Dharmasthala Case: ಧರ್ಮಸ್ಥಳದಲ್ಲಿ 13 ಪಾಯಿಂಟ್‌ಗಳಲ್ಲಿ ಕಳೇಬರ ಸಿಗದೇ ಹೋದರೆ SIT ಮುಂದಿನ ಕ್ರಮ ಏನು?

Dharmasthala Case: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ಕ್‌ಮ್ಯಾನ್ ನೀಡಿದ ದೂರಿಗೆ ಸಂಬಂಧಪಟ್ಟಂತೆ ಎಸ್‌ಐಟಿ ತಂಡ ಈಗಾಗಲೇ ತನಿಖೆ ಆರಂಭ ಮಾಡಿದೆ. ನಿನ್ನೆಯವರೆಗೆ ಐದು ಪಾಯಿಂಟ್‌ಗಳನ್ನು ಅಗೆದಿದ್ದು ಯಾವುದೇ ಕಳೇಬರ ದೊರಕಿರಲಿಲ್ಲ. ಇಂದು ಕೂಡಾ ಕಾರ್ಯಾಚರಣೆ ನಡೆಯಲಿದೆ.

ಒಂದು ವೇಳೆ 13 ಗುಂಡಿಗಳಲ್ಲೂ ಏನೂ ಸಿಗದೇ ಇದ್ದರೆ ಎಸ್‌ಐಟಿ ಏನು ಮಾಡುತ್ತೆ? ಈ ಪ್ರಶ್ನೆ ಎಲ್ಲರಲ್ಲೂ ಇರುವುದು ಸಹಜ. ಆದರೆ ವರದಿ ಪ್ರಕಾರ ಎಸ್‌ಐಟಿ ಈಗಾಗಲೇ ಪ್ಲಾನ್ ಬಿ, ಸಿ ಎಲ್ಲವನ್ನೂ ರೆಡಿ ಮಾಡಿದೆ ಎಂದು ಹೇಳಲಾಗಿದೆ.
ಮೊದಲಿಗೆ ದೂರುದಾರ ಗುರುತಿಸಿದ ಸ್ಥಳಗಳ ಬಗ್ಗೆ ಮರು ವಿಮರ್ಶೆ ನಡೆಸುವ ಸಾಧ್ಯತೆಯಿದೆ. ಮತ್ತೊಮ್ಮೆ ಈ ಸ್ಥಳಗಳನ್ನು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ತಪ್ಪು ಗುರುತಿಸುವಿಕೆಯನ್ನು ಸರಿಪಡಿಸಲು ಎಸ್‌ಐಟಿ ಕಾರ್ಯ ಮಾಡಬಹುದು. ಇದಕ್ಕೆ ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್) ನಂತಹ ಆಧುನಿಕ ತಂತ್ರಜ್ಞಾನ ಬಳಸಿ, ಭೂಮಿಯೊಳಗಿನ ಅಸಾಮಾನ್ಯತೆಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ.
ಎರಡನೆಯದಾಗಿ ದೂರುದಾರ ನೀಡಿದ ಹೇಳಿಕೆಯನ್ನು ಮತ್ತೆ ಪರಿಶೀಲನೆ ಮಾಡಬಹುದು. ಹೇಳಿಕೆ ದೃಢಪಡಿಸಲು ಬ್ರೈನ್ ಮ್ಯಾಪಿಂಗ್ ಅಥವಾ ಪಾಲಿಗ್ರಾಫ್ ಪರೀಕ್ಷೆ ಮಾಡುವ ಸಾಧ್ಯತೆ ಇರಬಹುದು. ಒಂದು ವೇಳೆ ದೂರುದಾರ ನೀಡಿದ ಮಾಹಿತಿ ಸುಳ್ಳು ಎಂತಾದರೆ ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.
ಮೂರನೆಯದಾಗಿ ದೂರುದಾರ ಗುರುತು ಮಾಡಿದ 13 ಸ್ಥಳಗಳನ್ನು ಹೊರತು ಪಡಿಸಿ, ಸಂಭಾವ್ಯ ಸ್ಥಳಗಳನ್ನು ಗುರುತಿಸಲು ಎಸ್‌ಐಟಿ ಪ್ರಯತ್ನ ಮಾಡಬಹುದು. ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಇತರ ಪ್ರದೇಶಗಳು, ಅಜಿಕುರಿ ರಸ್ತೆ, ಕನ್ಯಾಡಿ ಖಾಸಗಿ ಜಾಗಗಳನ್ನು ತನಿಖೆಗೆ ಒಳಪಡಿಸ ಬಹುದು ಎಂದು ವರದಿಯಾಗಿದೆ.
ದೂರುದಾರ ನೀಡಿರುವ ಹೇಳಿಕೆಯ ಪ್ರಕಾರ, 20 ವರ್ಷಗಳ ಹಿಂದೆ ಶವಗಳನ್ನು ಹೂತಿಟ್ಟಿದ್ದು, ಹಾಗಾಗಿ ಅಸ್ಥಿಪಂಜರಗಳು, ಕಳೇಬರಗಳು ಸಿಗುವ ಸಾಧ್ಯತೆ ಕಡಿಮೆ. ನೇತ್ರಾವತಿ ನದಿಯ ಸಮೀಪ, ದಟ್ಟ ಅರಣ್ಯದಲ್ಲಿ ಪಾಯಿಂಟ್ ಹಾಕಿರುವುದರಿಂದ ಇಲ್ಲಿ ಮಣ್ಣಿನ ಒರತೆ, ಕಲ್ಲು, ನೀರಿನಿಂದ ಉತ್ಖನನ ಕೆಲಸ ಕಷ್ಟ. ಜೆಸಿಬಿ ಯಂತ್ರಗಳ ಬಳಕೆಗೆ ಅರಣ್ಯ ಇಲಾಖೆಯಿಂದ ಅನುಮತಿ ಇಲ್ಲದಿರುವುದು ಮತ್ತೊಂದು ತೊಡಕು.
ತನಿಖೆ ನಡೆಸಲು ಕಾನೂನು ತಜ್ಞರು, ತಂತ್ರಜ್ಞಾನ ತಜ್ಞರ ಸಲಹೆಯನ್ನು ಎಸ್‌ಐಟಿ ಪಡೆಯಬಹುದು. ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿ ಡಿಎನ್‌ಎ ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬಹುದು. ಅಲ್ಲದೇ 1995 ರಿಂದ 2014 ರವರೆಗಿನ ಧರ್ಮಸ್ಥಳದ ಔಟ್‌ಪೋಸ್ಟ್‌ನಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳ ಪಟ್ಟಿ ಮಾಡಿ, ಪರಿಶೀಲಿಸಿ, ಮಾಸ್ಕ್‌ಮ್ಯಾನ್ ನೀಡಿದ ಆರೋಪಗಳನ್ನು ದೃಢಪಡಿಸುವ ಪ್ರಯತ್ನ ನಡೆಯಬಹುದು.
Comments are closed.