Dharmasthala burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್ನಲ್ಲಿ ಒಟ್ಟು 10 ಮೂಳೆ ಪತ್ತೆ – ಏಳನೇ ಸ್ಥಳ ಕಾರ್ಯಾಚರಣೆ ಆರಂಭ

Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು, ಒಟ್ಟು 10 ಮೂಳೆಗಳು ದೊರಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಪುರುಷನ ಮೂಳೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ತಲೆಬುರುಡೆ ಚೂರು, ಕೈ ಮೂಳೆ, ಕಾಲಿನ ಭಾಗದ ಚೂರು ಹಾಗೂ ದೇಹದ ಇನ್ನಿತರ ದೇಹದ ಮೂಳೆಗಳು ಸಿಕ್ಕಿದೆ.

ಕೇವಲ ಮೂರೇ ಅಡಿಯಲ್ಲಿ ಈ ಮೂಳೆಗಳು ಪತ್ತೆಯಾಗಿದ್ದ ಕಾರಣ ಮತ್ತಷ್ಟು ಗುಂಡಿಯನ್ನು ಅಗೆದು ಮತ್ತಷ್ಟು ಮೂಳೆಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಆರನೇ ಪಾಯಿಂಟ್ನಲ್ಲಿ ಕಾರ್ಯಾಚರಣೆ ಅಂತ್ಯಗೊಂಡಿದ್ದರು ಎಸ್ಐಟಿ ತಂಡ ಇನ್ನು ಅದೇ ಸ್ಥಳದಲ್ಲಿ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದೆ. FSL ಅಧಿಕಾರಿಗಳು ಮೂಳೆಗಳನ್ನು ಸಂಗ್ರಹಿಸಿ, ಮುಂದಿನ ಪರೀಕ್ಷೆಗೆ ಅವುಗಳನ್ನು ಜತನದಿಂದ ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಒಳ ಪಡಿಸಲು ಮುಂದಾಗುತ್ತಿದ್ದಾರೆ.
ಇದಾಗಲೇ ಡಾಗ್ ಸ್ಕ್ವಾಡ್ ಸ್ಥಳದಲ್ಲಿ ಆಗಮಿಸಿದ್ದು, ಕಾರ್ಯಚರಣೆಯನ್ನು ಶ್ವಾನಗಳ ಮೂಲಕ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ. ಇದೀಗ ಎಸ್ಐಟಿ ತಂಡ ಏಳನೇ ಪಾಯಿಂಟ್ನತ್ತ ತೆರಳಿದ್ದು ಅಲ್ಲಿ ಅಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗುತ್ತಿದೆ.
Comments are closed.