Crime: ಗಂಡ ಹೆಂಡಿರ ಜಗಳ – ಹೆತ್ತ ಮಗುವಿಗೆ ವಿಷ ನೀಡಿ ತಾನೂ ಸೇವಿಸಿದ ಪಾಪಿ ತಾಯಿ – ತಾಯಿ-ಮಗು ಏನಾದ್ರು?

Crime: ಮಗುವಿಗೆ ವಿಷ ನೀಡಿ ತಾನೂ ಸೇವಿಸಿ ಆತ್ಮಹತ್ಯೆಗೆ ತಾಯಿ ಮುಂದಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ. ಟೀ ಗೆ ಇಲಿ ಪಾಷಾಣ ಬೆರೆಸಿ ಮಗುಗೆ ಕುಡಿಸಿ ನಂತರ ತಾಯಿಯೂ ವಿಷ ಸೇವನೆ ಮಾಡಿದ್ದು, ಘಟನೆಯಲ್ಲಿ ಒಂದು ವರ್ಷ ಎಂಟು ತಿಂಗಳಿನ ಚಾರ್ವಿ ಎಂಬ ಮಗು ಸಾವನ್ನಪ್ಪಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಣಕಾಸು ಮತ್ತು ಕುಟುಂಬದ ವಿಚಾರವಾಗಿ ಸಮಸ್ಯೆ ಸಂಬಂಧ ಗಂಡ ಯೋಗೇಶ್ ಜೊತೆ ಜಗಳವಾಡಿವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ನಿನ್ನೆ ಸಂಜೆಯ ವೇಳೆ 24 ವರ್ಷದ ಚಂದ್ರಿಕಾ ಟೀ ಗೆ ಇಲಿ ಪಾಷಾಣ ಬೆರೆಸಿ ತಾನೂ ಹಾಗೂ ತನ್ನ ಮಗುವಿಗೆ ನೀಡಿದ್ದಾಳೆ. ಗಂಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಂದ್ರಿಕಾ ಈ ಕೃತ್ಯಕ್ಕೆ ಮುಂದಾಗಿದ್ದು, ನಂತರ ಆಕೆಯೇ ಗಂಡನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.
ಪತಿ ಕೂಡಲೆ ಮನೆ ಬಳಿ ಬಂದು ಮಗು ಮತ್ತು ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸಿದರಾದರು, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದು, ತಾಯಿಗೆ ಚಿಕಿತ್ಸೆ ಮುಂದುವರೆದಿದೆ. ವಿಕ್ಟೋರಿಯಾ ಆಸ್ಲತ್ರೆಯಲ್ಲಿ ಚಂದ್ರಿಕಾ ಚಿಕಿತ್ಸೆ ಪಡೆಯುತ್ತಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments are closed.