Subhudendra Shri: ಧರ್ಮಸ್ಥಳ ಪ್ರಕರಣ – ಮಂತ್ರಾಲಯದ ಶ್ರೀಗಳು ಹೇಳಿದ್ದೇನು?

Share the Article

Subhudendra Shri: ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಹತ್ವದ ಹೇಳಿಕೆ ನೀಡಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅವರು ಎಲ್ಲಾ ಪ್ರಕರಣವು ತನಿಖೆಯ ಹಂತದಲ್ಲಿದೆ ಹಾಗಾಗಿ ಈ ಕುರಿತು ನಾವು ಏನು ಮಾತನಾಡಲಾಗುವುದಿಲ್ಲ. ಧರ್ಮಸ್ಥಳದಲ್ಲಿ ಏನೇ ನಡೆದರೂ ಅದು ನ್ಯಾಯಾಲಯ ಮತ್ತು ತನಿಖೆಯ ಮೂಲಕ ಎಲ್ಲ ಸತ್ಯಗಳು ಬಹಿರಂಗಗೊಳ್ಳಲಿವೆ ಎಂದರು.

ಅಲ್ಲದೆ ಧರ್ಮಸ್ಥಳದ ಧಾರ್ಮಿಕ ಸ್ಥಳದ ಬಗ್ಗೆ ಉಂಟಾಗಿರುವ ಅಪಪ್ರಚಾರದ ಕುರಿತು ಮಾತನಾಡಿದ ಶ್ರೀಗಳು, ಯಾವುದೇ ಧಾರ್ಮಿಕ ಕ್ಷೇತ್ರದ ಪಾವಿತ್ರತೆಯನ್ನು ಅಲ್ಲಿನ ವ್ಯವಸ್ಥೆಯ ಲೋಪದೋಷಗಳೊಂದಿಗೆ ಜೋಡಿಸಬಾರದು. ಕ್ಷೇತ್ರವು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಯಾವುದೇ ಪ್ರಕರಣವಿದ್ದರೂ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ. ಲೋಪದೋಷಗಳಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.

ಇದನ್ನು ಓದಿ: Andhrapradesh: ಈ ವರ್ಷ ರಾಖಿ ಇಲ್ಲ ಸಹೋದರ ಎಂದು ಡೆತ್‌ ನೋಟ್‌ ಬರೆದು ಮಹಿಳೆ ಆತ್ಮಹತ್ಯೆ: ಗಂಡನ ಮೇಲೆ ಗಂಭೀರ ಆರೋಪ

Comments are closed.