Cam Com Technologies: ಭಾರತದ ಕ್ಯಾಮ್ ಕಾಮ್ ಟೆಕ್ನಾಲಜೀಸ್ ನಿಂದ, ವಿಮಾವಲಯದಲ್ಲಿ ಜಾಗತಿಕ ಎಐ ನಿಯೋಜನೆಯಲ್ಲಿ ERGO ಗ್ರೂಪ್ ಎಜಿ ಜೊತೆ ಕಾರ್ಯತಂತ್ರದ ಪಾಲುದಾರಿಕೆ ಘೋಷಣೆ!

Share the Article

Cam Com Technologies: ಭಾರತದ ಡೀಪ್ ಟೆಕ್ ಇಕೋ ಸಿಸ್ಟಮ್ ನ ಪ್ರಮುಖ ಮೈಲಿಗಲ್ಲೊಂದರಲ್ಲಿ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಶಸ್ತಿ ವಿಜೇತ, ಉದ್ಯಮೇತರ ಕಂಪ್ಯೂಟರ್ ವಿಶನ್ ಕಂಪನಿಯಾದ ಕ್ಯಾಮ್ ಕಾಮ್ ಟೆಕ್ನಾಲರ್ಜಿಸ್, ಯುರೋಪಿನ ಪ್ರಮುಖ ವಿಮಾ ಸಂಸ್ಥೆಗಳಲ್ಲಿ ಒಂದಾದ ಇಆರ್ ಜಿಒ ಗ್ರೂಪ್ ಎಜಿಯೊಂದಿಗೆ ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಮಾಡಿಕೊಂಡಿದೆ. ಈ ಸಹಯೋಗದಡಿ ಕ್ಯಾಮ್ ಕಾಮ್, ಇಆರ್ ಜಿಒದ ಎಐ ಚಾಲಿತ ದೃಶ್ಯ ತಪಾಸಣಾ ಪರಿಹಾರಕ್ಕಾಗಿ ಪ್ರಾಥಮಿಕ ತಂತ್ರಜ್ಞಾನ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ. ಇದೀಗ ಅನೇಕ ಯುರೋಪಿಯನ್ ಮಾರುಕಟ್ಟೆಗಳಲ್ಲಿ

ಈ ಪಾಲುದಾರಿಕೆ, ಬೆಳೆಯುತ್ತಿರುವ ಕ್ಯಾಮ್ ಕಾಮ್ ನ ಜಾಗತಿಕ ಹೆಜ್ಜೆಗುರುತನ್ನು ಸೂಚಿಸುತ್ತದೆ, ಮತ್ತು ನಿರ್ಣಾಯಕ ವಲಯಗಳಿಗೆ ಉದ್ಯಮ ಸಿದ್ದ ಎಐ ಪರಿಹಾರಗಳನ್ನು ಒದಗಿಸುವ ವಿಶ್ವ ದರ್ಜೆಯ ವೇದಿಕೆಯಾಗಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇಂತಹ ಪರಿಹಾರಗಳು ಈಗಾಗಲೇ ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾದಲ್ಲಿ ಲೈವ್ ಆಗಿವೆ, ಯುರೋಪಿನ ಇತರ ಇಆರ್ ಜಿಒ ಮಾರುಕಟ್ಟೆಗಳಲ್ಲಿ ಹಂತಹಂತವಾಗಿ ರೋಲ್ ಔಟ್ ಗಳನ್ನು ಯೋಜಿಸಲಾಗಿದೆ.

ಕ್ಯಾಮ್ ಕಾಮ್ ಸ್ವಾಮ್ಯದ ಲಾರ್ಜ್ ವಿಷನ್ ಮಾಡೆಲ್ (ಎಲ್ ವಿಎಂ) ಮೇಲ್ಮ ಮೇಲಿನ ದೋಷ ಮತ್ತು ಹಾನಿಯನ್ನು ಪತ್ತೆಹಚ್ಚಲು ವಿಶ್ವದ ಮೊದಲ ಡೊಮೇನ್ ನಿರ್ದಿಷ್ಟ ಎಐ ಎಂಜಿನ್ 450 ದಶಲಕ್ಷಕ್ಕೂ ಹೆಚ್ಚು ಗ್ರಾಹಕರೇ ಮೌಲ್ವಿಕರಿಸಿದ ಚಿತ್ರಗಳ ಡೇಟಾಸೆಟ್ ನಲ್ಲಿ ತರಬೇತಿ ಪಡೆದಿದೆ. ಇದು ವಿಮಾ ಗ್ರಾಹಕರಿಗೆ ತಮ್ಮ ಸ್ಮಾರ್ಟ್ ಫೋನ್ ಗಳ ಮೂಲಕ ವಾಹನಗಳು ಅಥವಾ ಆಸ್ತಿಯ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ನಿಖರ, ಆಡಿಟ್ ಮಾಡಬಹುದಾದ ಮತ್ತು ಸ್ನೇಲೆಬಲ್ ಪೂರ್ವ ತಪಾಸಣೆ ಮತ್ತು ಹಾನಿಯ ಮೌಲ್ಯಮಾಪನಕ್ಕೆ ಚಾಲನೆ ನೀಡುತ್ತದೆ. ಇದು ವಸ್ತುನಿಷ್ಠತೆಯನ್ನು ಕಡಿಮೆ ಮಾಡುತ್ತದೆ, ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ವಿಮಾದಾರರು ಮತ್ತು ಗ್ರಾಹಕರಿಗೆ ಪಾರದರ್ಶಕತೆ ಹೆಚ್ಚಿಸುತ್ತದೆ.

ನಾವು ಇಆರ್ ಜಿಒನ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರರಾಗಿರುವುದಕ್ಕೆ ಹೆಮ್ಮೆಪಡುತ್ತೇವೆ,” ಎಂದು ಕ್ಯಾಮ್ ಕಾಮ್ ಟೆಕ್ನಾಲಜೀಸ್ ನ ಯುರೋಪ್ ನಿರ್ದೇಶಕಿ ಮತ್ತು ಅಧ್ಯಕ್ಷೆ ಗೀತಾ ಶಾಮ್ ಹೇಳಿದರು. ಈ ಪಾಲುದಾರಿಕೆ ನಮ್ಮ ಜಾಗತಿಕ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲು ಮತ್ತು ವಿಮಾವಲಯದ ನಿರ್ದಿಷ್ಟ ಆಗತ್ಯಗಳಿಗೆ ಅನುಗುಣವಾಗಿ ಸೈಲೆಬಲ್, ಉನ್ನತ-ಕಾರ್ಯಕ್ಷಮತೆಯ ಎಐ ಪರಿಹಾರಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ,’ ಎಂದು ಹೇಳಿದ್ದಾರೆ.

‘ಉತ್ತಮ ತಂತ್ರಜ್ಞಾನ ಕೇವಲ ನಾವೀನ್ಯತೆ ಮಾತ್ರವಲ್ಲ, ಅದು ಪ್ರಾಯೋಗಿಕ, ವಿಸ್ತರಿಸಬಹುದಾದ ಮತ್ತು ಅರ್ಥಗರ್ಭಿತ ವ್ಯವಸ್ಥೆಯಾಗಿರಬೇಕು,” ಎಂದು ಮುಖ್ಯ ಡಿಜಿಟಲ್ ಅಧಿಕಾರಿ ಮತ್ತು ಇಆರ್ ಜಿಒ ಗ್ರೂಪ್ ಎಜಿಯ ನಿರ್ವಹಣಾ ಮಂಡಳಿಯ ಸದಸ್ಯ ಮಾರ್ಕ್ ಕ್ಲಿನ್ ಹೇಳಿದರು. ‘ಕ್ಯಾಮ್ ಕಾಮ್ ನ ಎಐ ಪರಿಹಾರ ಈ ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆ, ಮತ್ತು ಈ ಸಹಯೋಗವನ್ನು ಭಾರತವನ್ನು ಮೀರಿ ಮತ್ತು ನಮ್ಮ ಯುರೋಪಿಯನ್ ಮಾರುಕಟ್ಟೆಗಳಿಗೆ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ, ಅಲ್ಲಿ ನಾವು ವಾಹನ ಮತ್ತು ಮನೆ ಮಾಲೀಕರ ವಿಮಾ ಯೋಜನೆಗಳಲ್ಲಿ ತೊಡಗಿ ಕೊಂಡಿದ್ದೇವೆ ಒಟ್ಟಿನಲ್ಲಿ ನಾವು ನಮ್ಮ ಗ್ರಾಹಕರಿಗೆ ತಮ್ಮ ಕೇಸಗಳೊಂದಿಗೆ ವಿಮಾ ಅನುಭವವನ್ನು ಸರಳಗೊಳಿಸುವ ಮತ್ತು ಡಿಜಿಟಲೀಕರಣಗೊಳಿಸುವ ಗುರಿ ಹೊಂದಿದ್ದೇವೆ.” ಇದು ಪ್ರಾಯೋಗಿಕವಾಗಿ, ಈ ವೇದಿಕೆಯ ದೃಢತೆ, ನಿಖರತೆ ಮತ್ತು ಪ್ರಮಾಣವನ್ನು ಮೌಲಿಕರಿಸಲು ಸಹಾಯ ಮಾಡುತ್ತದೆ, ಇಆರ್ ಜಿಒ ಗ್ರೂಪ್ ಎಜಿಯೊಂದಿಗಿನ ಪಾಲುದಾರಿಕೆ, ಈ ಸಹಯೋಗದ ಯಶಸ್ಸು ಮತ್ತು ಪರಿಪಕ್ವತೆಯನ್ನು ಸೂಚಿಸುತ್ತದೆ.

ಎಚ್ ಡಿಎಫ್ ಸಿ ಇಆರ್ ಜಿಒ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥನಿಲ್ ಘೋಷ್, ‘ಕ್ಯಾಮ್ ಕಾಮ್ ನೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆ, ನಮ್ಮ ಆಟೋಮೋಟಿವ್ ಕ್ರೈಮ್ ಗಳು ಮತ್ತು ಅಂಡರ್ ರೈಟಿಂಗ್ ಕಾರ್ಯಾಚರಣೆಗಳಿಗೆ ಗಮನಾರ್ಹ ಸುಧಾರಣೆಗಳನ್ನು ತಂದಿವೆ. ಅವರ ಎಐ ಚಾಲಿತ ತಪಾಸಣಾ ಪರಿಹಾರಗಳು ಹೆಚ್ಚಿನ ದಕ್ಷತೆ, ನಿಖರತೆಯೊಂದಿಗೆ, ಗ್ರಾಹಕರಿಗೂ ಉತ್ತಮ ಅನುಭವ ನೀಡುತ್ತವೆ. ಈ ಸಾಬೀತಾದ ತಂತ್ರಜ್ಞಾನ, ಈಗ ಇಆರ್ ಜಿಒ ಗ್ರೂಪ್ ನ ಜಾಗತಿಕ ಯೋಜನೆಗಳಿಗೆ ಪೂರಕವಾಗಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ,” ಎಂದಿದ್ದಾರೆ.

ಕ್ಯಾಮ್ ಕಾಮ್ ಟೆಕ್ನಾಲಜೀಸ್ ನ ಸಿಇಒ ಅಜಿತ್ ನಾಯರ್ ಮಾತನಾಡಿ, ‘ಕ್ಯಾಮ್ ಕಾಮ್ ಉದ್ಯಮೇತರ ಕಂಪ್ಯೂಟರ್ ಪರಿಹಾರ ವೇದಿಕೆಯಾಗಿ, ವಿಶ್ವ ದರ್ಜೆಯ ಪರಿಹಾರ ಸೂತ್ರಗಳನ್ನು ಹೊಂದಿದ್ದೇವೆ. ಅದು ನಿಖರ ಮತ್ತು ವಿನ್ನರಿಸಬಹುದಾದ ಪರಿಹಾರ ಮಾತ್ರವಲ್ಲ, ಜಾಗತಿಕ ಉದ್ಯಮಗಳು ಮತ್ತು ಸರ್ಕಾರಗಳಿಂದಲೂ ಮಾನ್ಯತೆ ಪಡೆದುಕೊಂಡಿವೆ. ಇಆರ್ ಜಿಒ ಗ್ರೂಪ್ ಎಜಿಯಂತಹ ಗೌರವಾನ್ವಿತ ಬ್ರಾಂಡ್ ನೊಂದಿಗೆ ಕೈ ಜೋಡಿಸುವ ಮೂಲಕ, ನಾವು ನಮ್ಮ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದ್ದೇವೆ ಮತ್ತು ಭಾರತದಿಂದ ನೈಜ ಪ್ರಪಂಚದ ಪ್ರಭಾವವನ್ನು ಹೆಚ್ಚಿಸುವ ಎಐ ನಾವೀನ್ಯತೆಯನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ, ‘ಎಂದರು.

ಕ್ಯಾಮ್ ಕಾಮ್ ನವೇದಿಕೆಯನ್ನು ಪ್ರಸ್ತುತ ಜಾಗತೀವಾಗಿ 15ಕ್ಕೂ ಹೆಚ್ಚು ವಿಮಾ ಕಂಪನಿಗಳು ನಿಯೋಜಿಸಿವೆ. ಈ ವೇದಿಕೆ ಯುರೋಪ್ ನಲ್ಲಿನ ಜಿಡಿಪಿಆರ್ ಮತ್ತು ಭಾರತದಲ್ಲಿ ಐಆರ್ ಡಿಎಐ ಮಾರ್ಗಸೂಚಿಗಳನ್ನು ಒಳಗೊಂಡಂತೆ ಆಯಾ ಪ್ರದೇಶಗಳ ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತದೆ ಇದು ಭೌಗೋಳಿಕ ಪ್ರದೇಶಗಳಲ್ಲಿ ಸುರಕ್ಷೆತ ಅನುಸರಣೀಯ ಮತ್ತು ಸಮರ್ಥ ಏಕೀಕರಣವನ್ನು ಸಾಧ್ಯವಾಗಿಸಿದೆ.

ಈ ಪಾಲುದಾರಿಕೆ, 2025 ರ ವೇಳೆಗೆ ವಿಮೆಯಲ್ಲಿ ಡಿಜಿಟಲ್ ಲೀಡರ್ ಆಗಬೆಕೆಂಬ ಇಆರ್ ಜೆನ ವಿಶಾಲ ಮಹತ್ವಾಕಾಂಕ್ಷೆಗೆ ಪೂರಕವಾಗಿದೆ ಮತ್ತು ಡಿಸೆಲ್ ಡಾರ್ಫ್ ನಲ್ಲಿರುವ ಇಆರ್ ಜಿಒ ಸ್ಕೆಲ್ ಹಬ್ ನಂತಹ ವೇದಿಕೆಗಳ ಮೂಲಕ ನವೀನ ತಂತ್ರಜ್ಞಾನಗಳಲ್ಲಿ ಈ ಗುಂಪಿನ ನಿರಂತರ ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ, ಐಆರ್ ಡಿಎಐ ಅನುಮೋದನೆಗೆ ಒಳಪಟ್ಟಿರುತ್ತದೆ.

ಇದನ್ನೂ ಓದಿ: Indira Canteen: 52 ಹೊಸ ಇಂದಿರಾ ಕ್ಯಾಂಟೀನ್ – ಟೆಂಡರ್ ಕರೆದ ಪಾಲಿಕೆ

Comments are closed.