Dharmasthala : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಕೇಸ್ ಗೆ ಟ್ವಿಸ್ಟ್- ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳಕು!!

Share the Article

Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಸ್ಐಟಿ ತಂಡವು ಅನಾಮಿಕ ವ್ಯಕ್ತಿ ತೋರಿಸಿದ ಸಮಾಧಿಗಳನ್ನು ಅಗೆಯುತ್ತಿದೆ. ಆದರೆ ಈಗ ಎರಡು ಸಮಾಧಿಗಳಲು ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್ ದೊರಕಿದ್ದು ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ತನಿಖೆಯಲ್ಲಿ ತಳುಕು ಹಾಕಿಕೊಂಡಿದೆ.

ಹೌದು, ಅನಾಮಿಕ ದೂರುದಾರ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ತನಿಖಾ ತಂಡದ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಎಸ್‌ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು. ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Dharmasthala : ಶವ ಹೂತಿಟ್ಟ ಪ್ರಕರಣ – 2ನೇ ಸಮಾಧಿಯಲ್ಲೂ ಪತ್ತೆಯಾಗದ ಕಳೇಬರ, ಅಗೆತ ಮುಕ್ತಾಯ!!

Comments are closed.