PM Modi: ಆಗಸ್ಟ್‌ 10 ರಂದು ಬೆಂಗಳೂರಿಗೆ ಪಿಎಂ ಮೋದಿ

Share the Article

PM Modi: ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಆಗಸ್ಟ್‌ 10 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಹೀಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೆಟ್ರೋ ಫೇಸ್‌ 3 ಗೆ ಶಂಕು ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 19.15 ಕಿಲೋಮೀಟರ್ ಉದ್ದದ ಈ ಹಳದಿ ಮಾರ್ಗವು ಆರ್.ವಿ.ರೋಡ್ ನಿಂದ ಬೊಮ್ಮಸಂದ್ರವರೆಗೆ ಇರಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದ ಒಟ್ಟು ನಿರ್ಮಾಣ ವೆಚ್ಚ ರೂ.5,056.99 ಕೋಟಿ ಎಂದು ವರದಿಯಾಗಿದೆ. ಈ ಮಾರ್ಗವನ್ನು ಆಗಸ್ಟ್‌ 10 ರಿಂದ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.

Comments are closed.