Suicide: ಕಡಬ: ಅಣ್ಣನ ಹೊಸ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ!

Suicide: ಕಡಬದ ಕಾಣಿಯೂರು ಸಮೀಪದ ಚಾರ್ವಾಕ ಗ್ರಾಮದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ.

ಕಂಡಿಗ ವೀರಪ್ಪ ಗೌಡರ ಪುತ್ರ ದಾಮೋಧರ ಗೌಡ ಆತ್ಮಹತ್ಯೆ ಮಾಡಿಕೊಂಡವರು. ಆಗಾಗ ಅನಾರೋಗ್ಯ ಒಳಗಾಗುತ್ತಿದ್ದ ಇವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸೋಮವಾರ ಮುಂಜಾವಿನ ವೇಳೆ ಬೇಗ ಎದ್ದು ಯಾರಲ್ಲಿಯೂ ಮಾತನಾಡದೆ ಹೊರ ಹೋಗಿ ತನ್ನ ಸಹೋದರ ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದರ ವೆಂಕಟೇಶ್ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.