Dharmasthala burial Case: ಧರ್ಮಸ್ಥಳ ಪ್ರಕರಣ : ಕೇವಲ ಮೂರೇ ಪೀಟ್ನಲ್ಲಿ ಅಸ್ಥಿಪಂಜರ ಅವಶೇಷ ಪತ್ತೆ : ಇಂದೇ ಎಫ್ಎಸ್ಎಲ್ ವರದಿಗಾಗಿ ರವಾನೆ ಸಾಧ್ಯತೆ

Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಪಾಯಿಂಟ್ನಲ್ಲಿ ಅಸ್ತಿಪಂಜರದ ಗುರುತು ಪತ್ತೆಯಾಗಿದ್ದು, ಅಲ್ಲಿಯೆ ಇನ್ನಷ್ಟು ಶೋಧ ಕಾರ್ಯ ನಡೆಯುತ್ತಿದೆ. ಇದಿಗ ಮೂಳೆಗಳ ತುಂಡುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೂತಿಟ್ಟ ಶವಗಳಿಗೆ ಜೀವ ಬಂದಂತಾಗಿದೆ. ಅಲ್ಲದೆ ಭೀಮ ಸುಳ್ಳು ಅನ್ನುತ್ತಿದ್ದವರಿಗೆ ಅಲ್ಲ ಈತ ಹೇಳುತ್ತಿರುವುದು ಸತ್ಯ ಅನ್ನಿಸಲು ಸಾಕ್ಷಿ ದೊರೆತಿದೆ.

ನಿರಂತರ ಮೂರು ದಿನಗಳ ಸತತ ಕಾರ್ಯಾಚರಣೆಯಲ್ಲಿ ಇಂದು ಮೂಳೆಗಳು ಪತ್ತೆಯಾಗಿದ್ದು, ಧರ್ಮಸ್ಥಳ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರನೇ ಪಾಯಿಂಟ್ನಲ್ಲಿ ಕೇವಲ ಮೂರು ಫೀಟ್ ಅಗಿವಾಗಲೇ ಅಸ್ಥಿ ಪಂಜರದ ಅವಶೇಷ ಪತ್ತೆಯಾಗಿದೆ. ಇದನ್ನು ಸ್ವತಃ ಎಸ್ಐಟಿ ಮೂಲದಿಂದ ಮನುಷ್ಯನಾ ಮೂಳೆಯೇ ಎಂದು ಧೃಢ ಪಡಿಸಿದೆ.
ಸುಮಾರು ಆರು ಮಂದಿ ಕಾರ್ಮಿಕರು ಅದೇ ಗುಂಡಿಯನ್ನು ಮತ್ತಷ್ಟು ಅಗೆಯುವ ಕಾರ್ಯವನ್ನು ಮಾಡುತ್ತಿದ್ದು, ಇನ್ನಷ್ಟು ಮೂಳೆಗಳು ಸಿಗುವ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ. ಎಫ್ಎಸ್ಎಲ್ ಹಾಗೂ ವೈದ್ಯರ ತಂಡದಿಂದ ಮೂಳೆಗಳನ್ನು ಬಾಕ್ಸ್ನಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮಣಿಪಾಲಕ್ಕೆ ಮೂಳೆಗಳ ಪರೀಕ್ಷೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಈಗಾಗಲೇ ಆರು ಸ್ಥಳಗಳಲ್ಲಿ ಅಗೆತ ಕಾರ್ಯ ನಡೆದಿದು, ಇನ್ನು 7 ಗುಂಡಿಗಳ ಉತ್ಖನನ ಕಾರ್ಯ ಬಾಕಿ ಇದೆ. ಇದೀಗ ಎಲ್ಲರ ಚಿತ್ತ ಆ ಉಳಿದ ಗುಂಡಿಗಳ ಮೇಲೆ ನೆಟ್ಟಿದೆ ಎಂದರೆ ತಪ್ಪಾಗಲಾರದು.
ರಸ್ತೆ ಪಕ್ಕದಲ್ಲಿ 9 ರಿಂದ 13 ಗುಂಡಿಗಳನ್ನು ಗುರುತು ಮಾಡಲಾಗಿದೆ. ಇದರಲ್ಲಿ ಇನ್ನಷ್ಟು ಅವಶೇಷಗಳು ದೊರಕುವ ಸಾಧ್ಯತೆ ಇದೆ. ಆರನೇ ಗುಂಡಿಯ ಕಾರ್ಯಾಚರಣೆ ಮುಗಿದ ನಂತರ ಎಸ್ಐಟಿ ಅಧಿಕಾರಿಗಳು ಇನ್ನುಳಿದ ಪಾಯಿಂಟ್ಗಳ ಉತ್ಖನನ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.
Comments are closed.