Gundlupete: ಲಿಂಗಾಯತ ಮಠಕ್ಕೆ ಪೀಠಾಧಿಪತಿಯಾದ ಮುಸ್ಲಿಂ ವ್ಯಕ್ತಿ- ಒಂದುವರೆ ತಿಂಗಳ ಬಳಿಕ ಸತ್ಯ ಬಹಿರಂಗ

Share the Article

Gundlupete: ಪೂರ್ವಾಶ್ರಮದಲ್ಲಿ ಮುಸ್ಲಿಂ ಆಗಿದ್ದರು ಎಂಬ ವಿಷಯ ತಿಳಿದು ಭಕ್ತರು ವಿರೋಧಿಸಿದ್ದರಿಂದ, ತಾಲ್ಲೂಕಿನ ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹದ ಶಾಖಾ ಮಠದ ನಿಜಲಿಂಗ ಸ್ವಾಮೀಜಿ ಅವರು ಪೀಠತ್ಯಾಗ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮದ ಮಹಮ್ಮದ್ ನಿಸಾರ್(22) ಅವರು ಬಸವ ಕಲ್ಯಾಣದ ಸ್ವಾಮೀಜಿಯೊಬ್ಬರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪೀಠಾಧಿಪತಿಯಾಗಿ ಬಂದಿದ್ದರು. ನಂತರ ಧಾರ್ಮಿಕ ಕಾರ್ಯಗಳು ಮತ್ತು ಪ್ರವಚನ ನಡೆಸಿಕೊಂಡು ಹೋಗುತ್ತಿದ್ದರು. ಇವರು ಬಸವ ತತ್ವಗಳಿಂದ ಪ್ರಭಾವಿತರಾಗಿ ಜಂಗಮ ದೀಕ್ಷೆ ಪಡೆದಿದ್ದರು. ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಹಮದ್ ನಿಸಾರ್ ಅವರಿಗೆ ‘ನಿಜಲಿಂಗಸ್ವಾಮೀಜಿ’ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೀಗ ಅವರ ಪೂರ್ವಾಶ್ರಮದ ಧರ್ಮ ಬೆಳಕಿಗೆ ಬಂದ ಹಿನ್ನಲೆ ಯುವ ಸ್ವಾಮೀಜಿ ಪೀಠ ತೊರೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಅಂದಹಾಗೆ ಈಚೆಗೆ ಭಕ್ತರು ಸ್ವಾಮೀಜಿ ಮೊಬೈಲ್ ಫೋನ್ ಗಮನಿಸುವಾಗ ಆಧಾರ್ ಕಾರ್ಡ್‌ನಲ್ಲಿ ಮಹಮ್ಮದ್ ನಿಸಾರ್ ಎಂದು ಇದ್ದದ್ದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದರು. ಗ್ರಾಮದ ಕೆಲವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಮುಸ್ಲಿಂ ಸಮುದಾಯದವರನ್ನು ಮಠಾಧೀಶರನ್ನಾಗಿ ಮಾಡಲು ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ನಿಜಲಿಂಗಸ್ವಾಮೀಜಿ ತಾವು ಇಚ್ಛಿಸುತ್ತಿಲ್ಲದಿದ್ದರೆ ಮಠದ ಪೀಠವನ್ನು ತ್ಯಜಿಸಲು ಸಿದ್ಧ ಎಂದು ತಿಳಿಸಿದರು.

ಇನ್ನು ಮುಖಂಡರು, ಪೊಲೀಸರು ವಿಚಾರಿಸಿದಾಗ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದಾಗಿ ಸ್ವಾಮೀಜಿ ಸಮಜಾಯಿಷಿ ನೀಡಿದ್ದರು. ಆದರೆ, ‘ಪೂರ್ವಾಶ್ರಮದ ಧರ್ಮ ಮುಚ್ಚಿಟ್ಟಿದ್ದರಿಂದ ಪೀಠಾಧಿಪತಿಯಾಗಿ ಮುಂದುವರಿಯುವುದು ಸರಿಯಲ್ಲ ಎಂದು ಎಲ್ಲರೂ ಒತ್ತಡ ಹಾಕಿದ್ದರು. ಹೀಗಾಗಿ ಸ್ವಾಮೀಜಿ ಪೀಠತ್ಯಾಗ ಮಾಡಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

“ನಾನು ಅನ್ಯ ಧರ್ಮದವನಾದರೂ ಬಸವತತ್ವ ದಿಂದ ಆಕರ್ಷಿತನಾಗಿ ಜಂಗಮ ದೀಕ್ಷೆ ಪಡೆದಿದ್ದೇನೆ ಎಂದು ನಿಜಲಿಂಗ ಸ್ವಾಮೀಜಿ ಹೇಳಿದರು. ಆದರೆ, ತಾವು ಮುಸ್ಲಿಂ ಧರ್ಮದಿಂದ ಮತಾಂತರವಾಗಿರುವ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದ ಬಗ್ಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು. ಬಳಿಕ ಗುಂಡ್ಲುಪೇಟೆ ಪೊಲೀಸರ ಮದ್ಯಸ್ಥಿಕೆಯಲ್ಲಿ ಸಭೆ ನಡೆಯಿತು. “ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ತಾವು ಪೀಠದಲ್ಲಿ ಮುಂದುವರಿಯುವುದಿಲ್ಲ ಪೀಠತ್ಯಾಗ ಮಾಡುತ್ತೇನೆ ಎಂದು ನಿಜಲಿಂಗ ಸ್ವಾಮೀಜಿ ಯಾದಗಿರಿಗೆ ವಾಪಸ್ ತೆರಳಿದ್ದಾರೆ.

ಇದನ್ನೂ ಓದಿ: Dharmasthala Case: ಪಾಯಿಂಟ್‌ ನಂಬರ್‌ 11 ರಲ್ಲಿ 6ಅಡಿ ಅಗೆತ: ಸಿಕ್ಕಿದ್ದೇನು?

Comments are closed.