Home News KSRTC Protest: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರಿಗೆ ವಜಾ ಗ್ಯಾರಂಟಿ ಸ್ಕೀಂ – ಮರುಕಳಿಸುತ್ತಾ 2021ರಲ್ಲಿ...

KSRTC Protest: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರಿಗೆ ವಜಾ ಗ್ಯಾರಂಟಿ ಸ್ಕೀಂ – ಮರುಕಳಿಸುತ್ತಾ 2021ರಲ್ಲಿ ನಡೆದಿದ್ದ ಮುಷ್ಕರದ ನೋಟೀಸ್

Hindu neighbor gifts plot of land

Hindu neighbour gifts land to Muslim journalist

KSRTC Protest: ಸರಕಾರ ಹಾಗೂ ಸಾರಿಗೆ ನಿಗಮ ನೌಕರರ ನಡುವೆ ಸಂಘರ್ಷ ತಾರಕಕ್ಕೇರುತ್ತಿದೆ. ನೌಕರರ ವೇತನ ಪರಿಷ್ಕರಣೆ- ಹಿಂಬಾಕಿ ವೇತನಕ್ಕೆ ಒಪ್ಪದ ರಾಜ್ಯ ಸರಕಾರದ, ಮನವೊಲಿಕೆಗೂ ರಾಜ್ಯ ಸಾರಿಗೆ ನೌಕರರು ಪಟ್ಟು ಸಡಿಲಿಸಲಿಲ್ಲ. ವೇತನ ಪರಿಷ್ಕರಣೆ ಹಾಗೂ ವೇತನ ಹಿಂಬಾಕಿ ನೀಡುವವರೆಗೆ ಮುಷ್ಕರ ವಾಪಸ್ ಇಲ್ಲ ಎಂದು ಎಚ್ಚರಿಸಿ, ಮುಷ್ಕರ ಮಾಡಬಾರದೆಂದು ಕೋರ್ಟ್ ಮಧ್ಯಂತರ ಆದೇಶ ಇದ್ರೂ ನೌಕರರು ಮುಷ್ಕರ ಮಾಡಿದ್ದರು. ಇದೀಗ ನೌಕರರು ಅಂದುಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು ಆಗಿದೆ.

ಮುಖಂಡರ ಮಾತು ಕೇಳಿ ಮುಷ್ಕರ ಮಾಡಿದ್ದಕ್ಕೆ ಏಕಾಏಕಿ ಶಾಕಿಂಗ್ ಮೆಸೆಜ್ ಬಂದಿದೆ. ಸಾರಿಗೆ ಜಂಟಿ ಕ್ರಿಯಾ ಸಮಿತಿ ನೀಡಿದ್ದ ಮುಷ್ಕರಕ್ಕೆ ಸಾರಿಗೆ ನೌಕರರು ಸಾಥ್ ಕೊಟಟ್ಟು ನಿನ್ನೆ ಪ್ರತಿಭಟನೆ ಕೈಗೊಂಡಿದ್ದರು. ಎಸ್ಮಾ ಕಾಯ್ದೆ ಜಾರಿ ಇದ್ರೂ ಮುಷ್ಕರ ಮಾಡಿದ್ಯಾಕೆ ಎಂದು ಕೋರ್ಟ್ ಕೇಳಿತ್ತು, ಅಲ್ಲದೆ, ಜಂಟಿ ಕ್ರಿಯಾ ಸಮಿತಿ ಸದಸ್ಯರನ್ನ ಯಾಕೆ ಬಂಧಿಸಬಾರ್ದು ಅಂತ ಕೋರ್ಟ್ ಹೇಳಿತ್ತು. ಮುಷ್ಕರ ತಡೆಯದ ಸಾರಿಗೆ ಇಲಾಖೆ ನಡೆಗೆ ನ್ಯಾಯಪೀಠ ಗರಂ ಆಗಿತ್ತು. ಹೈಕೋರ್ಟ್ ಛಾಟಿ ಬೆನ್ನಲ್ಲೇ ಇದೀಗ ಸರ್ಕಾರ ಎಚ್ಚೆತ್ತು ನೊಟೀಸ್ ಅಸ್ತ್ರ ನೀಡಿದೆ.

ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ಆಯಾ ಎಂಡಿಗಳಿಂದ ವಜಾ ಮಾಡುವ ನೋಟೀಸ್ ಜಾರಿಯಾಘಿರುವುದು ಇದೀಗ ನೌಕರರಿಗೆ ಶಾಕ್ ನೀಡಿದೆ. ಈ ಮೂಲಕ 2021 ರಲ್ಲಿ ನಡೆದಿದ್ದ ಮುಷ್ಕರದ ನೋಟೀಸ್ ಕ್ರಮ ಮತ್ತೆ ಮರುಕಳಿಸ್ತಾ ಎಂಬ ಅನುಮಾನ ಮೂಡಿದೆ. ಬಿಎಂಟಿಸಿ, ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ, ಎನ್ ಡಬ್ಲ್ಯೂ ಕೆಆರ್ಟಿಸಿಯ ನೌಕರರಿಗೆ ನೋಟೀಸ್ ನೀಡಲಾಗಿದ್ದು, ಮುಷ್ಕರದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದವರಿಗೆ ನೋಟೀಸ್ ನೀಡಲಾಗಿದೆ.

ನಿನ್ನೆ ಒಂದೇ ದಿನ ಸಾವಿರಾರು ನೌಕರರಿಗೆ ನೋಟೀಸ್ ನೀಡಿದ್ದು, ನೋಟೀಸ್ ಗೆ ಸಕಾರಣ ನೀಡದಿದ್ರೆ ಈ ನೌಕರರು ವಜಾ ಆಗೋದು ಗ್ಯಾರಂಟಿ ಅನ್ನೋ ಮಾತು ಕೇಳಿ ಬರುತ್ತಿದೆ. ರಾಜ್ಯ ಸರ್ಕಾರದಿಂದ ನೌಕರರ ವಜಾ ಗ್ಯಾರಂಟಿ ಸ್ಕೀಂ ಜಾರಿಯಾಗಿದ್ದು, ಈ ಮೂಲಕ ನೋಟೀಸ್ ಪಡೆದ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.

ಮುಷ್ಕರದಿಂದ ನಿನ್ನೆ ನಿಗದಿಯಾಗಿದ್ದ ಬಸ್ ರಸ್ತೆಗಿಳಿಯಲಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ಸಂಸ್ಥೆಗೆ ನಷ್ಟವಾಗಿದೆ ಅಂತ ನೊಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದ್ದು, ನಿನ್ನೆ ಮುಷ್ಕರ ಕೈಬಿಟ್ಟ ಬಳಿಕ ಡಿಪೋಗೆ ತೆರಳಿದ್ದ ನೌಕರರಿಗೆ ನೋಟೀಸ್ ನೀಡಲಾಗಿದೆ. ಬೆಳಗ್ಗೆ ಕತ್ಯವ್ಯಕ್ಕೆ ಗೈರಾಗಿದ್ದ ನೌಕರರು ಸಂಜೆ ಡಿಪೋ ಹತ್ರ ಬರ್ತಿದ್ದಂತೆ ನೋಟೀಸ್ ನೀಡಿದ್ದು, 2021 ರ ಮುಷ್ಕರದಲ್ಲೂ ಭಾಗಿಯಾಗಿದ್ದ ಸಾವಿರಾರು ನೌಕರರಿಗೆ ನೋಟೀಸ್ ನೀಡಲಾಗಿತ್ತು.

ಆಗ ನೊಟೀಸ್ ಸಮರ್ಪಕ ಉತ್ತರ ನೀಡದ ಸಾವಿರಾರು ನೌಕರರನ್ನ ವಜಾ ಮಾಡಲಾಗಿತ್ತು. ಮುಖಂಡರ ಮಾತು ಕೇಳಿ ಕೆಲ್ಸಕ್ಕೆ ಬಾರದ ನೌಕರರಿಗೆ ಇದೀಗ ವಜಾ ಆಗುವ ಭೀತಿ ಎದುರಾಗಿದ್ದು, ಇದೀಗ ನೊಟೀಸ್ ಪಡೆದ ನೌಕರರ ಪರವಾಗಿ ನಿಲ್ಲುತ್ತಾ ಸಾರಿಗೆ ಜಂಟಿ ಕ್ರಿಯಾ ಸಮಿತಿ? ಎಂಬುದನ್ನು ಕಾದು ನೋಡಬೇಕಷ್ಟೆ.

ಇದನ್ನೂ ಓದಿ: Kodagu: ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌: ಇಂದು ಶಾಲಾ, ಕಾಲೇಜುಗಳಿಗೆ ರಜೆ!