Dharmasthala Case: ಗೃಹ ಸಚಿವ ಪರಮೇಶ್ವರ್ ಭೇಟಿಯಾದ ಪ್ರಣವ್ ಮೊಹಾಂತಿ – ಮಹತ್ವ ಪಡೆದುಕೊಂಡ ಭೇಟಿ ವಿಚಾರ

Share the Article

Dharmasthala Case: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸಂಬಂಧ ಸರ್ಕಾರ ನೇಮಿಸಿರುವ ಎಸ್ಐಟಿ ತಂಡದ ನೇತೃತ್ವ ವಹಿಸಿಕೊಂಡಿರುವ ಡಿಜಿಪಿ ಪ್ರಣವ್ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಆಯ್ಕೆಯಾಗಿರುವ ಹಿನ್ನೆಲೆ ಇಂದು ಪ್ರಣವ್ ಮೊಹಾಂತಿ ಗೃಹ ಸಚಿವ ಪರಮೇಶ್ವರ್ ಭೇಟಿಯಾಗಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸ್ತಿರುವ SIT ಮುಖ್ಯಸ್ಥರಾಗಿರುವ ಪ್ರಣವ್ ಮೊಹಾಂತಿ ಅವರು ಸದಾಶಿವನಗರದ ಗೃಹ‌ಸಚಿವ ಪರಮೇಶ್ವರ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿರುವ ಪ್ರಣವ್ ಮೊಹಾಂತಿ ಹೆಸರು ಇರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಗೃಹ ಸಚಿವ ಪರಮೇಶ್ವರ್ ಭೇಟಿಯಾಗಿ ಪ್ರಣವ್ ಮೊಹಾಂತಿ ಏನು ಮಾತುಕತೆ ನಡೆಸಿದ್ದಾರೆ ಅನ್ನುವ ಬಗ್ಗೆ ಇನ್ನಷ್ಟೆ ಮಾಹಿತಿ ಹೊರಬರಬೇಕಷ್ಟೆ.

ಇಡೀ ದೇಶವೇ ಬೆಚ್ಚಿ ಬಿದ್ದಿರುವ ಧರ್ಮಸ್ಥಳ ಪ್ರಕರಣ ಸಂಬಂಧ ಇಡೀ ನಾಗರೀಕ ಸಮಾಜವೇ ಎಸ್ಐಟಿ ತಂಡ ರಚನೆ ಮಾಡಬೇಕೆಂಬ ಒಕ್ಕೊರಲ ಕೂಗಿಗೆ ಸರ್ಕಾರ ತಂಡ ರಚಿಸಿತ್ತು. ಅದರ ನೇತೃತ್ವವನ್ನು ಬಹಳ ನಿಷ್ಟಾವಂತ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ಅವರಿಗೆ ಕೊಡಬೇಕೆಂಬ ಬೇಡಿಕೆಯೂ ಇತ್ತು. ಅದರಂತೆ ಸರ್ಕಾರ ಅವರ ನೇತೃತ್ವದಲ್ಲೇ ಎಸ್ಐಟಿ ತಂಡವನ್ನು ರಚನೆ ಮಾಡಿತು. ಇನ್ನೇನು ತನಿಖೆ ಚುರುಕುಗೊಂಡು ಒಂದು ಹಂತದಲ್ಲಿ ಸಾಗುತ್ತಿರುವಾಗ ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿರುವ ಪ್ರಣವ್ ಮೊಹಾಂತಿ ಹೆಸರು ಇರುವುದು ಹಲವು ಗೊಂದಲಕ್ಕೆ ಕಾರಣವಾಗಿದೆ.

ಮೊಹಂತಿಯವರು ಈ ಕೇಸನ್ನು ಬಿಟ್ಟು ಕೇಂದ್ರದ ಸೇವೆಗೆ ಹೋಗುತ್ತಾರಾ? ಅಥವಾ ಇಲ್ಲೆ ಇದ್ದು ಕೇಸ್ ಗೆ ತಾರ್ಕಿಕ ಅಂತ್ಯ ಕೊಡಿಸ್ತಾರ ಅನ್ನುವ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಕೆಲವರ ಪ್ರಕಾರ ಇದೊಂದು ಪಿತೂರಿ. ಇಂತ ಸಂಧರ್ಭದಲ್ಲಿ ಅವರನ್ನು ಕೇಂದ್ರ ಸೇವೆಗೆ ನಿಯೋಜನೆಗೊಳಿಸುವ ಅಗತ್ಯ ಏನಿತ್ತು ಅನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಉತ್ತರ ಇನ್ನು ಅಸ್ಪಷ್ಟ.

Comments are closed.