Delhi News: ಆಗಸ್ಟ್ 15ಕ್ಕೂ ಮುನ್ನ ಕೆಂಪು ಕೋಟೆಯ ಭದ್ರತೆಯಲ್ಲಿ ದೊಡ್ಡ ಲೋಪ, ಕೋಟೆಯೊಳಗೆ ಇಟ್ಟ ಡಮ್ಮಿ ಬಾಂಬ್ ಪತ್ತೆ ಹಚ್ಚಲು ವಿಫಲ, 7 ಪೊಲೀಸರ ಅಮಾನತು

Delhi News: ಆಗಸ್ಟ್ 15 ಕ್ಕೆ ಸ್ವಲ್ಪ ಮೊದಲು ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಈ ಮಧ್ಯೆ, ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೆಂಪು ಕೋಟೆಯ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ದೆಹಲಿ ಪೊಲೀಸರ ವಿಶೇಷ ಘಟಕವು ಅಣಕು ಕವಾಯತು ಸಂದರ್ಭದಲ್ಲಿ ಡಮ್ಮಿ ಬಾಂಬ್ ಇಡಲಾಗಿದ್ದು, ಪತ್ತೆ ಹಚ್ಚಲು ಸಾಧ್ಯವಾಗದ ಭದ್ರತಾ ಲೋಪದಿಂದಾಗಿ ಕರ್ತವ್ಯದಲ್ಲಿ ನಿಯೋಜಿಸಲಾದ ಏಳು ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.

ಡಿಸಿಪಿ ರಾಜಾ ಬಂಥಿಯಾ ಭದ್ರತೆಯನ್ನು ಬಿಗಿಗೊಳಿಸಲು ಆದೇಶಿಸಿದ್ದರು. ಆಗಸ್ಟ್ 15 ರ ಮೊದಲು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಒಂದು ಡ್ರಿಲ್ ನಡೆಸಲಾಯಿತು. ಈ ಸಮಯದಲ್ಲಿ, ಪೊಲೀಸರು ಡಮ್ಮಿ ಬಾಂಬ್‌ನೊಂದಿಗೆ ಕೆಂಪು ಕೋಟೆಯನ್ನು ತಲುಪಿದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಸೋಮವಾರ (ಆಗಸ್ಟ್ 4) ಕೆಂಪು ಕೋಟೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಐವರು ಬಾಂಗ್ಲಾದೇಶಿಯರು ಸಿಕ್ಕಿಬಿದ್ದಿದ್ದ,. ಅವರಿಂದ ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಾಂಗ್ಲಾದೇಶಿ ನಾಗರಿಕರನ್ನು ಬಂಧನ ಮಾಡಿದ್ದಾರೆ.
ಈಗ, ಆಗಸ್ಟ್ 15 ರ ಹಿನ್ನೆಲೆಯಲ್ಲಿ, ಕೆಂಪು ಕೋಟೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ದೆಹಲಿ ಪೊಲೀಸರು ಆಗಸ್ಟ್ 16 ರವರೆಗೆ ರಾಜಧಾನಿಯಲ್ಲಿ ಪ್ಯಾರಾಗ್ಲೈಡರ್‌ಗಳು, ಹ್ಯಾಂಗ್-ಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳಂತಹ ಉಪ-ಸಾಂಪ್ರದಾಯಿಕ ವೈಮಾನಿಕ ವೇದಿಕೆಗಳ ಹಾರಾಟವನ್ನು ನಿಷೇಧಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೂ ಮೊದಲು ದೆಹಲಿ ಪೊಲೀಸರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
Comments are closed.