Shocking: ಬಿರಿಯಾನಿ ಕೊಟ್ಟು ಬಿಕ್ಷುಕರ ವೀರ್ಯ ಪಡೆಯುತ್ತಿತ್ತು ಈ ಫರ್ಟಿಲಿಟಿ ಸೆಂಟರ್- ತನಿಖೆ ವೇಳೆ ಕಾರಣ ಕೇಳಿ ಪೊಲೀಸರೇ ಶಾಕ್!!

Shocking : ರಸ್ತೆಯಲ್ಲಿ ಸಿಗುವ ಭಿಕ್ಷುಕರಿಗೆ ಬಿರಿಯಾನಿಯ ಆಸೆ ತೋರಿಸಿ ಅವರ ವೀರ್ಯವನ್ನು ಸಂಗ್ರಹಿಸುತ್ತಿದ್ದಂತಹ ಸೃಷ್ಟಿ ಫರ್ಟಿಲಿಟಿ ಸೆಂಟರ್ ಹಗರಣ ಒಂದು ಈಗ ಬಟಾ ಬಯಲಾಗಿದೆ.

ಹೌದು, ಸೃಷ್ಠಿ ಫರ್ಟಿಲಿಟಿ ಸೆಂಟರ್ ನಲ್ಲಿ 35 ಲಕ್ಷ ರೂಪಾಯಿ ನೀಡಿ ಸರೋಗಸಿ ಮೂಲಕ ಮಗು ಪಡೆಯಲು ಮುಂದಾದ ದಂಪತಿಗೆ ಡಿಎನ್ಎ ಪರೀಕ್ಷೆ ವೇಳೆ ಮೋಸ ಬಟಾ ಬಯಾಲಾಗಿತ್ತು. ಮಗು ತಮ್ಮದಲ್ಲ ಅನ್ನೋದು ಖಚಿತವಾಗುತ್ತಿದ್ದಂತೆ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರ ತನಿಖೆಯಲ್ಲಿ ಐವಿಎಫ್, ಸರೋಗಸಿ, ಟೆಸ್ಟ್ ಟ್ಯೂಬ್ ಸೇರಿದಂತೆ ಒಂದೊಂದೆ ಹಗರಣಗಳು ಹೊರಬರುತ್ತಿದೆ. ಇದೀಗ ಈ ಬೇಬಿ ಸೆಂಟರ್ ಭಿಕ್ಷುಕರನ್ನು ಬಿಟ್ಟಿಲ್ಲ. ಬಿರಿಯಾನಿ ಆಸೆ ತೋರಿಸಿ ಭಿಕ್ಷುರ ವೀರ್ಯ ಪಡೆದಿರುವುದು ಬಹಿರಂಗವಾಗಿದೆ.
ಏನಿದು ಪ್ರಕರಣ?
ಹೈದರಾಬಾದ್ ದಂಪತಿಗಳು 35 ಲಕ್ಷ ರೂಪಾಯಿ ನೀಡಿ ಸೃಷ್ಟಿ ಫರ್ಟಿಲಿಟಿ ಸೆಂಟರ್ ಸಂಪರ್ಕಿಸಿದ್ದರು. ದಂಪತಿಗಳು ತಮ್ಮ ವೀರ್ಯ, ಅಂಡಾಣುಗಳನ್ನು ಸೆಂಟರ್‌ಗೆ ನೀಡಿದ್ದರು ಇದರಂತೆ 9 ತಿಂಗಳ ಬಳಿಕ ಫರ್ಟಿಲಿಟಿ ಸೆಂಟರ್ ಮಗುವನ್ನು ನೀಡಿದ್ದರು. ಆದರೆ ಈ ಮಗು ಜೈವಿಕವಾಗಿ ಅವರದ್ದಾಗಿರಲಿಲ್ಲ. ಡಿಎನ್ಎ ಪರೀಕ್ಷೆಯಲ್ಲಿ ಮಗು ತಮ್ಮದಲ್ಲ ಅನ್ನೋದು ಸಾಬೀತಾಗಿತ್ತು. ಮಗು ಯಾವುದೇ ಸರೋಗಸಿ ವಿಧಾನದ ಮೂಲಕ ಜನಿಸಿರಲಿಲ್ಲ. ಈ ಮಗುವನ್ನು ಅಸ್ಸಾಂನ ಬಡ ಕುಟುಂಬದಿಂದ ಖರೀದಿಸಿ ದಂಪತಿಗಳ ಸ್ವಂತ ಮಗುವಿನಂತೆ ನೀಡಲಾಗಿತ್ತು.
ಆದರೆ ನಂತರದಲ್ಲಿ ಕ್ಲಿನಿಕ್ ಡಿಎನ್ಎ ಪುರಾವೆಗಳನ್ನು ನೀಡದಿದ್ದಾಗ ದಂಪತಿಗಳ ಅನುಮಾನಗಳು ಬೆಳೆಯಲು ಪ್ರಾರಂಭಿಸಿದವು. ಆದ್ದರಿಂದ, ಅವರು ಸದ್ದಿಲ್ಲದೆ ಪರೀಕ್ಷೆಯನ್ನು ಮಾಡಿದರು. ಮಗುವಿನೊಂದಿಗೆ ಯಾವುದೇ ಪೋಷಕರು ಒಂದೇ ಜೀನ್ ಅನ್ನು ಹಂಚಿಕೊಂಡಿಲ್ಲ. ಈ ಕುರಿತು ಫರ್ಟಿಲಿಟಿ ಸೆಂಟರ್ ನುಣುಚಿಕೊಳ್ಳವು ಪ್ರಯತ್ನ ಮಾಡಿತ್ತು. ಹೀಗಾಗಿ ಗೋಪಾಲಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ ಭಿಕ್ಷುಕರಿಗೆ ಬಿರಿಯಾನಿ ನೀಡಿ ಅವರ ವೀರ್ಯ ಪಡೆದು ಆ ವೀರ್ಯವನ್ನು ಬುಡಕಟ್ಟು ಮಹಿಳೆಯರು, ಬಡವರಿ ಮೂಲಕ ಮಗು ಮಾಡಿಕೊಳ್ಳುತ್ತಿದ್ದರು. ಈ ಮಗುವನ್ನು ದಂಪತಿಗಳ ಮಗು ಎಂದು ನೀಡುತ್ತಿದ್ದರು ಎಂಬುದು.
ಇದನ್ನೂ ಓದಿ: CRIB discovered: ಮಹಿಳೆ ಒಬ್ಬರಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ!
Comments are closed.