Prajwal Revanna Case: ಅತ್ಯಾಚಾರ ಪ್ರಕರಣ: ದೋಷಿ ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಕಟ ಇಂದು ಮಧ್ಯಾಹ್ನ 2.45ಕ್ಕೆ

Prajwal Revanna Case: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯನ್ನು ಇಂದು ಮಧ್ಯಾಹ್ನ 2.45ಕ್ಕೆ ಕಾಯ್ದಿರಿಸಲಾಗಿದೆ.

ರೇವಣ್ಣ ಪರ ವಕೀಲರು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ನ್ಯಾಯಾದೀಶರಿಗೆ ಮನವಿ ಮಾಡಿದ್ದು, ಈಗಾಗಲೇ ಪ್ರಜ್ವಲ್ ಅವರು ತುಂಬಾ ಅವಮಾನವನ್ನು ಅನುಭವಿಸಿದ್ದಾರೆ. ಅವರಿಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ಅಲ್ಲದೆ ಅವರೊಬ್ಬರು ಸಮಾಜದಲ್ಲಿ ಗಣ್ಯ ವ್ಯಕ್ತಿ, ಅವರ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಅವರ ಶಿಕ್ಷೆ ಪ್ರಮಾಣವನ್ನು ಕಮ್ಮಿ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಅಲ್ಲದೆ ನ್ಯಾಯಾದೀಶರ ಮುಂದೆ ಮಾತನಾಡಿದ ಪ್ರಜ್ವಲ್ ರೇವಣ್ಣ, ನಾಣು ಒಬ್ಬ ಸಂಸದನಾಗಿದ್ದವನು. ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ. ಇದು ರಾಜಕೀಯ ಪಿತೂರಿ. ನನ್ನ ಮೇಲೆ ರಾಜಕೀಯ ಷಡ್ಯಂತರ ಮಾಡಲಾಗಿದೆ. ಈಗಾಗಲೇ ನಾನು ಶಿಕ್ಷೆ ಅನುಭವಿಸಿದ್ದೇನೆ. ನನ್ನ ತಂದೆ ತಾಯಿಯನ್ನು ನೋಡದೆ ಆರು ತಿಂಗಳಾಯಿತು. ನಾನು ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಬಂದೆ. ನನ್ನ ಬೆಳವಣಿಗೆ ನೋಡಲಾಗದೆ ಇಂಥ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ದಯವಿಟ್ಟು ನನ್ನ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಕೇಳಿಕೊಂಡಿದ್ದಾನೆ.
Comments are closed.