Dharmasthala: ಧರ್ಮಸ್ಥಳ ಪ್ರಕರಣ- ಹೆಣ ಸಿಗದಕ್ಕೆ ಸುಳ್ಳುಗಾರನೇ ಭೀಮ? ಖಚಿತ ಜಾಗ ಹುಡುಕಿ ಕೊಡೋ ಜವಾಬ್ದಾರಿ ದೂರುದಾರ ಭೀಮನದ್ದಲ್ಲ, ಹಾಗಾದ್ರೆ ಮತ್ಯಾರದ್ದು?

Share the Article

Dharmasthala: ಬಹು ನಿರೀಕ್ಷಿತ ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಅನಾಮಿಕ ತೆರೆದಿಟ್ಟ ಪ್ರಕರಣದ ಸಮಾಧಿ ಅಗೆಯುವ ಕೆಲಸ ಮತ್ತು ಅಲ್ಲಿ ಹೂತ ಹೆಣಗಳನ್ನು ಹೊರತೆಗೆಯುವ ಪ್ರಕರಣದ ಕಾರ್ಯಾಚರಣೆ ವಿಫಲವಾಗಿದೆ. ಮೊದಲ ದಿನ 10.12 ಕಾರ್ಮಿಕರು ಪ್ರಾರಂಭಿಕವಾಗಿ ಸಾಕ್ಷಿದಾರ ತೋರಿಸಿದ ಸ್ಥಳದಲ್ಲಿ ಆಗಿದಿದ್ದರೂ ಆದರೆ ಅಲ್ಲಿ ಯಾವುದೇ ಕುರುಹು ಕಂಡು ಬರದ ಹಿನ್ನೆಲೆಯಲ್ಲಿ ನಂತರ 8 ಅಡಿ ಆಳ 15 ಅಡಿ ಅಗಲಕ್ಕೆ ಶವ ಹುಡುಕುವ ಕೆಲಸ ಶುರುವಾಗಿತ್ತು. ಅದಕ್ಕಾಗಿ ಹಿಟಾಚಿ ಬಳಸಲಾಗಿತ್ತು. ಆದರೆ ಕಲೇಬರದ ಕುರುಹು ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಆಪರೇಷನ್ ಭೀಮ ಕಾರ್ಯಾಚರಣೆ ಅಲ್ಲಿ ಹೂತಿಟ್ಟ ಶವಗಳು ಇಲ್ಲ ಮುಂತಾದ ನೂರಾರು ಯೋಚನೆಗಳು ಸಿದ್ದಾಂತಗಳು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಮಧ್ಯೆ ಸತ್ಯವನ್ನಷ್ಟೇ ಹುಡುಕಾಟ ಮಾಡುವ ಪ್ರಯತ್ನ ನಮ್ಮದು.

ಭೀಮ ಎಂಬ ವಿಶಲ್ ಬ್ಲೋವರ್:

ಭೀಮ ಒಬ್ಬ ವಿಶಲ್ ಬ್ಲೋವರ್ (Whistle Blower). ವಿಶಲ್ ಬ್ಲೋವರ್ ಅನ್ನುವ ಹೆಸರು ಕೇಳಿ ಆತನೊಬ್ಬ ಕ್ರಿಶ್ಚನ್ ಅಂದಿದ್ದರು. ಒಳ್ಳೆಯದರ ದಾರಿಯಲ್ಲಿ ನಡೆದರೆ, ಕೆಟ್ಟದರ ಬಗ್ಗೆ ಸಾಕ್ಷಿ ನುಡಿದರೆ ಆತ ಕ್ರಿಶ್ಚಿಯನ್ ಆದ್ರೆ ಏನು? ಮುಸ್ಲಿಂ ಆದರೆ ತಪ್ಪೇನು? ಸತ್ಯದ ದಾರಿ ಹುಡುಕಿ ಕೊಡುವವನು ಯಾವ ಧರ್ಮ, ಯಾವ ಜಾತಿ ಆದರೆ ಏನಂತೆ? ಭೀಮ ಒಬ್ಬ ವಿಷಲ್ ಬ್ಲೋವರ್. Whistle Blower policy 2014 ಅಂತ ಸರ್ಕಾರ ಒಂದು ಕಾಯ್ದೆ ಕೂಡಾ ತಂದಿದೆ. ಕಂಪನಿಗಳಲ್ಲಿ, ಸಂಸ್ಥೆಗಳಲ್ಲಿ ನಡೆಯುವ ಆಂತರಿಕ ತೊಂದರೆ, ಕೆಟ್ಟ ಕೆಲಸಗಳನ್ನು ವಿಷಲ್ ಹಾಕಿದಂತೆ ಕೂಗಿ ಎಚ್ಚರಿಸಿ ಹೇಳುವ ವ್ಯಕ್ತಿಗಳಿಗೆ ವಿಶಲ್ ಬ್ಲೋವರ್ (Whistle Blower) ಅಂತ ಹೇಳಲಾಗುತ್ತದೆ.

ನಿನ್ನೆ ಒಂದು ಸಮಾಧಿ ಅಗೆದು, ಅಲ್ಲಿ ಯಾವುದೇ ಹೆಣ ಅಥವಾ ಹೂತ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಭೀಮನನ್ನು ಅನುಮಾನಿಸಲಾಗುತ್ತಿದೆ. ಆದರೆ ಭೀಮ ದೃಢವಾಗಿದ್ದು ಸ್ವತಹ ತಾನೇ ಅಲ್ಲಿ ಶವಗಳನ್ನು ಹಾಕಿದ್ದೇನೆ ಎನ್ನುತ್ತಿದ್ದಾನೆ. ಆದರೆ ಆತ ಅಲ್ಲಿ ಹೂತು ಹಾಕಿದ ಹೆಣಗಳು ಏನಾದವು ಅವೆಲ್ಲ ಎಲ್ಲಿ ಮಾಯವಾದವು? ಮಧ್ಯೆ ಅದನ್ನು ತೆಗೆದು ಬೇರೆ ಕಡೆಗೆ ಸಾಗಿಸಿದ್ದರಾ? ಮುಂತಾದ ಹಲವಾರು ಪ್ರಶ್ನೆಗಳು ಇಲ್ಲಿ ಉದ್ಭವವಾಗುತ್ತಿವೆ. ಭೀಮ ಸುಳ್ಳು ಹೇಳಿದ, ಹೋರಾಟಗಾರರು ಸುಳ್ಳು ಹೇಳಿ ಸುಳ್ಳು ಆಪಾದನೆ ಮಾಡಿದರು ಅನ್ನುವ ಸಣ್ಣ ಸಂಶಯಗಳು ಇದೀಗ ಶುರುವಾಗಿದೆ. ಆದರೆ ಕೇಳಿ, ಹೂತ ಹಣಗಳನ್ನು ತೋರಿಸುವ ಜವಾಬ್ದಾರಿ ಭೀಮನದಲ್ಲ. ಭೀಮ ಒಬ್ಬ ವಿಶಾಲ್ ಬ್ಲೋವರ್. ಅಂದರೆ ಎಚ್ಚರಿಸುವ ಮನುಷ್ಯ ಅಷ್ಟೇ !! ಸತ್ಯ ಪರಿಶೋಧನೆ ಮಾಡೋದು ಸರ್ಕಾರದ ಕೆಲಸ.

ಸದ್ಯ ಭೀಮ ಇಲ್ಲಿ ಯಾರ ಕಣ್ಣಿಗೂ ಗೋಚರವಾಗದಂತೆ ಮುಚ್ಚಿ ಹೋಗಬಹುದಾಗಿದ್ದ ಒಂದು ಬಹುದೊಡ್ಡ ಅಪರಾಧ ಪ್ರಕರಣವನ್ನು ಎಲ್ಲರೆದುರು ತೆರೆದಿಟ್ಟು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲು ಸಹಕಾರಿಯಾಗಿದ್ದಾನೆ. ಅಷ್ಟು ಮಾತ್ರವಲ್ಲದೆ ತಾನೇ ಅವುಗಳನ್ನು ಹೂತಿದ್ದೇನೆ ಎಂದು ನಿಜವನ್ನು ಕೂಡ ಒಪ್ಪಿಕೊಂಡಿದ್ದಾನೆ. ತನ್ನ ಮೇಲೆ ತಾನೇ ಒತ್ತಡ ತಂದುಕೊಂಡಿದ್ದಾನೆ. ತನ್ನ ಜೀವಕ್ಕೇ ಸಂಭಾವ್ಯ ಅಪಾಯ ತಂದು ಕೊಂಡಿದ್ದಾನೆ. ಒಂದು ವೇಳೆ ಆತ ಯಾರದೋ ಆಮೀಶಕ್ಕೆ ಒಳಗಾಗಿ ಸುಳ್ಳು ಆರೋಪ ಮಾಡಿದ್ದಾನೆ ಎಂದು ಇಟ್ಟುಕೊಂಡರೂ ಕೂಡ ಈ ರೀತಿ ಸಂಚಲನ ಸೃಷ್ಟಿಸಿದ ಪ್ರಕರಣದಲ್ಲಿ ಹೆಜ್ಜೆ ಹೆಜ್ಜೆಗೂ ವಿಚಾರಣೆಗಳನ್ನು, ತನಿಖೆಗಳನ್ನು ಎದುರಿಸುತ್ತಾ ಪೊಲೀಸರು ಹೇಳಿದಂತೆ ಕೇಳಿಕೊಂಡಿರಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಭೀಮ ಇವೆಲ್ಲವನ್ನು ಮಾಡುತ್ತಿದ್ದಾನೆ. ಕಾರಣ ಈ ಹಿಂದೆ ಭೀಮ ಮಾಡಿರುವುದೆಲ್ಲವೂ ನಿಜ, ಆತ ಹೇಳಿದ್ದೆಲ್ಲವೂ ಕೂಡ ಸತ್ಯ. ಅಲ್ಲದೆ, ತಾನು ಸುಳ್ಳು ಹೇಳಿದರೆ ಇದರ ಮುಂದಿನ ಪರಿಣಾಮ ಮುಂದಕ್ಕೆ ಏನಾಗಬಹುದು ಎಂಬ ಅರಿವು ಕೂಡ ಆತನಿಗೆ ಇರಲಾರದೆ ಇರದು.

ಈಗ ಸರ್ಕಾರ ಏನು ಮಾಡಬೇಕು?

ಹೀಗಾಗಿ ಭೀಮ ತೋರಿದ ಸಮಾಧಿಗಳ ಪೈಕಿ ಎರಡರಲ್ಲಿ ಯಾವುದೇ ಕಳೆಬರ ಸಿಗದ ಕಾರಣ ಆತ ಹೇಳಿದ್ದು ಸುಳ್ಳು ಎಂದು ಪರಿಗಣಿಸಲಾಗದು. ಆತ ಗಮನಿಸಿ ಇಟ್ಟಿದ್ದ ರೆಫರೆನ್ಸ್ ಪಾಯಿಂಟ್ ಅತ್ತಿತ್ತ ಆಗಿರಬಹುದು. ಭೂಮಿ ಸಾಮಾನ್ಯವಾಗಿ ವಿಸ್ತಾರವಾದುದು. ಹಲವು ಪ್ರದೇಶಗಳು ಒಂದೇ ರೀತಿಯಲ್ಲಿ ಕಂಡು ಬಂದಿರುವ ಸಾಧ್ಯತೆ ಕೂಡಾ ಇದೆ. ಅಲ್ಲದೆ ಈಗ ಹತ್ತು ಹನ್ನೆರಡು ವರ್ಷಗಳ ಬಳಿಕ, ಆ ದಟ್ಟವಾದ ಕಾನನದಲ್ಲಿ ತಾನು ಹೂತಿಟ್ಟ ಜಾಗಗಳನ್ನು ಆತ ಹುಡುಕುವುದಾದರೂ ಹೇಗೆ ಅಲ್ಲವೇ? ಒಂದೊಮ್ಮೆ ಅದೇ ಜಾಗ ಅಂತ ಅನ್ನಿಸಿದರೆ ಕೂಡಾ ಕಣ್ಣ ಅಂದಾಜು ತಪ್ಪಿರಳೂ ಬಹುದು. ಕೊಂಚವೂ ಬದಲಾಗದೆ ನಿಖರವಾಗಿ ಜಾಗ ತಿಳಿಸಲು ಹೇಗೆ ಸಾಧ್ಯ?

ಭೀಮನು ಇಡೀ ದೇಶವೇ ಊಹೆ ಮಾಡದಂತಹ ಒಂದು ಅಪರಾಧ ಕೃತ್ಯವನ್ನು ಬಯಲು ಮಾಡುವ ಕುರಿತು ಇದೀಗ ಒಂದು ಸಣ್ಣ ದಾರಿ ತೋರಿದ್ದಾನೆ. ಆ ಜಾಡನ್ನೇ ಹಿಡಿದು ಮುಂದುವರೆದು ಅದರ ನಿಜ ಸ್ವರೂಪವನ್ನು ಬಯಲು ಮಾಡುವುದು ಇದೀಗ ಸರ್ಕಾರ ಮತ್ತು ಪೊಲೀಸರ ಕೆಲಸ. ಇದಕ್ಕೆ ಭೀಮನನ್ನೇ ಅವಲಂಬಿಸಿ ನಡೆಯಬೇಕೆಂದಿಲ್ಲ. ರೆಫರೆನ್ಸ್, ಜಾಗದ ಸ್ಥೂಲ ನೋಟ ಭೀಮನಿಂದ ಸಿಕ್ಕಿದೆ. ಅಷ್ಟಕ್ಕೇ ಸರ್ಕಾರ ಭೀಮನಿಗೆ ಖುಣಿ ಆಗಿರಬೇಕು.

ಇಂದು ಫಾರೆನ್ಸಿಕ್ ವಿಜ್ಞಾನದಲ್ಲಿ ಮುಂದುವರೆದಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಷ್ಟೇ ಕಠಿಣ ಆದರೂ ಕೂಡ ಅವುಗಳನ್ನು ಬೇಧಿಸಿದಂತಹ ಅನೇಕ ಪ್ರಕರಣಗಳನ್ನು ನಾವು ನೋಡಬಹುದು. ಅಂತಯೇ ಇದೀಗ ತನಿಖೆಯ ಹಾದಿ ಕಾರ್ಮಿಕರ ಮೂಲಕ ಅಗೆಸುವುದು, ಜೆಸಿಬಿಯ ಮೂಲಕ ಕೆದಕುವುದನ್ನು ಬಿಟ್ಟು ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನಡೆಯಬೇಕಿದೆ. ಅನೇಕ ಟೆಕ್ನಾಲಜಿಗಳು ಇಂದು ನಮಗೆ ತನಿಖೆಯಲ್ಲಿ ಸಹಾಯ ಮಾಡುತ್ತವೆ. ಭೀಮ ತೋರಿದ ಕಿರು ಹಾದಿಯನ್ನು ತಂತ್ರಜ್ಞಾನದ ಮುಖಾಂತರ ಹಿರಿದು ಮಾಡಿಕೊಂಡು ತನಿಖೆಯ ಹಾದಿ ಸಾಗಬೇಕಿದೆ. ಜಿಯೋಲೊಜಿಸ್ಟ್( Geologist), ಮೈಕ್ರೋ ಬಯಾಲಜಿಸ್ಟ್(Microbiology experts) ಅವರ ಸಾರಥ್ಯವು ಕೂಡ ಇಲ್ಲಿ ಅತ್ಯಗತ್ಯವಾಗಿದೆ. Imaging, scanning ತಂತ್ರಜ್ಞಾನವೂ ಇಲ್ಲಿ ಬೇಕೇ ಬೇಕು. ಇದರ ಬದಲಾಗಿ ಸಮಾಧಿಗಳಲ್ಲಿ ಹೆಣವೆ ಸಿಗಲಿಲ್ಲ ಎಂದ ಕಾರಣಕ್ಕೆ ಭೀಮ ಹೇಳಿದ್ದು ಸುಳ್ಳು ಎಂದು ಅಲ್ಲಗಳೆಯುವುದು ಸರಿಯಲ್ಲ. ಮತ್ತೆ ಹೇಳುತ್ತಿದ್ದೇವೆ: ಇಲ್ಲಿ ಭೀಮ ವಿಶಲ್ ಬ್ಲೋವರ್ ಅಷ್ಟೇ. I Stand with you Bheema….!! (ಉದಯ ಕುಮಾರ್, ಸಂಪಾದಕರು)

ಇದನ್ನೂ ಓದಿ: Trump: ನನ್ನ ಕೋರಿಕೆಯ ಮೇರೆಗೆ ಭಾರತ ಪಾಕ್ ಜತೆಗಿನ ಯುದ್ಧ ಕೊನೆಗೊಳಿಸಿತು: ಪ್ರಧಾನಿ ಮೋದಿ ಭಾಷಣದ ನಂತರ ಟ್ರಂಪ್

Comments are closed.