Dharmasthala Burial case: ಪ್ರಣವ್ ಮೊಹಂತಿ ಗೃಹ ಸಚಿವರ ಭೇಟಿ – ಧರ್ಮಸ್ಥಳ ಕುರಿತು ಎಸ್ಐಟಿ ವರದಿ ಕೊಡುವವರೆಗೆ ನಾವು ಏನನ್ನು ಮಾತಾಡಲ್ಲ – ಗೃಹಸಚಿವ ಪರಮೇಶ್ವರ್

Dharmasthala Burial case: ಬೆಂಗಳೂರಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಧರ್ಮಸ್ಥಳ ಪ್ರಕರಣ ಕುರಿತಂತೆ ಮಾತನಾಡಿದ ಅವರು ಧರ್ಮಸ್ಥಳ ಕುರಿತು ಎಸ್ಐಟಿ ವರದಿ ಕೊಡುವ ವರೆಗು ನಾವು ಏನನ್ನು ಮಾತಾಡಲ್ಲ. ತನಿಖೆ ನಡೆಯುವಾಗ ನಾವು ಮಾತಾಡೋದು ಸಮಂಜಸ ಅಲ್ಲ ಎಂದು ಹೇಳಿದರು.

ಇನ್ನು ಇಂದು ಬೆಳಿಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಭೇಟಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವರು ಕೇಂದ್ರದ ಹುದ್ದೆಗಳಿಗೆ ಪ್ರಣವ್ ಮೊಹಾಂತಿ ನೇಮಕ ಆಗಿದ್ದಾರೆ. ಅದಕ್ಕೆ ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್. ತಕ್ಷಣವೇ ಯಾವುದೋ ಹುದ್ದೆ ಕೊಡ್ತಾರೆ ಎಂಬುದು ಇಲ್ಲ. ಅವರು ಅದನ್ನು ತಿಳಿಸಲು ನನ್ನ ಬಳಿ ಬಂದಿದ್ದರು ಎಂದು ಹೇಳಿದ್ದಾರೆ.
ಫೇಕ್ ನ್ಯೂಸ್, ಆನ್ ಲೈನ್ ಗೇಮ್ ಗಳ ಬಗ್ಗೆ ಕೆಲ ನಿಯಮ ಗಳನ್ನು ತರುತ್ತಿದ್ದೇವೆ. ಇದೆಲ್ಲವರ ಅವರ ವ್ಯಾಪ್ತಿಗೆ ಬರುತ್ತದೆ. ಈ ಸಂಬಂಧವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ಕರೆದಿದ್ದೇವೆ. ಇದರ ಬಗ್ಗೆ ಬ್ರೀಫಿಂಗ್ ಮಾಡಲು ಬಂದಿದ್ದರು, ಅದು ಬಿಟ್ಟು ಬೇರೆ ಏನು ಚರ್ಚೆ ಮಾಡಿಲ್ಲ. ಧರ್ಮಸ್ಥಳ ಕುರಿತು ಎಸ್ಐಟಿ ಯವರು ತನಿಖೆ ಮಾಡ್ತಿದ್ದಾರೆ. ಅವರು ವರದಿ ಕೊಡುವ ತನಕ, ಅವರ ಜೊತೆ ಆಗಲಿ, ಇಲ್ಲಿ ಆಗಲಿ ಮಾತಾಡೋಕೆ ಹೋಗಲ್ಲ. ತನಿಖೆ ನಡೆಯುವಾಗ ಪ್ರತಿಕ್ರಿಯೆ ಕೊಡೋದು ಸಮಂಜಸ ಅಲ್ಲ ಅಂತಾ ನಾವು ಯಾರು ಮಾತಾಡೋಕೆ ಹೋಗಲ್ಲ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವ ಫೋಸ್ಟ್ ಗಳ ಬಗ್ಗೆ ವಾಚ್ ಮಾಡ್ತಿದ್ದೇವೆ. ಅದರಲ್ಲಿ ಸಮಾಜದಲ್ಲಿ ಒಂದಷ್ಟು ಭಾವನೆಗಳು ಸೃಷ್ಟಿ ಆದರೆ, ಅದನ್ನು ನಿಲ್ಲಿಸೋಕೆ ಪ್ರಯತ್ನ ಮಾಡುತ್ತೇವೆ. ಹಿಂದೆ ಕಮ್ಯುನಿಲ್ ಫೋಸ್ಟಿಂಗ್ ಬಗ್ಗೆ ಎಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೀತ್ತಿತ್ತು. ಅದಕ್ಕೆ ನಾವು ಕ್ರಮ ತಗೊಂಡಿದ್ದೇವೆ ಈಗಾಗಲೇ ಅದೆಲ್ಲವೂ ನಿಂತಿದೆ. ಈಗ ಅದೇ ರೀತಿ ಇಲ್ಲ ಸಲ್ಲದ ಫೋಸ್ಟಿಂಗ್ ಹಾಕಿದ್ರೆ ಕ್ರಮವನ್ನು ತಗೊಳ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಣವ್ ಮೊಹಾಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ..? ಇದ್ದಾರೆ ಅವ್ರು, ಅವರೇನು ಕರೆದಿದ್ದಾಗ ನಾವು ಕಳುಹಿಸ್ತಿದ್ದೇವೆ ಎಂಬುದೇನು ಆಗಿಲ್ಲ. ಕೇಂದ್ರ ಸರ್ಕಾರ ನಮಗೆ ಹೇಳಬೇಕು, ಇಂತಹ ಜಾಗಕ್ಕೆ ಅವರನ್ನು ನೇಮಕ ಮಾಡ್ತಿದ್ದೇವೆ, ಅವರನ್ನು ಕಳುಹಿಸಿಕೊಡಿ ಎಂದು. ನಾವು ಕಳುಹಿಸ್ತೀವೋ ಬಿಡ್ತೀವೋ ಅದು ನಮಗೆ ಬಿಟ್ಟ ವಿಚಾರ. ಆದರೆ ಅವರು ಇನ್ನೂಈ ವಿಚಾರವಾಗಿ ಯಾವುದೇ ಪತ್ರ ಬರೆದೇ ಇಲ್ಲವಲ್ಲ. ಅದಕ್ಕೇನೇ ಬೊಬ್ಬೆ ಹೊಡೆದ್ರೆ ಹೇಗೆ..? ಅವರು ಸೆಲೆಕ್ಟ್ ಆಗಿದ್ದಾರೆ ಅಷ್ಟೇ. ಎಂದು ಹೇಳಿದರು.
ಇದನ್ನೂ ಓದಿ: Dharmasthala Case: ಪಾಯಿಂಟ್ 6 ರಲ್ಲಿ ದೊರಕಿದ ಅಸ್ಥಿಪಂಜರದ ಅವಶೇಷ FSLಗೆ ರವಾನಿಸದ SIT: ಕಾರಣವೇನು?
Comments are closed.