Auto price hike: ಆಟೋ ದರ ಏರಿಕೆ – ಆಟೋ ಚಾಲಕರಿಗೆ ಶಾಕ್ ನೀಡಿದ ಪೊಲೀಸ್ ಇಲಾಖೆ

Share the Article

Auto price hike: ಆಟೋ ಚಾಲಕರು ಬಹಳ ದಿನಗಳಿಂದ ಆಟೋರಿಕ್ಷಾಗಳ ಪ್ರಯಾಣ ದರ ಏರಿಕೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು. ಕಳೆದ 15 ದಿನಗಳ ಹಿಂದೆ ಇದಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದರು. ಕನಿಷ್ಠ ದರವನ್ನು 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಅವರ ಆದೇಶದಂತೆ ಇಂದಿನಿಂದ ಪರಿಷ್ಕೃತ ದರ ಬಳಕೆಗೆ ಬರಲಿದೆ. ಆದರೆ ಇಂದೆ ಬೆಂಗಳೂರಿನ ಆಟೋ ಚಾಲಕರಿಗೆ ಪೊಲೀಸ್‌ ಇಲಾಖೆ ಶಾಕ್‌ ನೀಡಿದೆ.

ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ‌ ಮಾಡಿದ್ರೆ ಕಠಿಣ ಕ್ರಮ ಕೈಗೊಳಳುವ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಒಂದು ವೇಳೆ ಪ್ರಯಾಣಿಕರಿಂದ ದೂರುಗಳು ಬಂದರೆ ಅದರ ಬೆನ್ನಲ್ಲೇ ಹೆಚ್ಚುವರಿ ದರ ವಸೂಲಿ ಮಾಡುವ ಆಟೋ ಚಾಲಕರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿದೆ.

ಅತಿ ಹೆಚ್ಚು ಬಾಡಿಗೆ ಹಾಗೂ ಸಾರ್ವಜನಿಕರು ಕರೆದ ಕಡೆಗೆ ಹೋಗಲು ಬಹುತೇಕ ಆಟೋ ಚಾಲಕರು ನಿರಾಕರಿಸುತ್ತಾರೆ. ಈ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಚರಣೆ ಮಾಡಿ ಆ ಮೂಲಕ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಪರಿಷ್ಕ್ರತ ದರದಂತೆ ಮೊದಲ ಎರಡು ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ದರ 36 ರೂಪಾಯಿಗಳಿರಲಿದೆ. ಎರಡು ಕಿಲೋಮೀಟರ್ ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ ಈ ಮೊದಲು ಇದ್ದ ದರವನ್ನು 15 ರೂ.ನಿಂದ 18 ರೂ.ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಎರಡು ಕಿ.ಮೀ ನಂತರದ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ 3 ರೂಪಾಯಿ ದರ ಏರಿಸಲಾಗಿದೆ.

ಇದನ್ನೂ ಓದಿ: Dharmasthala Burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆ – ಸಿಎಂಗೆ ಮಾಹಿತಿ ನೀಡಿದ ಡಿಜಿಐಜಿ ಸಲೀಂ

Comments are closed.