Top 10 safest cities in India 2025 list: 2025ರಲ್ಲಿ ಭಾರತದ ಟಾಪ್ 10 ಸುರಕ್ಷಿತ ನಗರಗಳು: ಮಂಗಳೂರು ಮುಂಚೂಣಿಯಲ್ಲಿ, ದೆಹಲಿ ಕೊನೆಯ ಸ್ಥಾನ

Top 10 safest cities in India 2025 list: 2025 ರ ವರ್ಷದ ಮಧ್ಯಭಾಗದ ನಂಬಿಯೊ ಸುರಕ್ಷತಾ ಪಟ್ಟಿಯ ಇತ್ತೀಚಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತವು ವಿಶ್ವದ ಸುರಕ್ಷಿತ ರಾಷ್ಟ್ರಗಳಲ್ಲಿ 67ನೇ ಸ್ಥಾನದಲ್ಲಿದೆ, 55.8 ರ ಸೂಚ್ಯಂಕ ಅಂಕವನ್ನು ಗಳಿಸಿದೆ.

ಆದಾಗ್ಯೂ, ನಗರವಾರು ಸುರಕ್ಷತಾ ಶ್ರೇಯಾಂಕದಲ್ಲಿ, ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವೆಂದು ಸ್ಥಾನ ಪಡೆದಿದೆ. ಕಡಿಮೆ ಅಪರಾಧ ಪ್ರಮಾಣ ಮತ್ತು ಬಲವಾದ ನಾಗರಿಕ ಮೂಲಸೌಕರ್ಯಕ್ಕಾಗಿ ಮಂಗಳೂರು ಪ್ರಶಂಸೆ ಪಡೆದುಕೊಂಡಿದೆ. ಜಾಗತಿಕವಾಗಿ 74.2 ಸುರಕ್ಷತಾ ಸೂಚ್ಯಂಕ ಅಂಕಗಳೊಂದಿಗೆ 49 ನೇ ಸ್ಥಾನದಲ್ಲಿದೆ.
ಗುಜರಾತ್‌ನಲ್ಲಿ, ವಡೋದರಾ, ಅಹಮದಾಬಾದ್ ಮತ್ತು ಸೂರತ್ ಎಂಬ ಮೂರು ನಗರಗಳು ಕ್ರಮವಾಗಿ 69.2, 68.2 ಮತ್ತು 66.6 ಸುರಕ್ಷತಾ ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ನೋಯ್ಡಾ ಮತ್ತು ಗಾಜಿಯಾಬಾದ್ ಜೊತೆಗೆ ರಾಜಧಾನಿ ನವದೆಹಲಿ ಕೂಡ ಭಾರತದ ಅತ್ಯಂತ ಅಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಗಳು, ಅವುಗಳನ್ನು ಸೂಚ್ಯಂಕದಿಂದ ಈ ನಗರಗಳು ಕೊನೆಯ ಸ್ಥಾನ ಪಡೆದುಕೊಂಡಿದೆ. ದೆಹಲಿಯು ಅಪರಾಧ ಸೂಚ್ಯಂಕ 59.03, ಗಾಜಿಯಾಬಾದ್ 58.44 ಮತ್ತು ನೋಯ್ಡಾ 55.1 ಅಂಕಗಳನ್ನು ಹೊಂದಿವೆ.
ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಜನರು ತಮ್ಮ ದೈನಂದಿನ ಜೀವನದಲ್ಲಿ ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ನಂಬಿಯೊ ವಿಶ್ಲೇಷಣೆ ಮಾಡಿದೆ. “ದರೋಡೆ, ಕಾರು ಕಳ್ಳತನ, ಅಪರಿಚಿತರಿಂದ ದೈಹಿಕ ದಾಳಿ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ಮತ್ತು ಚರ್ಮದ ಬಣ್ಣ, ಜನಾಂಗೀಯತೆ, ಲಿಂಗ ಅಥವಾ ಧರ್ಮದಂತಹ ಅಂಶಗಳ ಆಧಾರದ ಮೇಲೆ ತಾರತಮ್ಯ” ದಂತಹಸಾರ್ವಜನಿಕ ಗ್ರಹಿಕೆಗಳ ಆಧಾರದ ಮೇಲೆ ಸ್ಥಾನ ನೀಡಲಾಗಿದೆ. ಇದರಲ್ಲಿ ಆಸ್ತಿ ಅಪರಾಧಗಳಾದ ವಿಧ್ವಂಸಕ ಕೃತ್ಯ ಮತ್ತು ಕಳ್ಳತನ, ಹಲ್ಲೆ ಮತ್ತು ಕೊಲೆ ಮುಂತಾದ ಹಿಂಸಾತ್ಮಕ ಅಪರಾಧಗಳ ಬಗ್ಗೆಯೂ ಸೇರಿದೆ.
ವಿಶ್ವದ ಅತ್ಯಂತ ಸುರಕ್ಷಿತ ನಗರಗಳು ಯಾವುವು?
ಮಧ್ಯಪ್ರಾಚ್ಯದ ಹಲವಾರು ನಗರಗಳು ತಮ್ಮ ಸುರಕ್ಷತೆ ಮತ್ತು ಸ್ಥಿರತೆಗಾಗಿ ಜಾಗತಿಕ ಮನ್ನಣೆಯನ್ನು ಗಳಿಸಿವೆ, ಅವುಗಳಲ್ಲಿ ಐದು ನಗರಗಳು ವಿಶ್ವದ ಟಾಪ್ 10 ಸುರಕ್ಷಿತ ನಗರಗಳಲ್ಲಿ ಸ್ಥಾನ ಪಡೆದಿವೆ.
ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿ, ವರ್ಷದ ಮಧ್ಯದಲ್ಲಿ 88.8 ಸುರಕ್ಷತಾ ಸೂಚ್ಯಂಕ ಅಂಕಗಳೊಂದಿಗೆ, ಸತತ ಒಂಬತ್ತನೇ ವರ್ಷವೂ ಜಾಗತಿಕವಾಗಿ ಸುರಕ್ಷಿತ ನಗರವಾಗಿ ಅಗ್ರಸ್ಥಾನದಲ್ಲಿದೆ, ಯುಎಇ ದೇಶ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ.
Comments are closed.