Dharmasthala Case Ananya Bhat: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕ ಬೆನ್ನಲ್ಲೇ ಅನನ್ಯಾ ಭಟ್ ತಾಯಿ ಪರ ವಕೀಲರಿಂದ ಪತ್ರಿಕಾ ಪ್ರಕಟಣೆ

Dharmasthala Case: ಧರ್ಮಸ್ಥಳದ ನೇತ್ರಾವತಿ ಘಾಟ್ ಬಳಿಯಲ್ಲಿ ಪಾಯಿಂಟ್ ನಂಬರ್ 6 ರಲ್ಲಿ ಮೂಳೆ ರೀತಿಯ ವಸ್ತು ದೊರಕಿದ ಬೆನ್ನಲ್ಲೇ ಇದೀಗ ಅನನ್ಯ ಭಟ್ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಈ ಪತ್ತೆಯು “ಸತ್ಯ ಮೇವ ಜಯತೇ” ಎಂಬ ಧ್ಯೇಯವಾಕ್ಯಕ್ಕೆ ಸಾಕ್ಷಿಯಾಗಿದ್ದು, “ಸತ್ಯಕ್ಕೆ ಜಯ, ದೇವರು ಮಹಾನ್” ಎಂಬ ಭಾವನೆಯನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ.
ಕಾಣೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಳೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಈ ಪ್ರಕರಣಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಿದೆ. ತನಿಖೆ ನ್ಯಾಯಯುತವಾಗಿ ನಡೆಯುತ್ತದೆ ಎಂಬ ನಂಬಿಕೆಯಿಂದ ಎಂದಿದ್ದಾರೆ.
Comments are closed.