Belthangady : ಧರ್ಮಸ್ಥಳ ಕೇಸ್ – ಮತ್ತೆರಡು ಹೊಸ ಪ್ರಕರಣದ ತನಿಖೆ ನಡೆಸಲು SIT ಗೆ ಆದೇಶ !!

Belthangady : ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಹೆಣ ಹೂತಿಟ್ಟ ಪ್ರಕರಣದ ತನಿಖೆಯನ್ನು ಚುರುಕಿನಿಂದ ನಡೆಸುತ್ತಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುಗು ಪಡೆದುಕೊಂಡು ಸಾಗುತ್ತಿದ್ದು, ಇದರ ನಡುವೆಯೇ ಎಸ್ಐಟಿ ತಂಡಕ್ಕೆ ಮತ್ತೆರಡು ಹೊಸ ಪ್ರಕರಣಗಳನ್ನು ವಹಿಸಲಾಗಿದೆ.

ಹೌದು, ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 31 ರಂದು 6 ನೇ ಗುರುತು ಅಗೆದ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣದ ಕುರಿತು ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಮತ್ತು ಆಗಸ್ಟ್ 4 ರಂದು ಅಪ್ರಾಪ್ತ ಬಾಲಕಿಯನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವ ಬಗ್ಗೆ ಜಯಂತ್.ಟಿ ನೀಡಿದ ದೂರಿನ ಪಿಟಿಷನ್ ಪ್ರಕರಣವನ್ನು ಮುಂದಿನ ತನಿಖೆಗಾಗಿ ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ರವರು ಇಂದು ( ಆ.5 ರಂದು) ಎಸ್.ಐ.ಟಿ ಗೆ ನೀಡಲು ಆದೇಶ ಮಾಡಿದ್ದಾರೆ.
ಇನ್ನು ಶವ ಹೂತಿರುವ ಪಾಯಿಂಟ್ಸ್ ಗುರುತಿಸುವಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲ್ಲ, ಎಲ್ಲವೂ ಎಸ್ ಐ ಟಿ ವಿವೇಚನೆಗೆ ಬಿಡಲಾಗಿದೆ. ಅನಾಮಿಕ ವ್ಯಕ್ತಿ ಎಲ್ಲೆಲ್ಲಿ ತೋರಿಸುತ್ತಾನೋ ಅಲ್ಲಿಗೆ ಎಸ್ ಐಟಿ ಹೋಗಿ ಹುಡುಕುತ್ತಾರೆ. ಎಲ್ಲಿ ತನಕ ಅವರು ತನಿಖೆ ಮಾಡುತ್ತಾರೋ ಅಲ್ಲಿವರೆಗೆ ಎಸ್ ಐ ಟಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
Comments are closed.