Hyderabad : ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ!! ಕೊನೆಗೆ ಆತ್ಮಹತ್ಯೆಗೆ ಶರಣಾದಳು

Hyderabad : ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಮನೋವೈದ್ಯೆಯೊಬ್ಬರು ಪ್ರೀತಿಸಿ ಮದುವೆ(Marriage)ಯಾಗಿದ್ದರು. ಇದೀಗ ಆ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವೈದ್ಯಯನ್ನು 33 ವರ್ಷದ ಎ.ರಜಿತಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರೋಹಿತ್ ಮತ್ತು ಅವರ ಕುಟುಂಬದಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ತಂದೆ ಸಬ್ ಇನ್ಸ್ಪೆಕ್ಟರ್ ನರಸಿಂಹ ಗೌಡ ನೀಡಿದ ದೂರಿನ ಆಧಾರದ ಮೇಲೆ ಸಂಜೀವ ರೆಡ್ಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಜಿತಾ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಗ ರೋಹಿತ್ನನ್ನು ಭೇಟಿಯಾದರು. ಬಂಜಾರಾ ಹಿಲ್ಸ್ನ ಮಾನಸಿಕ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾಗ, ರೋಹಿತ್ ರೋಗಿಯಾಗಿ ಬಂದಿದ್ದ. ಆಕೆಯ ಕೌನ್ಸೆಲಿಂಗ್ ನಂತರ ರೋಹಿತ್ನ ಪೋಷಕರು ಅವನ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದ. ಬಳಿಕ ರೋಹಿತ್, ರಜಿತಾ ಬಳಿ ಪ್ರೇಮ ನಿವೇದನೆ ಮಾಡಿದ್ದ. ಅವಳು ತನ್ನ ಚೇತರಿಕೆಗೆ ಸಹಾಯ ಮಾಡಬಹುದೆಂದು ನಂಬಿದ್ದ. ಮದುವೆಯ ನಂತರ, ರೋಹಿತ್ ಕೆಲಸ ನಿಲ್ಲಿಸಿ ರಜಿತಾಳ ಸಂಬಳವನ್ನು ಪಾರ್ಟಿಗಳು ಮತ್ತು ವೈಯಕ್ತಿಕ ಖರ್ಚುಗಳಿಗೆ ಖರ್ಚು ಮಾಡುತ್ತಿದ್ದ. ರಜಿತಾ ಎಷ್ಟು ಕೇಳಿಕೊಂಡರು ಇದನ್ನು ರೋಹಿತ್ ನಿಲ್ಲಿಸಲಿಲ್ಲ.
ರೋಹಿತ್, ಅವನ ಪೋಷಕರಾದ ಕಿಷ್ಟಯ್ಯ ಮತ್ತು ಸುರೇಖಾ ಮತ್ತು ಅವನ ಸಹೋದರ ಮೋಹಿತ್ ರಜಿತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಇದರಿಂದ ರಜಿತಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ಮನೆಗೆ ಕರೆದುಕೊಂಡು ಬಂದ ಬಳಿಕವೂ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Comments are closed.