Crime: ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ ಪುತ್ರ!!

Share the Article

Crime: ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದು ಅಲ್ಲದೆ ಶವವನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶವ ಪೂರ್ತಿ ಸುಡದೆ ಅರ್ಧಂಬರ್ಧ ಸುಟ್ಟಿದೆ. ಅರ್ಧಂಬರ್ಧ ಸುಟ್ಟ ಶವದ ಪಕ್ಕದಲ್ಲೇ ಮಲಗಿದ್ದಾನೆ.

ತಾಯಿ ಭವಾನಿ (55) ಹತ್ಯೆಗೈದ ಪಾಪಿ ಪುತ್ರಪವನ್ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ತಾಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು ನಿರ್ಜನ ಪ್ರದೇಶದಲ್ಲಿ ಇರುವಂತಹ ಒಂಟಿಮನೆಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಯಾವ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ? ಅಥವಾ ಈತ ಏನಾದರೂ ಮಾನಸಿಕ ಅಸ್ವಸ್ಥನಾಗಿದ್ದಾನ? ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ. ಪವನ್ ಎಂಬವನನ್ನು ಬಂಧಿಸಿದ ಪೊಲೀಸರು ಆಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Dharmasthala Case: ರಾತ್ರಿ ʼಮಾಸ್ಕ್‌ಮ್ಯಾನ್‌ʼ ನ ವಿಚಾರಣೆ: ಸ್ಫೋಟಕ ವಿಷಯ ಬಿಚ್ಚಿಟ್ಟ ದೂರುದಾರ

Comments are closed.