Donald Trump : ಭಾರತದ ಆರ್ಥಿಕತೆ ನಾಶವಾಗಿ ಹೋಗಲಿ – ಟ್ರಂಪ್ ಹಿಡಿಶಾಪ

Share the Article

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆಯ ಹುಚ್ಚಾಟ ಮುಂದುವರೆದಿದೆ. ಇದೀಗ ಭಾರತದ ವಿರುದ್ಧ ಶೇ. 25 ಸುಂಕ ಹೇರಿದ ಬೆನ್ನಲ್ಲೇ ಟ್ರಂಪ್‌ ಅವರು ಭಾರತ ಮತ್ತು ರಷ್ಯಾ ವಿರುದ್ಧ ತಮ್ಮ ಟೀಕಾಪ್ರಹಾರ ಮುಂದುವರಿಸಿ ದ್ದಾರೆ. ಅಲ್ಲದೆ ಈ ಎರಡೂ ದೇಶಗಳ ನೆಲಕಚ್ಚಿದ ಆರ್ಥಿಕತೆ (ಡೆಡ್‌ ಎಕಾನಮಿ) ಗಳು ಒಟ್ಟಿಗೆ ಸೇರಿ ನಾಶವಾಗಲಿ ಎಂದು ಅವರುಶಾಪ ಹಾಕಿದ್ದಾರೆ.

ರಷ್ಯಾ ಜೊತೆ ಭಾರತ ವ್ಯಾಪಾರ ಸಂಬಂಧ ಹೊಂದಿರುವುದು ಟ್ರಂಪ್ ಅವರ ಈ ಅವಹೇಳನಕಾರಿ ಮಾತುಗಳಿಗೆ ಕಾರಣ. ‘ರಷ್ಯಾ ಜೊತೆ ಭಾರತ ಏನು ಮಾಡುತ್ತೆ ಎಂದು ನನಗೇನೂ ಆಗಬೇಕಾದ್ದಿಲ್ಲ. ಅವೆರಡೂ ಸತ್ತ ಆರ್ಥಿಕತೆಗಳು ಒಟ್ಟಿಗೆ ನೆಲಕಚ್ಚುವಂತಾಗಬೇಕು’ ಎಂದು ಟ್ರಂಪ್ ಹಿಡಿಶಾಪ ಹಾಕಿದ್ದಾರೆ.

ಅಲ್ಲದೆ ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರು ವಿಧಿಸುವ ತೆರಿಗೆ ಬಹಳ ಅಧಿಕ. ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲೊಂದು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಂಪ್‌ ಸಿಟ್ಟೇಕೆ?

* ಭಾರತ ಜತೆಗೆ ಅಮೆರಿಕದ ವ್ಯಾಪಾರ ಒಪ್ಪಂದದಲ್ಲಿ ಕಾಣದ ನಿರೀಕ್ಷಿತ ಪ್ರಗತಿ.

* ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತ, ಅಧ್ಯಕ್ಷ ಟ್ರಂಪ್‌ಗೆ ಹತಾಶೆ.

* ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿ.

* ಸಾಕಷ್ಟು ವಿಷಯಗಳಲ್ಲಿ ಅಮೆರಿಕ-ಭಾರತದ ಮಧ್ಯೆ ಮೂಡದ ಒಮ್ಮತ?

ಇದನ್ನೂ ಓದಿ: Auto price hike: ಆಟೋ ದರ ಏರಿಕೆ – ಆಟೋ ಚಾಲಕರಿಗೆ ಶಾಕ್ ನೀಡಿದ ಪೊಲೀಸ್ ಇಲಾಖೆ

Comments are closed.