಮ ಪೂರ್ವಾಶ್ರಮದಲ್ಲಿ ಮುಸ್ಲಿಂ ವ್ಯಕ್ತಿಯಾಗಿದ್ದ ಎಂಬುದು ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಪೀಠ ತ್ಯಾಗ ಮಾಡಿ ಎಂದ ಕಾರಣಕ್ಕಾಗಿ ಅವರು ಎಲ್ಲವನ್ನು ತ್ಯಜಿಸಿ ಮರಳಿ ಊರಿಗೆ ಹೋಗಿದ್ದರು. ಘಟನೆ ಸಂಬಂಧ ಮಹ್ಮದ್ ನಿಸಾರಗೆ ಹೈಸ್ಕೂಲನಲ್ಲಿ ಪಾಠ ಮಾಡಿದ್ದ ಶಿಕ್ಷಕ ಮಹೇಶ ಬಡಿಗೇರ್ ಮಾತನಾಡಿದ್ದಾರೆ.

ಕಾಳಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ ನಿಸಾರ್, ತಮ್ಮ ಶಿಕ್ಷಕ ಮಹೇಶ್ ಬಡಿಗೇರ್ ಅವರ ಪ್ರಕಾರ, ಎಂಟನೇ ತರಗತಿಯಲ್ಲಿದ್ದಾಗಲೇ ಬಸವಣ್ಣನವರ ಸುಮಾರು 300 ವಚನಗಳನ್ನು ಬರೆಯುತ್ತಿದ್ದರು. ಬಸವ ತತ್ವದಲ್ಲಿ ಗಾಢ ಆಸಕ್ತಿ ಹೊಂದಿದ್ದ ನಿಸಾರ್, ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರೂ, ಯಾವಾಗಲೂ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿ, ಓದಿನ ಜೊತೆಗೆ ಲಿಂಗ ಪೂಜೆ ಮತ್ತು ವಚನಗಳ ಜಪದಲ್ಲಿ ತೊಡಗಿಕೊಂಡಿದ್ದರು.

ಆದರೆ, ನಿಸಾರ್‌ನ ಈ ಆಧ್ಯಾತ್ಮಿಕ ಒಲವಿಗೆ ಅವರ ಧರ್ಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರಂತೆ. ಆದಾಗ್ಯೂ, 2020ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾದ ನಿಸಾರ್, ಲಿಂಗ ದೀಕ್ಷೆ ಪಡೆದ ಬಳಿಕ ಕಾವಿ ಬಟ್ಟೆ ಧರಿಸಿ ಶಾಲೆಗೆ ಅಂಕಪಟ್ಟಿ ಪಡೆಯಲು ಬಂದಿದ್ದರು. ‘ನಿಸಾರ್ ಒಳ್ಳೆಯ ಹುಡುಗ, ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿಯಿರುವವನು, ಎಂದು ಶಿಕ್ಷಕ ಮಹೇಶ್ ಬಡಿಗೇರ್ ಹೇಳಿದ್ದಾರೆ.

ಇದನ್ನು ಓದಿ: Donald Trump: ಟ್ರಂಪ್ ಸುಂಕದ ಆಟ – ಯಾವೆಲ್ಲಾ ವಸ್ತುಗಳು ಆಗಲಿದೆ ದುಬಾರಿ ? ಯಾವುದೆಲ್ಲಾ ಹೊರೆ?

Comments are closed.