Prajwal Revanna: ವೈರಲ್ ಆದ ಯಾವ ವಿಡಿಯೋದಲ್ಲೂ ಕಾಣಿಸದ ಮುಖ – ಆದರೂ ಪ್ರಜ್ವಲ್ ರೇವಣ್ಣ ಸಿಕ್ಕಿ ಬಿದ್ದಿದ್ದು ಹೇಗೆ?

Prajwal Revanna: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾ1ಚಾರ ಪ್ರಕರಣ ಸಾಭೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11.5ಲಕ್ಷ ರೂ ದಂಡವನ್ನು ವಿಧಿಸಿದೆ. ಆದರೆ ಕುತೂಹಲದ ವಿಚಾರವೇನೆಂದರೆ ವೈರಲ್ ಆದ ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ಮುಖ ಕಾಣದಿದ್ದರೂ ಕೂಡ ಅದು ಅವರೇ ಎಂದು ಪತ್ತೆಯಾದದ್ದು ಹೇಗೆ ಎಂಬುದು.

ಹೌದು, ಅಂದಾಜು 2900 ವಿಡಿಯೋಗಳು 2 ಸಾವಿರಕ್ಕಿಂತ ಅಧಿಕ ಫೋಟೋಗಳು ಅವರ ಮೊಬೈಲ್‌ನಲ್ಲಿ ಸಿಕ್ಕಿದ್ದವು. ಆದರೆ, ಯಾವ ವಿಡಿಯೋದಲ್ಲೂ ಅವರ ಮುಖ ಕಂಡಿರಲಿಲ್ಲ. ಹಾಗಿದ್ದರೂ ತನಿಖೆಯ ವೇಳೆ ಇದು ಪ್ರಜ್ವಲ್ ರೇವಣ್ಣನೇ ಅಂತಾ ಗುರುತಿಸಲು ಸಾಧ್ಯವಾಗಿದ್ದು ಮಚ್ಚೆ ಹಾಗೂ ಎಡಗೈ ಮೇಲಿನ ಗಾಯದ ಮಾರ್ಕ್!!
ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷ ಪ್ರಕಟವಾಗುತ್ತಿದ್ದಂತೆ ಎಸ್ಐಟಿ ತಂಡವು ಪತ್ರಿಕಾಗೋಷ್ಠಿಯನ್ನು ನಡೆಸಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಅದರಲ್ಲಿ ಹಾಸನ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪಿನ್ ಡ್ರೈವ್ ಸರಬರಾಜು ಮಾಡಲಾಗಿತ್ತು. ಈ ಹಿನ್ನಲೆ ರಾಜ್ಯ ಸರ್ಕಾರ ನಮ್ಮ ನೇತೃತ್ವದಲ್ಲಿ ಎಸ್ ಐಟಿ ಮಾಡಲಾಗಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿ ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಪೆನ್ ಡ್ರೈವ್ ವಿತರಿಸಿದ್ರು ಅದರಲ್ಲಿ ಬಹಳ ಹೆಣ್ಣು ಮಕ್ಕಳು ಅಶ್ಲೀಲ ವಿಡಿಯೋ ಇತ್ತು. ಇದರಿಂದ ಸರ್ಕಾರ SIT ರಚನೆ ಮಾಡಿತ್ತು. ಆ ಸಮಯದಲ್ಲಿ ನಾಲ್ಕು ಸಂತ್ರಸ್ಥರು ದೂರು ನೀಡಿದ್ರು. ಆರು ಕೇಸ್ ಗಳು ಒಟ್ಟು ರಿಜಿಸ್ಟರ್ ಆಗಿದ್ವು . ಹೊಳೆನರಸೀಪುರದಲ್ಲಿ ಒಂದು ಕೇಸ್, ಮೂರು ಸಿಐಡಿಯಲ್ಲಿ ರಿಜಿಸ್ಟರ್ ಆಗಿತ್ತು. 5 ಕೇಸ್ ತನಿಖೆ ಪೂರ್ಣಗೊಂಡಿದೆ, ಚಾರ್ಜ್ ಶೀಟ್ ಆಗಿದೆ. ಕಳೆದ ಡಿಸೆಂಬರ್ 31 ಟ್ರಯಲ್ ಕೋರ್ಟ ಗೆ ಹಸ್ತಾಂತರ ಆಗಿತ್ತು. ಜ.3 ರಿಂದ ಒಂದು ಕೇಸ್ ನಿಂದ ಟ್ರಯಲ್ ಪ್ರಾರಂಭವಾಯ್ತು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಕುರಿತಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಹಲವಾರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಸಮಯದಲ್ಲಿ ನೂರಾರು ವಿಡಿಯೋಗಳನ್ನು ಸ್ವತಃ ಚಿತ್ರೀಕರಿಸಿದ್ದರು. ಈ ಎಲ್ಲಾ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ತಮ್ಮ ಮುಖ ಎಲ್ಲಿಯೂ ಕಾಣಿಸದಂತೆ ಅವರು ಎಚ್ಚರಿಕೆ ವಹಿಸಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಅದೆಷ್ಟೇ ಬುದ್ಧಿವಂತನಾಗಿದ್ದರೂ, ವಿಡಿಯೋದಲ್ಲಿ ಮಾಜಿ ಸಂಸದನ ಎಡಗೈ ಮಧ್ಯದ ಬೆರಳಿನಲ್ಲಿರುವ ಮಚ್ಚೆ ಮತ್ತು ಎಡಗೈಯಲ್ಲಿ ಗಾಯದ ಗುರುತು ಸೇರಿದಂತೆ ದೇಹದ ಕೆಲವು ಭಾಗಗಳಿಂದ ಇದು ಪ್ರಜ್ವಲ್ ರೇವಣ್ಣನೇ ಎಂದು ಗುರುತಿಸಲಾಗಿತ್ತು. ಇದೆಲ್ಲವೂ ವಿಡಿಯೋಗಳಲ್ಲಿ ಗೋಚರವಾಗಿತ್ತು ಎಂದು ಲೈಂಗಿಕ ಪ್ರಕರಣಗಳ ತನಿಖೆ ನಡೆಸಿದ ಎಸ್‌ಐಟಿಯ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಫಾರ್ಮ್‌ಹೌಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ, ತೋಟದ ಮನೆಯಲ್ಲಿದ್ದ ಸೇವಕರ ಕ್ವಾಟ್ರಸ್‌ನಲ್ಲಿ ತನ್ನ ಪೆಟಿಕೋಟ್ ಬಿಟ್ಟುಹೋಗಿದ್ದಳು. ನಾವು ತೋಟದ ಮನೆಯನ್ನು ಜಾಲಾಡಿದಾಗ, ಕಪಾಟಿನಲ್ಲಿ ಪೆಟಿಕೋಟ್ ಕಂಡುಬಂದಿತ್ತು. ಪೆಟಿಕೋಟ್ ಮೇಲಿನ ವೀರ್ಯದ ಕುರುಹುಗಳು ಪ್ರಜ್ವಲ್ ಅವರ ವೀರ್ಯ ಕುರುಹುಗಳಿಗೆ ಹೊಂದಿಕೆಯಾಗಿದ್ದವು ಮತ್ತು ಮಹಿಳೆಯ ಡಿಎನ್‌ಎ ಕುರುಹುಗಳು ಅದರ ಮೇಲೆ ಕಂಡುಬಂದಿವೆ. ಘಟನೆ ನಡೆದು ಮೂರು ವರ್ಷಗಳು ಕಳೆದಿದ್ದರೂ ಯಾರೂ ಪೆಟಿಕೋಟ್ ಅನ್ನು ಮುಟ್ಟಿರಲಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಗಾಳಿಯಲ್ಲಿ ಆರ್ದ್ರತೆ ಮತ್ತು ತೇವಾಂಶ ಇದ್ದಾಗ ವೀರ್ಯ ಕುರುಹುಗಳು ಹಾಳಾಗುತ್ತವೆ. ಆದರೆ, ಈ ಸಂದರ್ಭದಲ್ಲಿ, ಪೆಟಿಕೋಟ್ ಮೇಲಿನ ದ್ರವದ ಶೇಖರಣೆಗಳು ಹಾಗೆಯೇ ಇದ್ದವು ಮತ್ತು ಅದು ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಂಗ್ರಹಣೆ ಭಾರೀ ಸುಲಭ ಮಾಡಿತ್ತು’ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದರೊಂದಿಗೆ ಲೈಂಗಿಕವಾಗಿ ಉದ್ರೇಕಗೊಂಡಾಗ ಪುರುಷರ ಜನನೇಂದ್ರಿಯ ಉಬ್ಬಿಕೊಳ್ಳುತ್ತದೆ. ರಕ್ತ ಸಂಚಲನವು ಪ್ರವಾಹ ರೀತಿಯಾಗಿ ಜನನೇಂದ್ರಿಯದಲ್ಲಿ ತುಂಬಿಕೊಳ್ಳುವುದರಿಂದ ಅದರ ಮೇಲ್ಮೈ ನಲ್ಲಿ ಮೇಲೆ ಕೆಲವು ಬದಲಾವಣೆಗಳು ಆಗುತ್ತವೆ. ಜನನೇಂದ್ರಿಯ ಮೇಲ್ಮೈ ಮೇಲೆ ಅದು ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಕಾಣದಿರುವ ರಕ್ತನಾಳುಗಳು ಉಬ್ಬಿಕೊಂಡು ಮೇಲ್ನೋಟಕ್ಕೆ ಗೋಚರಿಸುತ್ತವೆ. ಅದರ ಜೊತೆಗೆ, ಆ ಭಾಗದ ಚರ್ಮದ ವಿನ್ಯಾಸ, ಚರ್ಮದ ಹಿಗ್ಗುವಿಕೆಯಿಂದಲೂ ಜನನೇಂದ್ರಿಯವು ಒಂದು ನಿರ್ದಿಷ್ಟ ಆಕಾರಕ್ಕೆ ಹಿಗ್ಗುತ್ತದೆ. ಜನನೇಂದ್ರಿಯವು ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಕಾಣದಿದ್ದ ಮಚ್ಚೆ ಗುರುತು, ಗುಳ್ಳೆ ಇತ್ಯಾದಿಗಳು ಅದು ಹಿಗ್ಗಿದಾಗ ಸ್ಪಷ್ಟವಾಗಿ ಗೋಚರಿಸುತ್ತವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಜನನೇಂದ್ರಿಯದ ಉಬ್ಬುವಿಕೆಯಿಂದಾಗುವ ಅದರ ಆಕಾರದಲ್ಲಿನ ಬದಲಾವಣೆಗಳೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಇದೊಂದು ರೀತಿ ‘ಫಿಂಗರ್ ಪ್ರಿಂಟ್’ ಇದ್ದಂತೆ. ಹೇಗೆ ಫಿಂಗರ್ ಪ್ರಿಂಟ್ ಆಧಾರದಲ್ಲಿ ನಾವು ಅಪರಾಧಿಗಳನ್ನು ಗುರುತು ಹಚ್ಚುತ್ತೇವೆಯೋ ಹಾಗೆ, ಲೈಂಗಿಕ ಆರೋಪಗಳಲ್ಲಿ ಸಿಕ್ಕ ವಿಡಿಯೋಗಳಿಂದ ಜನನೇಂದ್ರಿಯ ಮೇಲೆ ಆಗುವ ಬದಲಾವಣೆಗಳಿಂದಲೇ ಇದು ಇಂಥವರದ್ದೇ ಎಂದು ಪತ್ತೆ ಹಚ್ಚಲಾಗುತ್ತದೆ.
ವಿಡಿಯೋಗಳಿಂದ ಸ್ಕ್ರೀನ್ ಶಾಟ್ ಗಳನ್ನು, ಆರೋಪಿಯ ದೇಹದಿಂದ ಪಡೆದ ಫೋಟೋಗಳನ್ನು ‘ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನೆಟಲ್ ಫೀಚರ್ಸ್’ ತಂತ್ರಜ್ಞಾನಕ್ಕೆ ಒಳಪಡಿಸಲಾಗುತ್ತದೆ. ಅದನ್ನು ಫಾರೆನ್ಸಿಕ್ ತಂಡದಿಂದ ನಿಯೋಜನೆಯಾಗಿರುವ ಚರ್ಮ ವೈದ್ಯರು, ಮೂತ್ರಶಾಸ್ತ್ರ ತಜ್ಞರು, ಫಾರೆನ್ಸಿಕ್ ಮೆಡಿಕಲ್ ಸ್ಪೆಷಲಿಸ್ಟ್ ಗಳು ಅಧ್ಯಯನ ಮಾಡುತ್ತಾರೆ. ಅವರೆಡರ ಹೋಲಿಕೆಯಿಂದ ವಿಡಿಯೋದಲ್ಲಿರುವ ಜನನೇಂದ್ರಿಯವು, ಆರೋಪಿಯ ಜನನೇಂದ್ರಿಯಕ್ಕೆ ಹೋಲುತ್ತದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಜನನೇಂದ್ರಿಯ ಸಂಚರಿಸುವಾಗ ಸುತ್ತಲಿನ ಸ್ನಾಯುಗಳಲ್ಲಿ ಆಗುವ ಬದಲಾವಣೆಗಳನ್ನೂ ಸಹ ಪರಿಗಣಿಸಲಾಗುತ್ತದೆ. ವಿಡಿಯೋದ ಸ್ಕ್ರೀನ್ ಶಾಟ್ ಗಳಲ್ಲಿನ ಜನನೇಂದ್ರಿಯ ಹಾಗೂ ಇನ್ನಿತರ ಭಾಗಗಳ ಶಾರೀರಿಕ ವಿವರಣೆಗಳು, ಆರೋಪಿಯ ಶರೀರದ ಭಾಗಗಳ ಫೋಟೋಗಳು ಹೋಲಿಕೆಯಾದಲ್ಲಿ, ವಿಡಿಯೋಗಳಲ್ಲಿರುವುದು ಇದೇ ಆರೋಪಿ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Comments are closed.