Dharmasthala burial Case: ಕೇವಲ ಒಂದೇ ಸ್ಥಳದಲ್ಲಿ ಮಾತ್ರ ಶೋಧ ಕಾರ್ಯ – ಏಕಕಾಲದಲ್ಲಿ ಎರಡು-ಮೂರು ಕಡೆ ಉತ್ಖನನ ಇಲ್ಲ

Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ಉತ್ಪನನ ಕಾರ್ಯಕ್ಕೆ ಚಾಲನೆ ದೊರಕಿದೆ. ಎರಡನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ಆರಂಭಿಸಲು ಎಸ್ ಐ ಟಿ ನಿರ್ಧರಿಸಿದೆ. ಏಕ ಕಾಲದಲ್ಲಿ ಎರಡರಿಂದ ಮೂರು ಸ್ಪಾಟ್‌ಗಳನ್ನು ಅಗೆಯಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು. ಹಾಗೆ ಪುತ್ತೂರು ಎಸಿ ಮಾತ್ರವಲ್ಲದೆ ಬೆಳ್ತಂಗಡಿ ಹಾಗೂ ಮಂಗಳೂರು ಎಸಿ ಅವರ ಸಮ್ಮುಖದಲ್ಲಿ ಒಟ್ಟಿಗೆ ಮೂರು ಸ್ಪಾಟ್‌ಗಳಲ್ಲಿ ಶೋಧ ಕಾರ್ಯ ನಡೆಸಲು ಎಸ್‌ಐಟಿ ತಯಾರಿ ನಡೆಸಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಇದೀಗ ಕೇವಲ ಎರಡನೇ ಮಾರ್ಕಿಂಗ್ ಜಾಗದಲ್ಲಿ ಮಾತ್ರ ಪುತ್ತೂರು ಎಸಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಯುತ್ತಿದೆ.

ಈಗಾಗಲೇ ಶೋಧಕಾರ್ಯ ಆರಂಭಗೊಂಡಿದ್ದು, ಒಂದು ಅಡಿಯಷ್ಟು ಜಾಗವನ್ನು ಅಗೆಯಲಾಗಿದೆ. ಏಕ ಕಾಲದಲ್ಲಿ ಬೇರೆ ಬೇರೆ ಜಾಗದಲ್ಲಿ ಅಗೆಯುವ ಕಾರ್ಯ ಕೈಗೆತ್ತಿಕೊಂಡರೆ ಸರಿಯಾಗಿ ಮೋನಿಟರ್ ಮಾಡಲು ಆಗುವುದಿಲ್ಲ. ಅಲ್ಲದೆ ಅಗೆಯುವ ಸಂಧರ್ಭ ವಿಡಿಯೋ ರೆಕಾರ್ಡ್ ಮಾಡಬೇಕಾಗುತ್ತದೆ. ವೈದ್ಯಕೀಯ, ಎಪ್‌ಎಸ್‌ಎಲ್ ತಂಡಗಳು ಮೂರು ಮೂರು ಜಾಗದಲ್ಲಿ ಓಡಾಡ ಬೇಕಾಗುತ್ತದೆ. ಇಲ್ಲ ಬೇರೆ ಬೇರೆ ತಂಡವನ್ನು ಕರೆಸಬೇಕಾಗುತ್ತದೆ. ಹಾಗಾಗಿ ತನಿಖೆಗೆ ಯಾವುದೇ ಸಾಕ್ಷಿಯ ಕೊರತೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಸದ್ಯ ಒಂದು ಜಾಗದಲ್ಲಿ ಮಾತ್ರ ಶೋಧ ಕಾರ್ಗಯವನ್ನು ಕೈಗೊಳ್ಳಲು ಎಸ್‌ಐಟಿ ತಂಡ ನಿರ್ಧರಿಸಿ, ಕಾರ್ಯ ಆರಂಭಿಸಿದೆ.
ಅಲ್ಲದೆ ಇಂದು ಕೇವಲ ಕಾರ್ಮಿಕರ ಕೈಯಿಂದ ಮಾತ್ರ ಅಗೆಯುವ ಕಾರ್ಯವನ್ನು ಮಾಡುತ್ತಿದ್ದು, ಜೆಸಿಬಿ ಬಳಸದಿರಲು ಸದ್ಯ ನಿರ್ಧರಿಸಿದೆ.
ಇದನ್ನೂ ಓದಿ: Mantralaya: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ: ಸಂಗ್ರಹವಾದ ಭಾರೀ ಮೊತ್ತದ ಕಾಣಿಕೆ?!
Comments are closed.