Chattisgarh: : ‘ರಾಧೇ.. ರಾಧೇ..’ ಎಂದು ಶುಭ ಕೋರಿದ ನರ್ಸರಿ ವಿದ್ಯಾರ್ಥಿನಿ – ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಶಿಕ್ಷಕಿ

Share the Article

Chhattisgarh: ‘ರಾಧೇ.. ರಾಧೇ..’ ಎಂದು ಶುಭ ಕೋರಿದ ಮೂರೂವರೆ ವರ್ಷದ ವಿದ್ಯಾರ್ಥಿನಿಗೆ ಶಿಕ್ಷಕಿಯೊಬ್ಬಳು ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಘಟನೆ ನಡೆದಿದೆ.

ಛತ್ತೀಸ್ಗಡದ ದರ್ಗ್‌ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಮೂರು ವರ್ಷದ ಮಗುವೊಂದು ತನ್ನ ಶಿಕ್ಷಕಿಗೆ ‘ರಾಧೇ.. ರಾಧೇ..’ ಎಂದು ಶುಭ ಕೋರಿದ ತಪ್ಪಾಗಿದೆ. ಆ ಶಿಕ್ಷಕಿ ವಿದ್ಯಾರ್ಥಿನಿಗೆ ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ್ದು, ಇದೀಗ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

‘ಹಲ್ಲೆಗೊಳಗಾದ ಬಾಲಕಿಯು, ಶಾಲೆಯ ನರ್ಸರಿಯಲ್ಲಿ ಓದುತ್ತಿದ್ದಾಳೆ. ಧಾರ್ಮಿಕ ಭಾವನೆಗಳಿಗೆ ಅಡ್ಡಿ, ಮಗುವಿನ ಮೇಲೆ ಕ್ರೌರ್ಯ ಹಾಗೂ ಇತರ ಅಪರಾಧಗಳ ಕಾರಣಕ್ಕೆ ಪ್ರಾಂಶುಪಾಲೆ ಇಲಾ ಎವನ್‌ ಕಾಲ್ವಿನ್‌ ಅವರನ್ನು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: Suicide: ಖಾಸಗಿ ಶಿಕ್ಷಣ ಸಂಸ್ಥೆಯ ಫೈನಾನ್ಸ್ ಆಫೀಸರ್ ಆತ್ಮ*ಹತ್ಯೆ!

Comments are closed.