SIT: ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ ಹೋಗುವ ಸಾಧ್ಯತೆ! ಹಾಗಾದ್ರೆ ಎಸ್‌ಐಟಿ ಕಥೆ ಏನು?

SIT: ಕೇಂದ್ರ ಸರ್ಕಾರದಿಂದ ದೇಶದ ಸುಮಾರು 35 ಐಪಿಎಸ್ ಪೊಲೀಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಬೇಕೆಂದು ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯದಿಂದ ಪ್ರಣವ್ ಮೊಹಂತಿ ಹೆಸರು ಕೂಡ ಇರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ದೇಶವೇ ಬೆಚ್ಚಿ ಬಿದ್ದಿರುವ ಧರ್ಮಸ್ಥಳ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಪ್ರಣಬ್ ಮೊಹಂತಿ ಅವರನ್ನು ಸೇರಿಸಿ ಕೇಂದ್ರ ಸರ್ಕಾರ ಈಗ ಪಟ್ಟಿ ಬಿಡುಗಡೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ.

ಈ ಬಗ್ಗೆ ಮಾಧ್ಯಮದವರು ಗೃಹ ಸಚಿವ ಪರಮೇಶ್ ಅವರನ್ನು ಕೇಳಿದಾಗ ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡುವ ಅವಕಾಶ ಇದೆಯಾ? ಅಥವ ಅವರು ಕೇಂದ್ರದ ಸೇವೆಗೆ ಹೋದರೂ ಎಸ್‌ಐಟಿ ತಂಡವನ್ನು ನಿರ್ವಹಿಸಬಹುದಾ ಎಂಬ ಬಗ್ಗೆ ಕಾನೂನಿನಲ್ಲಿ ಕ್ರಮ ಇದೆಯಾ ಅನ್ನೋದನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ. ಅಥವಾ ಅವರ ಜಾಗಕ್ಕೆ ಇನ್ಯಾರನ್ನಾದರು ಆ ಜಾಗಕ್ಕೆ ತರಬಹುದಾ? ಹಾಗಿದ್ದಾರೆ ಯಾರು ಅನ್ನೋದನ್ನು ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಬೇಡಿಕೆಗಳು ಬಂದ ಮೇಲೆ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ತಂಡವನ್ನು ರಾಜ್ಯ ಸರ್ಕಾರ ರಚಿಸಿತ್ತು. ತದ ನಂತರ ಬಹಳ ಚುರುಕಿನಿಂದ ತನಿಖೆ ಆರಂಭಗೊಂಡಿಒತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಆದೇಶ ಬಂದಿರುವುದು ನಿಜಕ್ಕೂ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ: Prajwal Revanna : ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಆ.1ಕ್ಕೆ ತೀರ್ಪು ಮುಂದೂಡಿದ ನ್ಯಾಯಾಲಯ!
Comments are closed.