GPR: : ಧರ್ಮಸ್ಥಳದಲ್ಲಿ ಶವಗಳ ಪತ್ತೆಗೆ GPR ತಂತ್ರಜ್ಞಾನ ಬಳಕೆ? ಬುರುಡೆ ರಹಸ್ಯ ಬಯಲಾಗಲು ಕ್ಷಣಗಣನೆ !!

GPR: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಇದೀಗ ದೂರುದಾರ ತೋರಿಸಿದ ಐದೂ ಸ್ಥಳಗಳಲ್ಲಿ ಅಗೆಯುವಾಗಲೂ ಕೂಡ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ ಈ ತನಿಖೆಗೆ ಕಾರ್ಮಿಕರು ಮತ್ತು ಜೆಸಿಬಿಯನ್ನು ಬಿಟ್ಟು ಇದೀಗ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಇದೆ.

ಅನಾಮಿಕ ದೂರುದಾರ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ದಟ್ಟ ಕಾಡಿನಲ್ಲಿ ತೋರಿಸಿದ 13 ಸಮಾಧಿ ಸ್ಥಳಗಳಲ್ಲಿ ಮೊದಲ ದಿನ ಒಂದು 1ನೇ ಪಾಂಯಿಂಟ್ನಲ್ಲಿ ಉತ್ಖನನ ನಡೆಸಲಾಗಿತ್ತು. ಸುಮಾರು 8 ಅಡಿ ಆಳ ತೋಡಿದ್ರೂ ಕೂಡ ಯಾವುದೇ ಅಸ್ತಿ ಪಂಜರ ಪತ್ತೆಯಾಗಿರಲಿಲ್ಲ. ಎರಡನೇ ದಿನ ಒಟ್ಟು 5 ಕಡೆಗಳಲ್ಲಿ ಅಗೆಯಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈ ಕಾರ್ಯ ಇನ್ನೂ ಮುಂದುವರೆಯಲಿದ್ದು, ಸಮಾಧಿಗಳನ್ನು ಅಗೆಯುವ ಕಾರ್ಯ ನಡೆಯುತ್ತದೆ. ಒಂದೊಮ್ಮೆ ಯಾವುದಾದ್ರೂ ಒಂದು ಕಡೆ ಅಸ್ತಿ ಪಂಜರ ಪತ್ತೆಯಾದ್ರೂ ಆತ ಹೇಳಿದ ಎಲ್ಲಾ ಕಡೆಗಳಲ್ಲಿಗೂ ಉತ್ಕನನ ನಡೆಸಬೇಕಾದ ಅನಿವಾರ್ಯತೆ ಎಸ್ಐಟಿಗೆ ಇದೆ. ಹೀಗಾಗಿ ಎಸ್ಐಟಿ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕಾರ್ಯಾಚರಣೆಗೆ ಬಳಸುತ್ತಾ ಅನ್ನೋ ಕುತೂಹಲ ಮೂಡಿದೆ. ಅದರಲ್ಲೂ ಅಸ್ತಿಪಂಜರ ಪತ್ತೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ತಂತ್ರಜ್ಞಾನ ಬಳಸಬಹುದು ಎನ್ನಲಾಗುತ್ತಿದೆ.
(GPR) ತಂತ್ರಜ್ಞಾನ ಅಂದ್ರೆ ಏನು?
GPR ಎನ್ನುವುದು ಭೂಮಿಯ ಅಡಿಯಲ್ಲಿ ಅಥವಾ ಕಾಂಕ್ರೀಟ್ ನಂತಹ ಇತರ ಗಟ್ಟಿ ವಸ್ತುಗಳ ಒಳಗೆ ಇರುವ ವಸ್ತುಗಳನ್ನು, ರಚನೆಗಳನ್ನು ಮತ್ತು ಭೌತಿಕ ಗುಣಲಕ್ಷಣಗಳನ್ನು ಪತ್ತೆಹಚ್ಚಲು ಬಳಸುವ ಒಂದು ಭೌಗೋಳಿಕ ತಂತ್ರಜ್ಞಾನವಾಗಿದೆ. ಹೀಗಾಗಿ ಈ GPR ಅನ್ನು ಭೂಮಿಯ ಒಳಗೆ ಇರುವ ಲೋಹಗಳು, ಕೇಬಲ್ಗಳು, ಕೊಳವೆಗಳು ಮತ್ತು ಇತರ ಲೋಹೀಯ ವಸ್ತುಗಳನ್ನು ಪತ್ತೆ ಮಾಡಲು ಬಳಸಲಾಗುತ್ತದೆ. ಇದರೊಂದಿಗೆ ಭೂಮಿಯ ಅಡಿಯಲ್ಲಿರುವ ಅಸ್ತಿಪಂಜರವನ್ನು ಪತ್ತೆ ಮಾಡಲು ಪುರಾತತ್ವ ಶಾಸ್ತ್ರಜ್ಞರು ಮತ್ತು ವೈದ್ಯಕೀಯ ವಿಧಿವಿಜ್ಞಾನ ತಜ್ಞರು ಬಳಕೆ ಮಾಡುತ್ತಾರೆ.
GPR ಹೇಗೆ ಕೆಲಸ ಮಾಡುತ್ತದೆ ?
GPR ವ್ಯವಸ್ಥೆಯು ರೇಡಿಯೋ ತರಂಗಗಳನ್ನು ಭೂಮಿಯೊಳಗೆ ಕಳುಹಿಸುತ್ತದೆ ಮತ್ತು ಆ ತರಂಗಗಳು ಭೂಮಿಯೊಳಗಿನ ವಿವಿಧ ವಸ್ತುಗಳು ಅಥವಾ ರಚನೆಗಳಿಂದ ಪ್ರತಿಫಲಿಸಿ ಹಿಂದಿರುಗುವ ಸಮಯ ಮತ್ತು ಶಕ್ತಿಯನ್ನು ದಾಖಲಿಸುತ್ತದೆ. ಈ ತರಂಗಗಳು ಭೂಮಿಯೊಳಗೆ ಪ್ರಯಾಣಿಸುವಾಗ, ಅವು ವಿವಿಧ ವಸ್ತುಗಳು ಅಥವಾ ಪದರಗಳನ್ನು ಎದುರಿಸುತ್ತವೆ. ಉದಾಹರಣೆಗೆ, ಮಣ್ಣಿನ ಪದರದಲ್ಲಿನ ಬದಲಾವಣೆಗಳು, ಕಲ್ಲು, ನೀರು, ಲೋಹದ ಪೈಪ್ಗಳು, ಕೇಬಲ್ಗಳು, ಕಾಂಕ್ರೀಟ್ನಲ್ಲಿನ ಬಿರುಕುಗಳು, ಹೂತುಹೋದ ಅಸ್ತಿಪಂಜರ, ಪುರಾತನ ವಸ್ತುಗಳನ್ನು ಪತ್ತೆ ಮಾಡುತ್ತದೆ. ರೇಡಿಯೋ ತರಂಗಗಳ ಒಂದು ಭಾಗವು ಪ್ರತಿಫಲಿಸಿ (ಬೌನ್ಸ್ ಬ್ಯಾಕ್ ಆಗಿ) ಭೂಮಿಯ ಮೇಲ್ಮೈಗೆ ಹಿಂದಿರುಗುತ್ತದೆ. ಈ ಪ್ರತಿಫಲಿತ ತರಂಗಗಳನ್ನು GPR ವ್ಯವಸ್ಥೆಯಲ್ಲಿನ ಇನ್ನೊಂದು ಆಂಟೆನಾ ಸ್ವೀಕರಿಸುತ್ತದೆ.
GPR ಉಪಕರಣವು ಪ್ರತಿಫಲಿತ ತರಂಗಗಳು ಭೂಮಿಯೊಳಗೆ ಹೋಗಿ ಹಿಂದಿರುಗಲು ತೆಗೆದುಕೊಂಡ ಸಮಯವನ್ನು ಮತ್ತು ಅವುಗಳ ಶಕ್ತಿಯನ್ನು (ಆಂಪ್ಲಿಟ್ಯೂಡ್) ಅಳೆಯುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು, ಆ ವಸ್ತುವು ಎಷ್ಟು ಆಳದಲ್ಲಿದೆ ಮತ್ತು ಅದರ ಸ್ವರೂಪ ಹೇಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಡೇಟಾವನ್ನು ಕಂಪ್ಯೂಟರ್ಗೆ ವರ್ಗಾಯಿಸಿ, ಚಿತ್ರಗಳ ರೂಪದಲ್ಲಿ (ರಡಾರ್ಗ್ರಾಮ್ ಅಥವಾ B-ಸ್ಕ್ಯಾನ್) ಪ್ರದರ್ಶಿಸಲಾಗುತ್ತದೆ. ಈ ಚಿತ್ರಗಳನ್ನು ವಿಶ್ಲೇಷಿಸಿ ಭೂಗತ ರಚನೆಗಳನ್ನು ಗುರುತಿಸಲಾಗುತ್ತದೆ.
Comments are closed.