Home News Dharmasthala Burial Case: ಧರ್ಮಸ್ಥಳ ಪ್ರಕರಣ ದಿನ – 7 – ಪಾಯಿಂಟ್‌ 11ರಲ್ಲಿ ಕಾರ್ಯಾಚರಣೆ...

Dharmasthala Burial Case: ಧರ್ಮಸ್ಥಳ ಪ್ರಕರಣ ದಿನ – 7 – ಪಾಯಿಂಟ್‌ 11ರಲ್ಲಿ ಕಾರ್ಯಾಚರಣೆ – ಕುತೂಹಲದಿಂದ ಕಾಯುತ್ತಿರುವ ಸಾರ್ವಜನಿಕರು

Hindu neighbor gifts plot of land

Hindu neighbour gifts land to Muslim journalist

Dharmasthala Burial Case: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ನಿನ್ನೆ ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ. ಏಳನೇ ದಿನವಾದ ಇಂದು ಉತ್ಖನನ ಕಾರ್ಯ ಆರಂಭವಾಗಿದ್ದು, ಪಾಯಿಂಟ್ ನಂಬರ್ 11 ರಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಮಾಧ್ಯಮಗಳ ಕಣ್ಣಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಚಟುವಟಿಕೆಗಳು ತಿಳಿಯಬಾರದೆಂದು ಸುತ್ತ ಗ್ರೀನ್‌ ಮ್ಯಾಟ್‌ ಅನ್ನು ಅಳವಾಡಿಸಲಾಗಿದೆ.

ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ವ್ಯಕ್ತಿ ನೀಡಿದ ಹೇಳಿಕೆಯಂತೆ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದು, ಪಾಯಿಂಟ್ ಸಂಖ್ಯೆ 11 ರಲ್ಲಿ ಮತ್ತೆ ಹುಡುಕಾಟ ಆರಂಭವಾಗಿದ್ದು, ಈಗಾಗಲೇ ಸುಮಾರು ಒಂದು ಒಂದುವರೆ ಗಂಟೆ ಕಳೆಯಿತು. ಮಾನವರ ಸಹಾಯದಿಂದಲೇ ಗುಂಡಿಯನ್ನು ಅಗೆಯಲಾಗುತ್ತಿದ್ದು, ಜೆಸಿಬಿಯನ್ನು ಬಳಸಲಾಗಿಲ್ಲ. ಒಂದು ವೇಳೆ ಜೆಸಿಬಿಯ ಅಗತ್ಯ ಕಂಡು ಬಂದಲ್ಲಿ ತಕ್ಷಣದಲ್ಲಿ ಬಳಲಸು ಈಗಾಗಲೇ ಜೆಸಿಬಿಯನ್ನು ಅಲ್ಲೆ ನಿಲ್ಲಿಸಿಕೊಳ್ಳಲಾಗಿದೆ.

ಆರೋಪಿ ಗುರುತಿಸಿರುವ ಪಾಯಿಂಟ್ ಗಳಲ್ಲಿ ಈವರೆಗೆ ಯಾವುದೇ ಕುರುಹು ಸಿಕ್ಕಿಲ್ಲ. ಇನ್ನುಳಿದ ಎರಡು ಸ್ಥಳದಲ್ಲಿ ಇಂದೇ ಉತ್ಪನನ ಮಾಡಲು ಎಸ್ ಐಟಿ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 6 ಅಡಿಯ ಬಳಿಕ ಏನು ಪತ್ತೆಯಾಗದಿದ್ದರೆ ಮುಂದಿನ ಪಾಯಿಂಟ್ ಗೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ಖನನ ಕಾರ್ಯ ಭರದಿಂದ ಸಾಗುತ್ತಿದ್ದು, ಅಲ್ಲಿ ಅಪಾರ ಸಂಖ್ಯೆಯಲ್ಲಿ ಸಾವರ್ಜನಿಕರು ಜಮಾಯಿಸಿದ್ದಾರೆ.

ಇಂದು ಪಾಯಿಂಟ್ ಸಂಖ್ಯೆ 13 ರ ಉತ್ಪನನ ಪೂರ್ಣವಾದರೆ ಇದೇ ರೀತಿ ಉಳಿದ 17 ಸ್ಪಾಟ್ ಗಳಲ್ಲಿ ಕಳೇಬರಕ್ಕಾಗಿ ಉತ್ಪನನ ಕಾರ್ಯ ನಡೆಯುವ ಸಾದ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಒಟ್ಟು 30 ಸ್ಥಳಗಳಲ್ಲೂ ಎಸ್ ಐಟಿ ಅಧಿಕಾರಿಗಳು ಮಹಜರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ: PAN 2.0: 18 ತಿಂಗಳಲ್ಲಿ ಪ್ಯಾನ್ 2.0 ಬಿಡುಗಡೆ: ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?