8th pay commission: 8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತೆ? ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಎಷ್ಟು ಏರಿಕೆಯಾಗುತ್ತೆ?

Share the Article

8th pay commission: 2026ರ ಅಂತ್ಯದಲ್ಲಿ ಜಾರಿಯಾಗಲಿದೆ ಎಂದು ಅಂದಾಜಿಸಲಾಗಿರುವ 8ನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವು ತಿಂಗಳಿಗೆ ₹18,000ದಿಂದ ₹30,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೋಟಕ್ ಇನ್ಸಿಟಿಟ್ಯೂಷನಲ್ ಈಕ್ವಿಟೀಸ್ ವಿಶ್ಲೇಷಿಸಿದೆ. ಈ ಹಿಂದೆ, ನೌಕರರ ವೇತನವು 180%ದಷ್ಟು ಏರಿಕೆಯಾಗಿದೆ, ₹51,000ಕ್ಕೆ ತಲುಪಲಿದೆ ಎಂಬ ವದಂತಿ ಹಬ್ಬಿತ್ತು.

ಇನ್ನು, 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 1.8 ರಷ್ಟು ಆಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಫಿಟ್‌ಮೆಂಟ್ ಅಂಶ ಎಂದರೆ, ಇದು ಪ್ರಸ್ತುತ ವೇತನಗಳನ್ನು ಪರಿಷ್ಕೃತ ವೇತನ ರಚನೆಗೆ ಪರಿವರ್ತಿಸಲು ಬಳಸುವ ಗುಣಕ. 7 ನೇ ವೇತನ ಆಯೋಗವು 2.57 ರ ಅಂಶವನ್ನು ಬಳಸಿದರೆ, 8 ನೇ ವೇತನ ಆಯೋಗವು ಈಗ 1.8 ರ ಗುಣಕವನ್ನು ಅನ್ವಯಿಸುವ ನಿರೀಕ್ಷೆಯಿದೆ. ಹಾಗಾಘಿ ಇದು ಮೂಲ ವೇತನವನ್ನು 18,000 ರೂ.ಗಳಿಂದ 30,000 ರೂ.ಗಳಿಗೆ ಹೆಚ್ಚಿಸುತ್ತದೆ.

ಅನೇಕ ಉದ್ಯೋಗಿಗಳು ಈ ಬಾರಿ ವೇತನ 51,000 ರೂ.ಗಳಿಗೆ ಏರಿಕೆಯಾಗುತ್ತದೆ ಎಂದುನಿರೀಕ್ಷಿಸುತ್ತಿದ್ದರು. ಹಾಗಾಗಿ ಈ ಹೊಸ ಸಾಧ್ಯತೆಯಿಂದ ನೌಕರರು ಬೇಸರಕ್ಕೊಳಗಾಗಬಹುದು ಎಂದು ವರದಿ ಹೇಳಿದೆ. ಅಲ್ಲದೆ ಈ ಹೆಚ್ಚಳ ಕೂಡ ಶೀಘ್ರದಲ್ಲೇ ಆಗುವುದಿಲ್ಲ. 8 ನೇ ವೇತನ ಆಯೋಗವನ್ನು ಜನವರಿ 2025 ರಲ್ಲಿ ಔಪಚಾರಿಕವಾಗಿ ಘೋಷಿಸಲಾಗಿದ್ದರೂ, ಉಲ್ಲೇಖದ ನಿಯಮಗಳನ್ನು (ToR) ಅಂತಿಮಗೊಳಿಸಲಾಗಿಲ್ಲ, ಅಥವಾ ಆಯೋಗದ ಸದಸ್ಯರನ್ನು ನೇಮಿಸಲಾಗಿಲ್ಲ.

ಕೊಟಕ್‌ನ ಪ್ರಕಾರ, ಆಯೋಗದ ವರದಿಯು ತಯಾರಾಗಲು ಇನ್ನು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ನಂತರ ಸರ್ಕಾರದ ಅನುಮೋದನೆ ಮತ್ತು ಅನುಷ್ಠಾನಕ್ಕೆ ಇನ್ನೂ 3 ರಿಂದ 9 ತಿಂಗಳುಗಳು ಬೇಕಾಗುತ್ತದೆ. ಅಂದರೆ ನೌಕರರು 2026 ರ ಅಂತ್ಯದ ಮೊದಲು ಅಥವಾ 2027 ರ ಆರಂಭದಲ್ಲಿ ವೇತನ ಪರಿಷ್ಕರಣೆಯನ್ನು ನಿರೀಕ್ಷಿಸಬಾರದು.

8ನೇ ವೇತನ ಆಯೋಗದ ಅನುಷ್ಠಾನದಿಂದ ಬೊಕ್ಕಸಕ್ಕೆ 2.4 ಲಕ್ಷ ಕೋಟಿ ರೂ.ಗಳಿಂದ 3.2 ಲಕ್ಷ ಕೋಟಿ ರೂ.ಗಳವರೆಗೆ ಹೊರೆಯಾಗುವ ನಿರೀಕ್ಷೆಯಿದೆ, ಇದು GDP ಯ 0.6% ರಿಂದ 0.8% ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಯೋಜನದ ಸಿಂಹಪಾಲು ಕೇಂದ್ರ ಸರ್ಕಾರಿ ಉದ್ಯೋಗಿಗಳ 90% ರಷ್ಟಿರುವ ಗ್ರೇಡ್ ಸಿ ಉದ್ಯೋಗಿಗಳಿಗೆ ಹೋಗುತ್ತದೆ. ಪರಿಷ್ಕೃತ ವೇತನಗಳು ಷೇರು ಮಾರುಕಟ್ಟೆಗಳು, ಬ್ಯಾಂಕ್ ಠೇವಣಿಗಳು ಮತ್ತು ಭೌತಿಕ ಆಸ್ತಿಗಳಲ್ಲಿ ಹೂಡಿಕೆ ಹೆಚ್ಚಳದೊಂದಿಗೆ 1 ರಿಂದ 1.5 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಉಳಿತಾಯಕ್ಕೆ ಕಾರಣವಾಗಬಹುದು ಎಂದು ಕೋಟಕ್ ಯೋಜಿಸಿದೆ.

ಇದನ್ನೂ ಓದಿ: Encounter: ಗಡಿಯಲ್ಲಿ ನುಸುಳುತ್ತಿದ್ದ ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಸೇನೆ!

Comments are closed.