Uppinangady: ಉಪ್ಪಿನಂಗಡಿ: ದ್ವಿ ಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಸವಾರ ಮೃ*ತ್ಯು

Uppinangady: ಉಪ್ಪಿನಂಗಡಿ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಡಿಕ್ಕಿಯಾಗಿ ದ್ವಿಚಕ್ರ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಆ. 02 ರಂದು ಶನಿವಾರ ಬೆಳಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಉಪ್ಪಿನಂಗಡಿಯ ಮಠದ ನಿವಾಸಿ ಹಾಗೂ ಫ್ಯಾಷನ್ ವರ್ಲ್ಡ್ ಜವುಳಿ ಅಂಗಡಿಯ ಮಾಲಕ ಇಬ್ರಾಹೀಂ ಎಂದು ಗುರುತಿಸಲಾಗಿದೆ. ಅವರು ಮಠದಿಂದ ಉಪ್ಪಿನಂಗಡಿಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾದರೂ, ಅಷ್ಟ್ರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Comments are closed.