Bike Service: ನಿಜಕ್ಕೂ ಬೈಕ್ ಸರ್ವಿಸ್ ಯಾವಾಗ ಮಾಡಿಸ್ಬೇಕು? ಎಷ್ಟು ಕಿ.ಮೀ ಓಡಿರಬೇಕು?

Bike Service: ನೀವು ಬೈಕ್ ಓಡಿಸುತ್ತಿದ್ದರೆ, ನೀವು ನಿಮ್ಮದೇ ಸ್ವಂತ ಬೈಕನ್ನು ಹೊಂದಿದ್ದರೆ ಅದರ ಮೇಂಟೆನೆನ್ಸ್ ತುಂಬಾ ಅಗತ್ಯ. ಅದರಲ್ಲೂ ಬೈಕ್ ಸರ್ವಿಸ್ ಮಾಡಿಸುವುದು ಇಂಪಾರ್ಟೆಂಟ್. ಹಾಗಿದ್ರೆ ನಿಮ್ಮ ಬೈಕ್ ಯಾವಾಗ ಸರ್ವಿಸ್ ಮಾಡಬೇಕೆಂದು ನೀವು ತಿಳಿದುಕೊಳ್ಳಬೇಕು. ಇದಕ್ಕೆ ಸರಿಯಾದ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ, ಈಗ ತಿಳಿದುಕೊಳ್ಳೋಣ.

ಬೈಕ್ ಸರ್ವೀಸ್ ಮಾಡಲು ಇದು ಸರಿಯಾದ ಸಮಯವೇ.?
ಪ್ರತಿ 2000 ಕಿ.ಮೀ.ಗೂ ಒಮ್ಮೆ ಬೈಕ್ ಸರ್ವೀಸ್ ಮಾಡಬೇಕು. ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿದರೆ, ಬೈಕ್’ನ ಕಾರ್ಯಕ್ಷಮತೆ, ಎಂಜಿನ್ ಬಾಳಿಕೆ ಮತ್ತು ಮೈಲೇಜ್ ಉತ್ತಮ ಮತ್ತು ಬಲವಾಗಿರುತ್ತದೆ. ಹೊಸ ಬೈಕ್’ನ ಮೊದಲ ಸರ್ವೀಸ್ 500-750 ಕಿ.ಮೀ.ಗೆ ಮಾಡಬೇಕು. ಅಲ್ಲದೆ, ಯಾವುದೋ ಕಾರಣದಿಂದ ನೀವು 2000 ಕಿ.ಮೀ.ಗೆ ಸರ್ವೀಸ್ ಮಾಡಲು ಸಾಧ್ಯವಾಗದಿದ್ದರೆ, ಖಂಡಿತವಾಗಿಯೂ 2500 ಕಿ.ಮೀ.ಗೆ ಮಾಡಿ. ಆದರೆ 2500 ಕಿ.ಮೀ. ನಂತರ ಸರ್ವೀಸ್ ಮಾಡಬೇಡಿ. ನೀವು ಹೀಗೆ ಮಾಡಿದರೆ, ಕ್ಲಚ್ ಪ್ಲೇಟ್, ಪಿಸ್ಟನ್ ಮತ್ತು ಬೈಕ್ ಚೈನ್ ಕೂಡ ಹಾಳಾಗುತ್ತದೆ.
ತಡವಾಗಿ ಸರ್ವಿಸ್ ಮಾಡಿಸಿದರೆ ಏನಾಗುತ್ತೆ?
ನೀವು ಸಮಯಕ್ಕೆ ಸರಿಯಾಗಿ ಬೈಕ್ ಅನ್ನು ಸರ್ವೀಸ್ ಮಾಡದಿದ್ದರೆ ಮತ್ತು ಪಿಸ್ಟನ್ ಹಾನಿಗೊಳಗಾಗಿದ್ದರೆ. ಅದನ್ನು ರಿಪೇರಿ ಮಾಡಲು ಸುಮಾರು 3 ಸಾವಿರ ರೂಪಾಯಿಗಳು ಮತ್ತು ಕ್ಲಚ್-ಪಿಸ್ಟನ್ ರಿಪೇರಿ ಮಾಡಲು 4500 ರೂಪಾಯಿಗಳವರೆಗೆ ವೆಚ್ಚವಾಗುತ್ತದೆ. ಎಂಜಿನ್ ಹಾನಿಗೊಳಗಾದರೆ, ನೀವು 6 ರಿಂದ 7 ಸಾವಿರ ರೂಪಾಯಿಗಳನ್ನ ಖರ್ಚು ಮಾಡಬೇಕಾಗುತ್ತದೆ.
Comments are closed.