Nagamma: ರಾಜಕುಮಾರ್ ಸಹೋದರಿ ನಾಗಮ್ಮ ನಿಧನ !! ಕೊನೆಗೂ ತಿಳಿಯಲಿಲ್ಲ ‘ಅಪ್ಪು’ ಸಾವಿನ ಸುದ್ದಿ

Nagamma: ವರನಟ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಗಮ್ಮ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರದಲ್ಲಿ ವಾಸವಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ವಯೋಸಹಜವಾಗಿ ಸಾಕಷ್ಟು ಏರುಪೇರಾಗಿತ್ತು.
ಅಣ್ಣಾವ್ರ ಸಹೋದರಿ ನಾಗಮ್ಮ ಅವರಿಗೆ ಮೊಮ್ಮಗ ಪುನೀತ್ ರಾಜ್‌ಕುಮಾರ್ (ಅಪ್ಪು) ನಿಧನರಾಗಿದ್ದು ಗೊತ್ತೇ ಇಲ್ಲ. ಅವರಿಗೆ ಖಂಡಿತ ಆ ಸುದ್ದಿ ಆಘಾತ ತರುತ್ತಿದೆ ಎಂಬ ಕಾರಣಕ್ಕೆ ಅವರಿಗೆ ಹೇಳಿರಲೇ ಇಲ್ಲ. ಸಾಯುವ ಕ್ಷಣದವರೆಗೂ ಅವರಿಗೆ ಪುನೀತ್(Puneeth Rajkumar) ಅವರು ಈ ಲೋಕದಲ್ಲಿ ಇಲ್ಲ ಅಂಬ ಸುದ್ದಿಯೇ ಗೊತ್ತಿರಲಿಲ್ಲ.
ಇದನ್ನೂ ಓದಿ: Mandya: ಮಾಲೀಕನನ್ನು ಅರಸಿ ಡೆಲ್ಲಿಯಿಂದ ಮಂಡ್ಯಕ್ಕೆ 1790 ಕಿ.ಮೀ ಹಾರಿ ಬಂದ ‘ಪ್ರೀತಿಯ ಪಾರಿವಾಳ’!!
Comments are closed.