Bangalore : ಬೆಂಗಳೂರಿನಿಂದ ಮಂಗಳೂರಿಗೆ ರೂ.12 ಸಾವಿರಕ್ಕೆ ಟ್ಯಾಕ್ಸಿ ಬುಕ್ ಮಾಡಿದ ವ್ಯಕ್ತಿ

Bangalore: ಬಸ್ ಸಂಚಾರ ಇಂದು ಬಹುತೇಕ ನಿಂತಿದೆ. ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕುರಿತಂತೆ ಆಗ್ರಹ ಮಾಡಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಬಂದ್ ಘೋಷಣೆ ಮಾಡಲಾಗಿದೆ.

ಇದರ ಜೊತೆಗೆ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ಉಂಟಾಗಿದೆ. ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದಕ್ಕೆ ರೂ.12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ ಘಟನೆ ನಡೆದಿದೆ. ಮಂಗಳೂರಿಗೆ ಬಸ್ ಇಲ್ಲದ ಕಾರಣ ರಾತ್ರಿ ತನಕ ಕಾಯೋದಕ್ಕೆ ಆಗುವುದಿಲ್ಲ. ರಾತ್ರಿ ಬಸ್ ಇರುತ್ತೆ ಅನ್ನುವುದು ಕೂಡಾ ಗೊತ್ತಿಲ್ಲ.
ಹೀಗಾಗಿ 12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ್ದಾನೆ. ದುಬೈನಿಂದ ಬೆಂಗಳೂರಿನಗೆ ಬಂದಿದ್ದ ಇವರು ಏರ್ಪೋಟ್‌ನಲ್ಲಿ ಬಸ್ ಇದ್ದಿದ್ದಕ್ಕೆ ಮೆಜೆಸ್ಟಿಕ್ ತನಕ ಬಂದಿದ್ದಾನೆ. ಆದರೆ ಮೆಜೆಸ್ಟಿಕ್‌ನಿಂದ ಬಸ್ ಇಲ್ಲದ ಕಾರಣ, ಕಂಗಾಲಾಗಿದ್ದಾರೆ. ಪರಿಣಾಮ 12 ಸಾವಿರಕ್ಕೆ ಟ್ಯಾಕ್ಸಿ ಮಾಡಿ ಮಂಗಳೂರಿಗೆ ಹೊರಟಿದ್ದಾರೆ.
Comments are closed.