Tirupati: ತಿರುಪತಿಯಲ್ಲಿ ಮದುವೆ ಆಗುವ ಕನ್ನಡಿಗರಿಗೆ ಗುಡ್‌ನ್ಯೂಸ್!

Tirupati: ತಿರುಮಲದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ ಇಂದಿನಿಂದ ಸೇವೆಗೆ ಸಿದ್ಧವಾಗಿದೆ. ತಿರುಮಲ ಕಲ್ಯಾಣ ಮಂಟಪದಲ್ಲಿ ಕರ್ನಾಟಕದ ಜೋಡಿಯ ಮೊದಲ ಮದುವೆ (Marriage) ಆಗುತ್ತಿದೆ. ಈಗಾಗಲೇ ಎಂಟು ಮದುವೆಗಳು ಬುಕ್ ಆಗಿವೆ.

ಕಳೆದ ತಿಂಗಳು ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿತ್ತು. ಈಗ ಈ ಕಲ್ಯಾಣ ಮಂಟಪದಲ್ಲಿ ಮೊದಲ ಮದುವೆ ಇಂದು ನಡೆಯುತ್ತಿದೆ. ಕರ್ನಾಟಕ ರಾಜ್ಯದ ಜೋಡಿಗಳ ಮೊದಲ ಮದುವೆ ನಡೆಯುತ್ತಿದ್ದು. ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ರಾಜ್ಯದ ವಿವಿಧ ಜಿಲ್ಲೆಯ 8 ಜೋಡಿ ಮದುವೆಗೆ ಬುಕ್ಕಿಂಗ್ ಮಾಡಿದ್ದಾರೆ.
ಇನ್ನೂ ನೂತನವಾಗಿ ಇರುವ ಕಲ್ಯಾಣ ಮಂಟಪದಲ್ಲಿ 36 ಕೊಠಡಿಗಳು ಇದ್ದು, 500 ಆಸನದ ವ್ಯವಸ್ಥೆ ಇದೆ. ಒಂದು ಮದುವೆಗೆ ಜಿಎಸ್‌ಟಿ ಸೇರಿಸಿ ಮೂರುವರೆ ಲಕ್ಷ ರೂ. ಆಗಲಿದೆ. ಸದ್ಯಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿ ಬುಕ್ಕಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಆನ್‌ಲೈನ್ ವ್ಯವಸ್ಥೆ ಕೂಡ ಜಾರಿ ಮಾಡಲಿದ್ದಾರೆ.
ಒಟ್ಟಾರೆ ತಿರುಪತಿಗೆ ತೆರಳೋ ಕರ್ನಾಟಕ ಭಕ್ತರು ತಿರುಪತಿಯಲ್ಲೆ ಮದುವೆ ಮಾಡಬೇಕು ಎಂಬ ಇಚ್ಛೆ ಇದ್ದರೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಬುಕ್ಕಿಂಗ್ ಮಾಡಿ ತಿರುಮಲದಲ್ಲಿ ಮದುವೆ ಆಗಬಹುದು.
Comments are closed.