Home News Maharastra : ‘ಜಿಯೋ’ ಗೆ ಗುಡ್ ಬೈ ಹೇಳಲು ಮುಂದಾದ ಜೈನ ಸಮುದಾಯ – ಕಾರಣ...

Maharastra : ‘ಜಿಯೋ’ ಗೆ ಗುಡ್ ಬೈ ಹೇಳಲು ಮುಂದಾದ ಜೈನ ಸಮುದಾಯ – ಕಾರಣ ‘ಮಠದ ಆನೆ’ !!

Hindu neighbor gifts plot of land

Hindu neighbour gifts land to Muslim journalist

Maharastra : ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸುತ್ತಮುತ್ತಲಿನ ಜೈನ ಸಮುದಾಯ ಹಾಗೂ ಇತರ ಸ್ಥಳೀಯರು ಜಿಯೋ ಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಕಾರಣ ಇದಕ್ಕೆ ಮಠದ ಒಂದು ಆನೆ.

ಹೌದು, ನೋಡಿದ್ದರಲ್ಲಿ ಮಾಧುರಿ ಆನೆಯದ್ದೇ ಸುದ್ದಿ. ಅದೇನೆಂದರೆ ಕೊಲ್ಲಾಪುರದ ನಾಂದಣಿ ಮಠದಿಂದ ಮಾದೇವಿ ಎಂಬ ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸುವುದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಜೈನ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನ ಈ ಆದೇಶವು ಜೈನ ಸಮುದಾಯದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೈನ ಸಮುದಾಯದ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೆ ಅಂಬಾನಿಯವರ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜಿಯೋಗೆ ಗುಡ್ ಬಾಯ್ ಹೇಳಲು ನಿರ್ಧರಿಸಿದ್ದಾರೆ

ಏನಿದು ಘಟನೆ?

ಕರ್ನಾಟಕದಲ್ಲಿ ಹುಟ್ಟಿದ್ದ ಮಹಾದೇವಿ (ಮಾಧುರಿ) ಆನೆಯನ್ನು ಮೂರು ವರ್ಷವಿರುವಾಗಲೇ ಕೊಲ್ಹಾಪುರದ ಜೈನ ಮಠಕ್ಕೆ ಹಸ್ತಾಂತರಿಸಲಾಗಿತ್ತು. ಹೀಗಾಗಿ ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿಯೇ ಇತ್ತು. ಹೀಗಾಗಿ ಜೈನ ಧರ್ಮಗುರು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗೂ ಹಾಗೂ ಇಲ್ಲಿನ ಭಕ್ತವೃಂದಕ್ಕೂ ಮಹಾದೇವಿ ಎನ್ನುವ ಆನೆಯೂ ತುಂಬಾನೇ ಆಪ್ತವಾಗಿತ್ತು, ಹೀಗಾಗಿ ಭಾವನಾತ್ಮಕ ಸಂಬಂಧವು ಏರ್ಪಟ್ಟಿತ್ತು. ಹೀಗಾಗಿರುವ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು, ಇತ್ತ ಮಾನಸಿಕ ಸ್ಥಿಮಿತ ಕಳೆದು ಕೊಳ್ಳುತ್ತಿದೆ ಎಂದು ಎನ್ಜಿಓ ವೊಂದು ಹೈಪವರ್ ಕಮಿಟಿ ಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಜುಲೈ 16, 2025ರಂದು ಬಾಂಬೆ ಹೈಕೋರ್ಟ್ ಈ ಮಹಾದೇವಿ ಆನೆಯನ್ನು ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ತೀರ್ಪು ನೀಡಿದ್ದ ಬೆನ್ನಲ್ಲೇ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ಬೆಂಬಲಿಸುವ ಮುಖೇನ ಸ್ಥಳಾಂತರಕ್ಕೆ ಸೂಚಿಸಿದೆ.

ಅಂಬಾನಿ ಒಡೆತನಕ್ಕೆ ಸೇರಿದ ವಂತಾರಕ್ಕೆ ಜೈನಮಠದ ಮಹಾದೇವಿ ಅನ್ನೋ ಹೆಸರಿನ ಆನೆಯೂ ಸ್ಥಳಾಂತರಗೊಂಡಿರುವುದು ಶಿರೋಲ್ನ ಜನರ ಹಾಗೂ ಜೈನ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜೈನ ಸಮುದಾಯಗಳು ಸೇರಿದಂತೆ ಇಲ್ಲಿನ ಜನರು ಅಂಬಾನಿಯವರ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜಿಯೋಗೆ ಗುಡ್ ಬಾಯ್ ಹೇಳಲು ನಿರ್ಧರಿಸಿದ್ದಾರೆ.

ಮತ್ತೊಂದು ಕಡೆ ಆನೆಯನ್ನು ವಾಪಸ್ ಕೊಲ್ಹಾಪುರ ಜಿಲ್ಲೆಗೆಗೆ ಕರೆದುಕೊಂಡು ಬರುವ ತಯಾರಿಗಳು ನಡೆಯುತ್ತಿವೆ. ನಿನ್ನೆಯ ದಿನ ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿಟ್ಕರ್, ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಜಿಲ್ಲೆಯ ಬಿಜೆಪಿ ಸಂಸದ ಧನಂಜಯ್ ಮಹಾದಿಕ್ ಮತ್ತು ಶಿವಸೇನಾ ಸಂಸದ ಧೈರ್ಯಶೀಲ್ ಮಾನೆ ಅವರು ‘ಮಹಾದೇವಿ’ಯನ್ನು ಮರಳಿ ತರಲು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: Delhi: ಹೈ ಸೆಕ್ಯೂರಿಟಿ ಇದ್ದರೂ ಡೋಂಟ್ ಕೇರ್ – ದೆಹಲಿಯಲ್ಲಿ ಕಾಂಗ್ರೆಸ್ ಸಂಸದೆಯ 4 ತೊಲ ತೂಕದ ಚಿನ್ನದ ಸರ ಕದ್ದು ಪರಾರಿಯಾದ ಕಳ್ಳ